ಗ್ರಾಪಂಕ್ಕೊಂದು ಸಹಕಾರಿ ಬ್ಯಾಂಕು ಸ್ಥಾಪನೆ: ಕೆಎನ್‍ಆರ್

ಕೊರಟಗೆರೆ

   ಬರಪೀಡಿತ ಪ್ರದೇಶದ ರೈತರ ರಕ್ಷಣೆ ಮತ್ತು ಅಭಿವೃದ್ದಿಗಾಗಿ ಕಲ್ಪತರು ಜಿಲ್ಲೆಯ 323ಗ್ರಾಪಂಗಳಿಗೆ 2021-22ರ ಸಾಲಿನ ಆರ್ಥಿಕ ವರ್ಷದ ಮುಕ್ತಾಯಕ್ಕೆ ಸಹಕಾರ ಬ್ಯಾಂಕು ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ ಎಂದು ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.

    ತಾಲೂಕಿನ ಕಸಬಾ ಹೋಬಳಿ ತೀತಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಾರಂಭೋತ್ಸವ ಮತ್ತು ರೈತರಿಗೆ ವಿಶೇಷ ಸಾಲಸೌಲಭ್ಯ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

    ಸಹಕಾರ ಸಂಘದ ಪಿತಾಮಹಾ ಎಸ್.ಎಸ್.ಪಾಟೀನ್ ಮೂಲತಃ ಗದಗ್ ಜಿಲ್ಲೆಯ ಕನಗೀನಹಾಳ ಎಂಬ ಗಾಮದವರು. 1904ರಲ್ಲಿ ಗ್ರಾಮೀಣ ಜನರ ಅಭಿವೃದ್ದಿಗಾಗಿ ಸ್ಥಾಪಿಸಿದ ಸಹಕಾರ ಬ್ಯಾಂಕು ರೈತರ ಪರವಾಗಿ ಕೆಲಸ ಮಾಡುತ್ತೀದೆ. ಬೀದಿ ವ್ಯಾಪಾರಿಗಳ ಅನುಕೂಲಕ್ಕಾಗಿ ತುಮಕೂರು ಜಿಲ್ಲೆಯ 2500ಸಾವಿರ ಜನ ಬೀದಿ ವ್ಯಾಪಾರಿಗಳಿಗೆ ಈಗಾಗಲೇ ಸಾಲಸೌಲಭ್ಯ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

    ಸಿದ್ದರಾಮಯ್ಯನ ಸರಕಾರದ ಅವಧಿಯಲ್ಲಿ ತುಮಕೂರು ಜಿಲ್ಲೆಯ 1ಲಕ್ಷ 29ಸಾವಿರ ರೈತರ 330ಕೋಟಿ ಸಾಲಮನ್ನಾ ಆಗಿದೆ. ಸಮ್ಮೀಶ್ರ ಸರಕಾರದ ಅವಧಿಯಲ್ಲಿ ಗೊಂದಲದ ಸಮಸ್ಯೆ ಸೃಷ್ಟಿಯಾಗಿ ನಮ್ಮ ಡಿಸಿಸಿ ಬ್ಯಾಂಕಿಗೆ 60ಕೋಟಿಗೂ ಅಧಿಕ ಹಣ ಬರಬೇಕಾಗಿದೆ. ಸರಕಾರದ ನಡುವಿನ ಗೊಂದಲದಿಂದ ರೈತರಿಗೆ ಸಮಸ್ಯೆ ಎದುರಾಗಿದೆ. ನಮಗೋಸ್ಕರ ದುಡಿಯುವ ರೈತರ ಪರವಾಗಿ ನಾವು ನಿಲ್ಲಬೇಕಾಗಿದೆ ಎಂದು ಹೇಳಿದರು.

    ನೂರಾರು ಜನರಿಗೆ ಅನ್ನಹಾಕುವ ರೈತನಿಗೆ ಈಗ ಬೇಡುವ ಪರಿಸ್ಥಿತಿ ಬಂದಿದೆ. ಬ್ಯಾಂಕಿನಿಂದ ಸಾಲ ಪಡೆದ ರೈತ ಭೂಮಿಗೆ ಹಾಕ್ತಾನೇ. ಮಳೆಯ ಕೊರತೆಯಿಂದ ನಷ್ಟವಾಗಿ ರೈತ ಸಾಯುವ ಯೋಚನೆ ಮಾಡ್ತಾನೇ. ಸರಕಾರದ ರೈತರಿಗೆ ನೀಡುವ ಆಶ್ವಾಸನೆ ಈಡೇರಿಸುವ ಪ್ರಯತ್ನ ಮಾಡಬೇಕು. ಡಿಸಿಸಿ ಬ್ಯಾಂಕು ರೈತರ ಪರವಾಗಿದೆ. ಡಿಸಿಸಿ ಬ್ಯಾಂಕಿನಲ್ಲಿ ರಾಜಕೀಯಕ್ಕೆ ಜಾಗವಿಲ್ಲ. ಪಕ್ಷಾತೀತವಾಗಿ ರೈತರಿಗೆ ಸಾಲಸೌಲಭ್ಯ ದೂರೆಯಲಿದೆ ಎಂದು ಆಶ್ವಾಸನೆ ನೀಡಿದರು.

    ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಮಾತನಾಡಿ ಬಹುವರ್ಷದ ರೈತರ ಬೇಡಿಕೆಯಾದ ವಿಎಸ್‍ಎಸ್‍ಎನ್ ಶಾಖೆಯ ಪ್ರಾರಂಭದಿಂದ 15ಗ್ರಾಮಗಳಿಗೆ ಅನುಕೂಲ ಆಗಲಿದೆ. ಸಹಕಾರ ರತ್ನ ಕೆ.ಎನ್.ರಾಜಣ್ಣ ಸೂಚನೆಯಂತೆ ಮಹಾಲಕ್ಷ್ಮೀ ಸನ್ನಿಧಾನದಲ್ಲಿ ವಿಶೇಷವಾಗಿ ತೀತಾ ಶಾಖೆಯ 311ಜನ ರೈತರಿಗೆ 1ಕೋಟಿ 31ಲಕ್ಷ ಬೆಳೆ ಸಾಲಸೌಲಭ್ಯ ಯೋಜನೆ ರೂಪಿಸಿದ್ದಾರೆ ಎಂದು ತಿಳಿಸಿದರು.
ಹುಲೀಕುಂಟೆ ಜಿಪಂ ಸದಸ್ಯೆ ಪ್ರೇಮಾ ಮಾತನಾಡಿ ಕೊರೋನಾ ಸಂಕಷ್ಟದಲ್ಲಿ ವೇಳೆ ಸಹಕಾರಿ ರತ್ನ ಮಾಡುತ್ತೀರುವ ಸೇವೆಯಿಂದ ಸಾವಿರಾರು ರೈತರಿಗೆ ಅನುಕೂಲ ಆಗಲಿದೆ. ಸಾಲ ಪಡೆದ ರೈತರು ಹೈನುಗಾರಿಕೆಗೆ ಹೆಚ್ಚಿನ ಆಧ್ಯತೆ ನೀಡುವುದರ ಜೊತೆ ಮಿತವಾಗಿ ಹಣವನ್ನು ವ್ಯವಮಾಡುವ ಯೋಜನೆ ರೂಪಿಸಬೇಕು. ಸಹಕಾರಿ ಬ್ಯಾಂಕು ರೈತರ ಪರವಾಗಿ ಕೆಲಸ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕಾರ್ಯಕ್ರಮದಲ್ಲಿ ತುಮಕೂರು ಡಿಸಿಸಿ ಬ್ಯಾಂಕು ಸಿಇಓ ಕುಬೇಂದ್ರನಾಯ್ಕ, ಗ್ರಾಪಂ ಅಧ್ಯಕ್ಷೆ ಮಂಜುಳ, ಡಿಸಿಸಿ ಬ್ಯಾಂಕು ನಿರ್ದೇಶಕ ಹನುಮಾನ್, ವ್ಯವಸ್ಥಾಪಕ ಲೊಕೇಶ್‍ಕುಮಾರ್, ಮೇಲ್ವಿಚಾರಕ ಬೋರಣ್ಣ, ತೀತಾ ಸಂಘದ ಅಧ್ಯಕ್ಷ ಯತೀಂದ್ರಕುಮಾರ್, ಉಪಾಧ್ಯಕ್ಷೆ ಚೈತ್ರ, ನಿರ್ದೇಶಕ ರವಿವರ್ಮ, ಪ್ರಸನ್ನಕುಮಾರ್, ಗಂಗಮ್ಮ, ಶ್ರೀನಿವಾಸ್, ಮುರಳೀಧರ್, ಜಗದೀಶ್, ನಟರಾಜು, ದೇವರಾಜು, ಲಕ್ಷ್ಮೀಕಾಂತ, ಕಿರಣಕುಮಾರ್ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap