ಕೊರಟಗೆರೆ
ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ದಿಗೆ 17ಕೋಟಿ ಮತ್ತು ಸರಕಾರಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ 2ಕೋಟಿ 10ಲಕ್ಷ ಅನುಧಾನ ಬಿಡುಗಡೆಯಾಗಿದೆಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಿದರು.
ತಾಲೂಕಿನ ಹೊಳವನಹಳ್ಳಿ ಮತ್ತು ಕೋಳಾಲ ಹೋಬಳಿ ವ್ಯಾಪ್ತಿಯ ಹಂಚಿಹಳ್ಳಿ, ಲಿಂಗದವೀರನಹಳ್ಳಿ, ಹೊಸಪಾಳ್ಯ, ನರಸಾಪುರ, ವಮಚಿನಹಳ್ಳಿ, ಯಲಚಗೆರೆ, ತಿಮ್ಮನಾಯಕನಹಳ್ಳಿ, ಮಣುವಿನಕುರಿಕೆ, ಡಿ.ನಾಗೇನಹಳ್ಳಿಯ ಸರಕಾರಿ ಶಾಲೆಗಳ ಕಟ್ಟಡಕಾಮಗಾರಿಗೆ ಶನಿವಾರಗುದ್ದಲಿಪೂಜೆ ನೇರವೇರಿಸಿ ಮಾತನಾಡಿದರು.
ಕೊರಟಗೆರೆಕ್ಷೇತ್ರದ 19ಶಾಲೆಗಳ ಕಟ್ಟಡ ನಿರ್ಮಾಣಕಾಮಗಾರಿಗೆ 2ಕೋಟಿ 10ಲಕ್ಷ ಕಾಮಗಾರಿಗೆ ಚಾಲನೆ ನೀಡಲಾಗಿದೆ. ನಮ್ಮಗ್ರಾಮ ನಮ್ಮರಸ್ತೆಯೋಜನೆಯಡಿ 2ಕೋಟಿ ಮತ್ತು ಪಿಎಂಜಿಎಸ್‍ವೈಯೋಜನೆಯ 1ನೇ ಕಂತು 8ಕೋಟಿ 50ಲಕ್ಷ ಹಾಗೂ 2ನೇ ಕಂತಿನಲ್ಲಿ 6ಕೋಟಿ 50ಲಕ್ಷ ಅನುಧಾನ ಮಂಜೂರುಆಗಿದೆಎಂದು ಮಾಹಿತಿ ನೀಡಿದರು.
ರಾಜ್ಯಮಟ್ಟದ 500ಕೋಟಿ ವೆಚ್ಚದ ಪೊಲೀಸ್‍ತರಬೇತಿಕೇಂದ್ರ ನಿರ್ಮಾಣದ ಹಂತದಲ್ಲಿದೆ. ಗ್ರಾಮೀಣ ಪ್ರದೇಶದ ಬಡವಿದ್ಯಾರ್ಥಿಗಳ ಅನುಕೂಲಕ್ಕಾಗಿ 20ಕೋಟಿ ವೆಚ್ಚದಲ್ಲಿ ಏಕಲವ್ಯ ವಸತಿಶಾಲೆ ನಿರ್ಮಾಣಆಗಿದೆ. ಕುಡಿಯುವ ನೀರು, ಚರಂಡಿ ಮತ್ತುರಸ್ತೆಯ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸುತ್ತೇನೆಎಂದರು.
ಬಯಲುಸೀಮೆ ಪ್ರದೇಶದಕೊರಟಗೆರೆಕ್ಷೇತ್ರಕ್ಕೆ ನೀರಾವರಿಯೋಜನೆಗೆ ನಾನು ಹೆಚ್ಚಿನಆಧ್ಯತೆ ನೀಡಿದ್ದೇನೆ. 13ಸಾವಿರ ಕೋಟಿ ವೆಚ್ಚದ ಎತ್ತಿನಹೊಳೆ ಯೋಜನೆಯೇ ನಮ್ಮಕ್ಷೇತ್ರದರೈತರಿಗೆ ವರದಾನಆಗಲಿದೆ. ಬೈರಗೊಂಡ್ಲು ಸಮೀಪ 5ಸಾವಿರ ಎಕರೇ ಭೂಮಿಯಲ್ಲಿ ನೀರು ಶೇಖರಣೆಯಾಗಿಅಂತರ್ಜಲ ಮಟ್ಟ ಸುಧಾರಣೆಆಗಲಿದೆಎಂದು ಹೇಳಿದರು.
ಕೋಳಾಲ ಜಿಪಂ ಸದಸ್ಯ ಶಿವರಾಮಯ್ಯ ಮಾತನಾಡಿ ಸರಕಾರಿ ಶಾಲೆಗಳ ಅಭಿವೃದ್ದಿಗೆಅನುಧಾನಇಲ್ಲದೇ ನೂರಾರು ಕಟ್ಟಡಗಳು ಶಿಥಿಲವಾಗಿವೆ. ಕೇಂದ್ರ ಮತ್ತುರಾಜ್ಯ ಸರಕಾರ ಸರಕಾರಿ ಶಾಲೆಗಳ ಅಭಿವೃದ್ದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಖಾಸಗಿ ಶಾಲೆಗಳ ಜೊತೆ ಸರಕಾರಿ ಶಾಲೆಗಳ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪೈಪೋಟಿ ನಡೆಸಲು ಹೈಟೇಕ್ ಶಾಲೆಗಳ ನಿರ್ಮಾಣಅಗತ್ಯವಾಗಿದೆಎಂದುಆಗ್ರಹ ಮಾಡಿದರು.
ಹುಲೀಕುಂಟೆ ಜಿಪಂ ಸದಸ್ಯೆ ಪ್ರೇಮಾ ಮಾತನಾಡಿ ಸರಕಾರಿ ಶಾಲೆಗಳ ಕಟ್ಟಡ ಕಾಮಗಾರಿಯಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ. ಕೇಂದ್ರ ಮತ್ತುರಾಜ್ಯ ಸರಕಾರ ಸರಕಾರಿ ಶಾಲೆಗಳ ಅಭಿವೃದ್ದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದರಜೊತೆ ಶೈಕ್ಷಣಿಕಅಭಿವೃದ್ದಿಗೆ ಹೆಚ್ಚಿನಅನುಧಾನ ಬಿಡುಗಡೆ ಮಾಡಬೇಕುಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿತಾಪಂ ಪ್ರಭಾರ ಅಧ್ಯಕ್ಷ ವೆಂಕಟಪ್ಪ, ಸದಸ್ಯ ಬೋರಣ್ಣ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅರಕೆರೆ ಶಂಕರ್, ಅಶ್ವತ್ಥ ನಾರಾಯಣ್, ದಿನೇಶ್, ತಹಶೀಲ್ದಾರ್ ಗೋವಿಂದರಾಜು, ಸಿಪಿಐ ನದಾಫ್, ಬಿಇಓ ಗಂಗಾಧರ್, ತಾಪಂ ಇಓ ಶಿವಪ್ರಕಾಶ್, ಪಿಡ್ಲ್ಯೂಡಿ ಎಇಇ ಗಂಗಾಧರ್, ಪಿಎಸೈ ಮುತ್ತುರಾಜು, ನವೀನ್ ಸೇರಿದಂತೆಇತರರುಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ