ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ಸರ್ಕಾರದಿಂದ ರೇಟ್ ಫಿಕ್ಸ್!!

ಬೆಂಗಳೂರು :

rd-lab – Internet of Things applications

     ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ಅಲ್ಲದೇ, ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ದರ ನಿಗಧಿ ಮಾಡಿ ಅಧಿಕೃತ ಆದೇಶ ನೀಡಿದೆ.

     ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದ್ದು, ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಮತ್ತೊಂದೆಡೆ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ ಈಗ ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ದರ ನಿಗಧಿ ಮಾಡಿದೆ.

ಸರ್ಕಾರಿ ಆಸ್ಪತ್ರೆಗಳಿಂದ ರೆಫರ್ ಮಾಡಿದ್ರೆ ಖಾಸಗೀ ಆಸ್ಪತ್ರೆಯ ದರ ಪಟ್ಟಿ

  • ಜನರಲ್ ವಾರ್ಡ್ – ರೂ.5,200
  • ಹೆಚ್ ಡಿ ಯು – ರೂ.7,000
  • ಐಸೋಲೇಷನ್ ವಿತ್ ಔಟ್ ವೆಂಟಿಲೇಷನ್ – ರೂ.8,500
  • ಐಸೋಲೇಷನ್ ವಿತ್ ವೆಂಟಿಲೇಷನ್ – ರೂ.10,000

ನೇರವಾಗಿ ಕೊರೋನಾ ಸೋಂಕಿತರು ಖಾಸಗೀ ಆಸ್ಪತ್ರೆಗೆ ದಾಖಲಾದಾಗ ದರಪಟ್ಟಿ

  • ಜನರಲ್ ವಾರ್ಡ್ – ರೂ.10,000
  • ಹೆಚ್ ಡಿ ಯು – ರೂ.12,000
  • ಐಸೋಲೇಷನ್ ವಿತ್ ಔಟ್ ವೆಂಟಿಲೇಷನ್ – ರೂ.15,000
  • ಐಸೋಲೇಷನ್ ವಿತ್ ಔಟ್ ವೆಂಟಿಲೇಷನ್ – ರೂ.25,000

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link