ಚಿಕ್ಕನಾಯಕನಹಳ್ಳಿ: ಒಂದೇ ದಿನ 16 ಮಂದಿಗೆ ಸೋಂಕು

ಚಿಕ್ಕನಾಯಕನಹಳ್ಳಿ:

     ತಾಲ್ಲೂಕಿನಲ್ಲಿ ಬುಧವಾರ 16 ಮಂದಿಗೆ ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಕಾಡೇನಹಳ್ಳಿಯ ಒಂದು ಕುಟುಂಬದಲ್ಲಿ ಮೂವರಿಗೆ, ಆಶ್ರೀಹಾಳ್ ನಲ್ಲಿ ಐದು ವರ್ಷದ ಮಗುವಿಗೆ, ಗೋಡೆಕೆರೆ ಗೊಲ್ಲರಹಟ್ಟಿಯಲ್ಲಿ ಎಂಟು ಹಾಗೂ ಪಟ್ಟಣದಲ್ಲಿ ಒಬ್ಬರಿಗೆ ಪ್ರಕರಣ ಕಂಡುಬಂದಿದ್ದು ತಾಲೂಕಿನಲ್ಲಿ 25 ಸಕ್ರೀಯಾ ಪ್ರಕರಣ ಕಂಡು ಬಂದದೆ, ಈ ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ.

     ಕಾಡೇನಹಳ್ಳಿಯಲ್ಲಿ ತಾತಾ, ಅಜ್ಜಿ, ಮೊಮ್ಮಗನಿಗೆ ಪಾಸಿಟಿವ್ ಬಂದಿದೆ, ಕಾಡೇನಹಳ್ಳಿ ಒಂದರಲ್ಲಿ ಬುಧವಾರ 6 ಜನರಿಗೆ ಪತ್ತೆಯಾಗಿದೆ, ಈ ಗ್ರಾಮದಲ್ಲಿ ಒಟ್ಟು 9 ಜನರಿಗೆ, ಗೋಡೆಕೆರೆ ಗೊಲ್ಲರಹಟ್ಟಿಯಲ್ಲಿ 9 ಜನರಿಗೆ ದೃಢವಾಗಿದೆ. ಬುಳ್ಳೇನಹಳ್ಳಿಯಲ್ಲಿನ ಪ್ರಕರಣದಲ್ಲಿ ಮಹಿಳೆ ಗುಡ್ಡ ಒಂದರ ಮೇಲೆ ವಾಸಿಸುತ್ತಿದ್ದು, ಆಕೆ ಜನರ ಸಂಪರ್ಕಕ್ಕೆ ಬರುವುದೇ ಕಡಿಮೆ, ಆಕೆಗೆ ಟ್ರಾವೆಲ್ ಹಿಸ್ಟರಿಯೂ ಇಲ್ಲ ಆದರೂ ಆಕೆಗೆ ಪಾಸಿಟಿವ್ ಬಂದಿರುವುದು ಗ್ರಾಮಸ್ಥರಲ್ಲಿ ಆಶ್ಚರ್ಯ ತಂದಿದೆ.

    ಪಟ್ಟಣದ ಬನಶಂಕರಿ ದೇವಾಲಯದ ಬಳಿಯ ಮನೆಯೊಂದರ ಮಹಿಳೆಯೊಬ್ಬರಿಗೆ ಪ್ರಕರಣ ದಾಖಲಾಗಿದೆ, ಮಹಿಳೆಯ ಪತಿ ಬುದ್ದಿಮಂದ್ಯನಾಗಿದ್ದು ಅವರನ್ನು ಹುಡುಕಬೇಕಾಗಿದೆ. ಈ ಮನೆಯಲ್ಲಿ ಮೂವರು ವಾಸಿಸುತ್ತಿದ್ದು ಪಾಸಿಟಿವ್ ಪ್ರಕರಣ ದಾಖಲಾಗಿರುವ ಇನ್ನೊಬ್ಬರಿಗೆ ನೆಗೆಟಿವ್ ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link