ಮಿಡಿಗೇಶಿ
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಮ ಮಾರುತಿ ನಗರದ ವೆಂಕಟೇಶ್ ಎನ್ನುವವರ ಮನೆಯ ಬೀಗ ಹೊಡೆದು, ಬೀರುವಿನಲ್ಲಿದ್ದ ಸುಮಾರು 56.50 ಗ್ರಾಂ ಚಿನ್ನಾಭರಣಗಳು, ಒಂದು ಜೊತೆ ಬೆಳ್ಳಿಯ ಕಾಲು ಚೈನು ಹಾಗೂ 16,000 ರೂ. ನಗದು ಹಣವನ್ನು ಜು. 8 ರ ಮಧ್ಯರಾತ್ರಿ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ. ವೆಂಕಟೇಶ್ ಹಾಗೂ ಅವರ ಪತ್ನಿ, ಮಗ ಸೇರಿದಂತೆ ಮೂವರು ಮಿಡಿಗೇಶಿಯ ಚಿಕ್ಕಮ್ಮರ ಮನೆಗೆ ಹೋಗಿದ್ದರು ಎನ್ನಲಾಗಿದೆ.
ಜು. 9 ರಂದು ಮುಂಜಾನೆ 5 ಗಂಟೆಗೆ ವೆಂಕಟೇಶ್ ಬಂದು ನೋಡಿದಾಗ ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ತಿಳಿದಿರುತ್ತದೆ. ವೆಂಕಟೇಶ್ ಮಿಡಿಗೇಶಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಠಾಣಾಧಿಕಾರಿ ಹನುಮಂತರಾಯಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಪೋಲೀಸ್ ಉಪಾಧೀಕ್ಷಕ ಪ್ರವೀಣ್ ಎಂ. ಭೇಟಿ ನೀಡಿರುತ್ತಾರೆ.
ಕಳ್ಳತನವಾಗಿರುವ ಚಿನ್ನಾಭರಣಗಳು ಹಾಗೂ ನಗದು ವಿವರ
16 ಗ್ರಾಂ ತೂಕದ ಬಂಗಾರದ ಸರ, 10 ಗ್ರಾಂ ಬಂಗಾರದ ಸರ, 7 ಗ್ರಾಂ. ಬಂಗಾರದ ಸರ, ನಾಲ್ಕು ಬಂಗಾರದ ಕೈ ಬಳೆಗಳು, ಒಂದು ಉಂಗುರ ಮತ್ತು ಒಂದು ಜೊತೆ ಬೆಳ್ಳಿಯ ಕಾಲು ಚೈನು ಹಾಗೂ 16,000 ರೂ. ನಗದು. ಒಟ್ಟು ಚಿನ್ನಾಭರಣ 56.50 ಗ್ರಾಂಗಳಾಗಿದ್ದು, ನಗದು ಸೇರಿದಂತೆ ಒಟ್ಟು ಮೌಲ್ಯ ಒಂದು ಲಕ್ಷದ ಮೂವತ್ತು ಸಾವಿರದ ಐದು ನೂರು ರೂಪಾಯಿಗಳೆಂದು ಅಂದಾಜಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








