ತುಮಕೂರು
ಶುಕ್ರವಾರ 18 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 630ಕ್ಕೆ ಏರಿಕೆಯಾಗಿದೆ. 18 ಪ್ರಕರಣಗಳ ಪೈಕಿ ತುಮಕೂರು ತಾಲ್ಲೂಕಿನಲ್ಲಿ 7, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 5 ಪ್ರಕರಣಗಳು ಕಂಡುಬಂದಿವೆ. ಕುಣಿಗಲ್ ತಾಲ್ಲೂಕಿನಲ್ಲಿ 3, ತಿಪಟೂರು, ತುರುವೇಕೆರೆ, ಗುಬ್ಬಿ ತಾಲ್ಲೂಕುಗಳಲ್ಲಿ ತಲಾ ಒಂದೊಂದು ಪ್ರಕರಣಗಳು ವರದಿಯಾಗಿವೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ ವರದಿಯಾಗಿರುವ ಒಟ್ಟು 630 ಸೋಂಕು ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನಲ್ಲಿ ಅತಿಹೆಚ್ಚು ಪ್ರಕರಣಗಳಿವೆ, ಇದೂವರೆಗೆ ತುಮಕೂರು ತಾ. 275, ಪಾವಗಡ ತಾ. 60, ಶಿರಾ 54, ಮಧುಗಿರಿ ತಾ. 53, ಚಿಕ್ಕನಾಯಕನಹಳ್ಳಿ ತಾ. 41, ಕೊರಟಗೆರೆ ತಾ. 34, ಗುಬ್ಬಿ ತಾ. 32. ಕುಣಿಗಲ್ ತಾ. 33, ತಿಪಟೂರು ತಾ. 25, ತುರುವೇಕೆರೆ ತಾ. 23 ಪ್ರಕರಣ ವರದಿಯಾಗಿವೆ.
ತುಮಕೂರು ನಗರದ ಪಿ.ಹೆಚ್.ಕಾಲೋನಿಯ 45 ವರ್ಷದ ಮಹಿಳೆ, 30 ವರ್ಷದ ಪುರುಷ ಡಿಎಆರ್ ಪೊಲೀಸ್, 56 ವರ್ಷದ ಪುರುಷ ಡಿಎಆರ್ ಪೊಲೀಸ್, 53 ವರ್ಷದ ಪುರುಷ ಕೆಎಸ್‍ಆರ್‍ಪಿ ಪೊಲೀಸ್, 39 ವರ್ಷದ ಪುರುಷ ಕೆಎಸ್‍ಆರ್‍ಪಿ ಪೊಲೀಸ್, 40 ವರ್ಷದ ಪುರುಷ ಕೆಎಸ್‍ಆರ್‍ಪಿ ಪೊಲೀಸ್, 48 ವರ್ಷದ ಪುರುಷ ಕೆಎಸ್‍ಆರ್‍ಪಿ ಪೊಲೀಸ್, ದೇವರಾಯಪಟ್ಟಣದ 30 ವರ್ಷದ ಗಂಡಸು, ಇಸ್ಮಾಯಿಲ್ ನಗರದ 42 ವರ್ಷದ ಗಂಡಸು, ಎಸ್‍ಐಟಿ 16ನೇ ಕ್ರಾಸ್‍ನ 36 ವರ್ಷದ ಹೆಂಗಸು, 49 ವರ್ಷದ ಹೆಂಗಸು, ಕೃಷ್ಣಾನಗರದ 45 ವರ್ಷದ ಗಂಡಸು, ಶಿರಾಗೇಟ್‍ನ 47 ವರ್ಷದ ಪುರುಷ ಎಸ್‍ಬಿಐ ಸಿಬ್ಬಂದಿ, ಬನಶಂಕರಿಯ 45 ವರ್ಷದ ಪುರುಷ, 62 ವರ್ಷದ ಪುರುಷ, 30 ವರ್ಷದ ಹೆಂಗಸು, ಕಾರಾಗೃಹದ 69 ವರ್ಷದ ಗಂಡಸು, ಉಪ್ಪಾರಹಳ್ಳಿಯ 43 ವರ್ಷದ ಗಂಡಸು, ಹನುಮಂತಪುರ 3ನೇ ಕ್ರಾಸಿನ 55 ಪುರುಷ, ಸಪ್ತಗಿರಿ ಬಡಾವಣೆಯ 36 ವರ್ಷದ ಗಂಡಸು, ಎಸ್.ಎಸ್.ಪುರಂನ 50 ವರ್ಷದ ಗಂಡಸು, ಶ್ರೀನಗರದ 24 ವರ್ಷದ ಗಂಡಸು, 28 ವರ್ಷದ ಕೆಎಸ್‍ಆರ್‍ಟಿಸಿ ಸಿಬ್ಬಂದಿ, 60 ವರ್ಷದ ಗಂಡಸು, 40 ವರ್ಷದ ಗಂಡಸು, ವಿದ್ಯಾನಗರದ 40 ವರ್ಷದ ಪುರುಷ, ತುಮಕೂರು ತಾಲ್ಲೂಕಿನ ರಾಮನಹಳ್ಳಿಯ 42 ವರ್ಷದ ಗಂಡಸು, ಗೂಳೂರಿನ 43 ವರ್ಷದ ಮಹಿಳೆ, ಮಲ್ಲಸಂದ್ರದ 35 ವರ್ಷದ ಪುರುಷ, ಹೆಗ್ಗೆರೆಯ 33 ವರ್ಷದ ಮಹಿಳೆಗೆ ಸೋಂಕು ಖಚಿತವಾಗಿದೆ.
ತುರುವೇಕೆರೆ
ತುರುವೇಕೆರೆ ಪಟ್ಟಣದ 11 ವರ್ಷದ ಬಾಲಕಿ, ತಾಲ್ಲೂಕಿನ ಮಾರಸಂದ್ರದ 32 ವರ್ಷದ ಗಂಡಸು, ಗೊಟ್ಟಿಕೆರೆಯ 35 ವರ್ಷದ ಮಹಿಳೆ, ದೊಡ್ಡಮಾರನಹಳ್ಳಿಯ 26 ವರ್ಷದ ಯುವಕ, ಸೀಗೆಹಳ್ಳಿಯ 45 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ತಿಪಟೂರು
ತಿಪಟೂರು ನಗರದ ರಾಘವೇಂದ್ರ ದೇವಸ್ಥಾನ ರಸ್ತೆಯ 50 ವರ್ಷದ ಗಂಡಸು, ಪೈ ಹೋಟೆಲ್ ಹತ್ತಿರದ 34 ವರ್ಷದ ಮಹಿಳೆ, 14 ವರ್ಷದ ಬಾಲಕ, ಗಂಗನಘಟ್ಟದ 36 ವರ್ಷದ ಗಂಡಸು, ಗೋವಿನಪುರದ 20 ವರ್ಷದ ಯುವಕನಿಗೆ ಪಾಸಿಟೀವ್ ಬಂದಿದೆ.
ಪಾವಗಡ
ಪಾವಗಡ ಪಟ್ಟಣದ ಶಾಂತಿನಗರದ 41 ವರ್ಷದ ಗಂಡಸು, ಬಾಪೂಜಿ ಶಾಲೆ ಹಿಂಭಾಗದ 36 ವರ್ಷದ ಗಂಡಸು, ತಾಲ್ಲೂಕಿನ ಕೃಷ್ಣಗಿರಿಯ 35 ವರ್ಷದ ಪುರುಷ, ಕಣಿವೇನಹಳ್ಳಿಯ 25ವರ್ಷದ ಯುವಕನಿಗೆ ಕೊರೊನಾ ವೈರಸ್ ವರದಿಯಾಗಿದೆ.
ಕುಣಿಗಲ್
ಕುಣಿಗಲ್ ಪಟ್ಟಣದ 36 ವರ್ಷದ ಗಂಡಸು, ತಾಲ್ಲೂಕಿನ ಯಡಿಯೂರಿನ 52 ವರ್ಷದ ಪುರುಷರಿಗೆ ಸೋಂಕು ಕಾಣಿಸಿದೆ.
ಚಿಕ್ಕನಾಯಕನಹಳ್ಳಿ
ಚಿಕ್ಕನಾಯಕನಹಳ್ಳಿ ತಾಲ್ಲೂಕು ಗೋಡೇಕೆರೆ ಗೊಲ್ಲರಹಟ್ಟಿಯ 46 ವರ್ಷದ ಮಹಿಳೆ, ಮತ್ತಿಗಟ್ಟದ 48 ವರ್ಷ ಗಂಡಸಿಗೆ ಪಾಸಿಟೀವ್ ಖಚಿತವಾಗಿದೆ.ಮಧುಗಿರಿ ತಾಲ್ಲೂಕು ಗೋಪಗೊಂಡನಹಳ್ಳಿಯ 26 ವರ್ಷದ ಯುವಕ, ಶಿರಾ ತಾಲ್ಲೂಕು ಬ್ರಹ್ಮಸಂದ್ರದ 27 ವರ್ಷದ ಮಹಿಳೆ ಹಾಗೂ ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿಯ 70 ವರ್ಷದ ಗಂಡಸಿಗೆ ಸೋಂಕು ದೃಢಪಟ್ಟಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ