ಮಧುಗಿರಿ
ಇತ್ತೀಚೆಗೆ ಮೃತಪಟ್ಟಿದ್ದ ವೃದ್ದ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿದ್ದಂತಹ ಒಂದೇ ಕುಟುಂಬದ ನಾಲ್ವರಿಗೆ ಕೊರೊನಾ ಸೋಂಕು ಧೃಡ ಪಟ್ಟಿದ್ದು ಇಂದೂ 9 ಪ್ರಕರಣಗಳು ಚಿಕಿತ್ಸೆಗೆ ದಾಖಲಾಗಿವೆ.
ತಾಲ್ಲೂಕಿನಲ್ಲಿ 9 ಮಂದಿಗೆ ಕೊರೊನಾ ಪಾಸಿಟಿವ್ ಇರುವ ಬಗ್ಗೆ ಶನಿವಾರ ಧೃಡಪಡಿಸಲಾಗಿದ್ದು ಸೋಂಕಿತರನ್ನು ಕೋವಿಡ್ 19 ಕೇರ್ ಸೆಂಟರ್ ಗೆ ಈಗಾಗಲೇ ದಾಖಲು ಮಾಡಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಒಟ್ಟು 93 ಪ್ರಕರಣಗಳಲ್ಲಿ ಇನ್ನೂ 46 ಸಕ್ರಿಯ ಪ್ರಕರಣಗಳಿದ್ದು ಇಂದೂ ಆಸ್ಪತ್ರೆ ಯಿಂದ 6 ಜನರು ಕೊರೊನಾ ಸೊಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ತಾಲ್ಲೂಕಿನ ಮಿಡಗೇಶಿ ಹೋಬಳಿಯ ಕ್ಯಾತಗೊಂಡನಹಳ್ಳಿ ಗ್ರಾಮದ ವಾಸಿ 42 ವರ್ಷದ ಪುರುಷ, ಪಟ್ಟಣದ ಟಿವಿವಿ ಕಾಲೇಜು ಮುಂಭಾಗದ ನಿವಾಸಿ 20 ವರ್ಷದ ಯುವಕ, ಚೌಡೇಶ್ವರಿ ಗುಡಿ ಬೀದಿಯ 77 ವರ್ಷದ ವೃದ್ದ, ಬಾರ್ ಲೈನ್ ರಸ್ತೆಯ ಸಮೀಪವಿರುವ ಜೈನ ಬಸದಿ ಗುಡಿಯ ಮುಂಭಾಗದ ನಿವಾಸಿಗಳಾದ 65 ವರ್ಷದ ವೃದ್ಧ, 5 ವರ್ಷದ ಬಾಲಕಿ ಹಾಗೂ ಆಕೆಯ 29 ವರ್ಷದ ತಾಯಿ, ಶ್ರೀನಿವಾಸ ಬಡಾವಣೆಯ ನಿವಾಸಿಗಳಾದ 3.6 ವರ್ಷದ ಮಗು ಹಾಗೂ 35 ವರ್ಷದ ಆತನ ತಾಯಿ , 21 ವರ್ಷದ ಯುವಕನಿಗೆ ಸೋಂಕು ಧೃಡಪಟ್ಟಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
