ತುಮಕೂರು: ಹೊಸದಾಗಿ 135 ಮಂದಿಗೆ ಕೊರೋನ

ತುಮಕೂರು :

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಬಿಡುಗಡೆ ಮಾಡಿರುವ ಇಂದಿನ ಕೊರೋನವೈರಸ್ ಪ್ರಕರಣದಲ್ಲಿ ಹೊಸದಾಗಿ 135 ಮಂದಿಗೆ ಕೋವಿಡ್ – 19 ದೃಢಪಟ್ಟಿದೆ ಎಂದು ಡಿಎಚ್ಒ ಡಾ. ನಾಗೇಂದ್ರಪ್ಪ ಮಾಹಿತಿಯನ್ನು ನೀಡಿದ್ದಾರೆ.

    ಇಂದು ಬಿಡುಗಡೆ ಮಾಡಿರುವ ವರದಿಯಲ್ಲಿ 54 ಜನರು ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇದರಿಂದಾಗಿ ಒಟ್ಟು ಬಿಡುಗಡೆ ಹೊಂದಿರುವವರ ಸಂಖ್ಯೆ 971ಕ್ಕೆ ಏರಿಕೆ ಕಂಡಿದೆ ಹಾಗೂ 3 ಸಾವಾಗಿದ್ದು ಹೊಸ ಪ್ರಕರಣಗಳು 135 ಸೇರಿ 888 ಜನರಿಗೆ ಜಿಲ್ಲೆಯ ಕೋವಿಡ್ – 19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

     ಐಸಿಯುನಲ್ಲಿ 08 ಮಂದಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1916ಕ್ಕೆ ಏರಿಕೆಯಾಗಿದೆ ಎಂದರು.ತುಮಕೂರು ಜಿಲ್ಲೆಯಲ್ಲಿ ಒಟ್ಟಾರೆಯಾಗಿ 37026 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ, ಅದರಲ್ಲಿ 33577 ಮಾದರಿಗಳು ನೆಗೆಟಿವ್ ಎಂದು ವರದಿಯಾಗಿದೆ

 

Recent Articles

spot_img

Related Stories

Share via
Copy link
Powered by Social Snap