ಜೆಸಿಟಿಯುನಿಂದ ಭಾರತ ಉಳಿಸಿ ಆಂದೋಲನ

ದಾವಣಗೆರೆ:

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ಕಾರ್ಮಿಕ ಮತ್ತು ರೈತ ವಿರೋಧಿ ನೀತಿ ಖಂಡಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು)ಯ ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ನಗರದಲ್ಲಿ ಸೋಮವಾರ ಭಾರತ ರಕ್ಷಿಸಿ ಆಂದೋಲನ ನಡೆಸಿದರು.

    ಇಲ್ಲಿನ ಮಹಾನಗರ ಪಾಲಿಕೆಯ ಆವರಣದಲ್ಲಿರುವ ಹುತಾತ್ಮ ಸ್ಮಾರಕದ ಎದುರು ಜಮಾಯಿಸಿದ ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ನೆರಳು ಬೀಡಿ ಕಾರ್ಮಿಕರ ಸಂಘಟನೆ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ ಮತ್ತು ರೈತ ವಿರೋಧಿ ನೀತಿ ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಎಐಟಿಯುಸಿ ಮುಖಂಡ ಎಚ್.ಕೆ.ರಾಮಚಂದ್ರಪ್ಪ, ಉಭಯ ಸರ್ಕಾರಗಳು ವಿಧಾನಸಭೆ ಮತ್ತು ಸಂಸತ್ ಅಧಿವೇಶನಗಳಲ್ಲಿ ಚರ್ಚಿಸದೆಯೇ ವಿವಿಧ ಸುಗ್ರಿವಾಜ್ಞೆಗಳನ್ನು ಹೊರಡಿಸುವ ಮೂಲಕ ಅಪ್ರಜಾತಾಂತ್ರಿಕವಾಗಿ ಕಾರ್ಮಿಕ ಮತ್ತು ರೈತ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಕಾರ್ಖಾನೆಗಳ ಕಾಯ್ದೆ, ಕೈಗಾರಿಕಾ ವಿವಾದ ಕಾಯ್ದೆ, ಗುತ್ತಿಗೆ ಕಾರ್ಮಿಕರ(ನಿಯಂತ್ರಣ ಮತ್ತು ನಿಷೇಧ) ಕಾಯ್ದೆಗಳ ಮಾದರಿ ಸ್ಥಾಯಿ ಆದೇಶಗಳ ನಿಗದಿತ ಅವಧಿಯ ಕೆಲಸ ಅಳವಡಿಸಲು ತರಲಾದ ಪ್ರಗತಿ ವಿರೋಧಿ ತಿದ್ದುಪಡಿಗಳು, ವ್ಯತ್ಯಾಸ ತುಟ್ಟಿಭತ್ಯೆ ಮುಂದೂಡುವಿಕೆ ಆದೇಶಗಳನ್ನು ಸರ್ಕಾರದ ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿದರು.

   ಸಿಐಟಿಯು ಮುಖಂಡ ಕೆ.ಮಹಾಂತೇಶ್ ಮಾತನಾಡಿ, ಭೂ ಸಂಬಂಧಿ ಕಾನೂನು, ಎಪಿಎಂಸಿ ಕಾಯ್ದೆ, ಅಗತ್ಯ ಸಾಮಗ್ರಿ ಕಾಯ್ದೆಗಳಿಗೆ ತಿದ್ದುಪಡಿ ತರಲು ಹೊರಡಿಸಿದ ಸುಗ್ರೀವಾe್ಞÉಯನ್ನು ರದ್ದು ಗೊಳಿಸಬೇಕು. ಮುಂದಿನ 6 ತಿಂಗಳ ಅವಧಿಗೆ ಆದಾಯ ತೆರಿಗೆ ಪಾವತಿಸದ ಕುಟುಂಬಗಳಿಗೆ ಪ್ರತಿ ತಿಂಗಳು 7500 ರು. ಪಾವತಿಸುವ ಮೂಲಕ ಸಾರ್ವತ್ರಿಕ ಅಗತ್ಯ ಮೂಲ ಆದಾಯ ಯೋಜನೆ ಜಾರಿಗೊಳಿಸಿ, ದುಡಿಯುವ ಜನರ ನೈಜ ವರಮಾನ ಹಾಗೂ ಅನುಭೋಗ ವೆಚ್ಚವನ್ನು ಹೆಚ್ಚಿಸಿ, ದೇಶದ ಆರ್ಥಿಕ ವ್ಯವಸ್ಥೆಗೆ ಪುನಶ್ಚೇತನ ನೀಡಲಿ ಎಂದು ಒತ್ತಾಯಿಸಿದರು.

       ಈಗಿರುವ ಕಾರ್ಮಿಕ ಕಾನೂನುಗಳು ಅನುಷ್ಟಾನಕ್ಕೆ ಅರ್ಹವಲ್ಲವೆಂದು ಕಾರ್ಮಿಕ ಇಲಾಖೆ ಭಾವಿಸಿದಂತಿದೆ. ಮಾಲೀಕರ ವಿರುದ್ಧ ಕೈಗಾರಿಕಾ ವಿವಾದ, ದೂರುಗಳನ್ನು ಅಂಗೀಕರಿಸುವಲ್ಲಿ ವಿಳಂಬ, ಸರಿಯಾದ ತನಿಖೆ ಇಲ್ಲದೇ ಕಾರ್ಮಿಕರ ಸಮಸ್ಯೆ ಆಲಿಸದ ಲೇಆಫ್, ರಿಟೈರ್‍ಮೆಂಟ್, ಮುಚ್ಚುವಿಕೆಗಳಿಗೆ ಶೀಘ್ರವೇ ಅನುಮತಿಯ  ಇತ್ಯಾದಿಗಳ ಮೂಲ ಕಾರ್ಮಿಕ ಇಲಾಖೆ ಕಾನೂನು ಜಾರಿಯಲ್ಲಿ ಕಾರ್ಮಿಕ ಇಲಾಖೆ ಕಾನೂನು ಜಾರಿಯಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ಖಂಡನೀಯವಾಗಿದೆ ಎಂದು ಕಿಡಿಕಾರಿದರು.

     ಎಐಯುಟಿಯುಸಿ ಮುಖಂಡ ಮಂಜುನಾಥ ಕೈದಾಳೆ ಮಾತನಾಡಿ, ನೂತನ ಶಿಕ್ಷಣ ನೀಡಿ, ನರೇಗಾ, ಸಾರ್ವತ್ರಿಕ ಮೂಲ ವರಮಾನ ಯೋಜನೆ, ನಿರುದ್ಯೋಗ ಭತ್ಯೆ, ನಗರ ಪ್ರದೇಶಕ್ಕೂ ಖಾತರಿ ವಿಸ್ತರಣೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಲು ಸಂಸದು, ರಾಜ್ಯಸಭೆಗಳ ವಿಶೇಷ ಅಧಿವೇಶನ ಕರೆಯಬೇಕು. ಚಳವಳಿ ಕಾರ್ಯಕರ್ತರ ಪ್ರಜಾಪ್ರಭುತ್ವದ ಹಕ್ಕುಗಳ ಮೇಲಿನ ದಾಳಿ ತಕ್ಷಣವೇ ನಿಲ್ಲಿಸಬೇಕೆಂದು ಒತ್ತಾಯಿಸಿದರು.

    ಆಂದೋಲನದ ನೇತೃತ್ವವನ್ನು ವಿವಿಧ ಸಂಘಟನೆಗಳ ಮುಖಂಡರಾದ ಆನಂದರಾಜ, ಆವರಗೆರೆ ಎಚ್.ಜಿ.ಉಮೇಶ, ತಿಪ್ಪೇಸ್ವಾಮಿ ಅಣಬೇರು, ಆವರಗೆರೆ ಚಂದ್ರು, ಕೆ.ಎಚ್.ಆನಂದರಾಜು, ಆವರಗೆರೆ ವಾಸು, ಐರಣಿ ಚಂದ್ರು, ರಂಗನಾಥ, ಜಬೀನಾ ಖಾನಂ ಸೇರಿದಂತೆ ಹಲವರು ವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap