ವಾಷಿಂಗ್ಟನ್
ವಿಶ್ವದ ದೊಡ್ಡಣ್ಣ ಎಂಬ ಖ್ಯಾತಿ ಪಡೆದಿರುವ ಅಮೆರಿಕದ ಚುಕ್ಕಾಣಿ ಹಿಡಿಯಲು ನಡೆಯುವ ಅಧ್ಯಕ್ಷೀಯ ಚುನಾವಣೆಯ ರಣಕಣ ದಿನೇದಿನೆ ರಂಗೇರುತ್ತಿದ್ದು, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬಿಡನ್ ಅವರು ಭಾರತೀಯ ಮೂಲದ ಸೆನೆಟರ್ ಕಮಲಾ ಹ್ಯಾರಿಸ್ ಅವರನ್ನು ತಮ್ಮ ಉಪಾಧ್ಯಕ್ಷೆ ಅಭ್ಯರ್ಥಿ ಎಂದು ಘೋಷಿಸಿದ್ದಾರೆ.ಈ ಮೂಲಕ ಭಾರತೀಯ ಮೂಲದ ಮೊದಲ ಏಷ್ಯಾ ಅಮೆರಿಕನ್ ಕಪ್ಪು ವರ್ಣದ ಮಹಿಳೆ ಅಮೆರಿಕದ ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧಿಸುವ ಮೂಲಕ ಇತಿಹಾಸ ನಿರ್ಮಿಸುತ್ತಿದ್ದಾರೆ.
ಅಧ್ಯಕ್ಷೀಯ ಅಭ್ಯರ್ಥಿ ಡೆಮಾಕ್ರಟಿಕ್ ಪಕ್ಷದ ಜೊ ಬಿಡನ್ ಟ್ವೀಟ್ ಮೂಲಕ ಮತ್ತು ಬೆಂಬಲಿಗರಿಗೆ ಬರೆದ ಇ ಮೇಲ್ ನಲ್ಲಿ ಕಮಲಾ ಹ್ಯಾರಿಸ್ ಅವರ ಸ್ಪರ್ಧೆಯನ್ನು ಘೋಷಿಸಿದ್ದು ಇದು ಮುಂದಿನ ನವೆಂಬರ್ ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆ ಮೇಲೆ ಮಾತ್ರವಲ್ಲದೆ ಡೆಮಾಕ್ರಟಿಕ್ ಪಕ್ಷದ ಮೇಲೆ ಸಹ ಪರಿಣಾಮ ಬೀರಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ