ನವದೆಹಲಿ:
ಭಾರತದಲ್ಲಿ ಭಾರತೀಯ ಕಂಪನಿಗಳ ಮೂಲಕ ಚೀನಾದ ವ್ಯಕ್ತಿಗಳು ಕಾರ್ಯಾಚರಿಸುತ್ತಿದ್ದನ್ನು ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಅಷ್ಚು ಮಾತ್ರವಲ್ಲದೆ ಬರೊಬ್ಬರಿ ಸಾವಿರ ಕೋಟಿ ಅಕ್ರಮವನ್ನು ಬಯಲಿಗೆಳೆದಿದ್ದಾರೆ. ಮೂಲಗಳ ಪ್ರಕಾರ ಭಾರತದಲ್ಲಿ ನಕಲಿ ಕಂಪನಿಗಳನ್ನು ಹುಟ್ಟು ಹಾಕಿ ಒಂದು ಸಾವಿರ ಕೋಟಿ ರೂಪಾಯಿ ಹಣ ದುರುಪಯೋಗ ಜಾಲದಲ್ಲಿ ಶಾಮೀಲಾಗಿದ್ದ ಚೀನಾ ವ್ಯಕ್ತಿಗಳು ಹಾಗೂ ಅವರ ಸ್ಥಳೀಯ ಸಹವರ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿರುವುದಾಗಿ ಸಿಬಿಡಿಟಿ ತಿಳಿಸಿದೆ.
ಇಲಾಖೆ ಮೂಲಗಳು ನೀಡಿರುವ ಮಾಹಿತಿಯಂತೆ ದೆಹಲಿ, ಗುರುಗ್ರಾಮ ಮತ್ತು ಘಾಜಿಯಾಬಾದ್ ನಲ್ಲಿ ಚೀನಿಯರು ನಡೆಸುತ್ತಿದ್ದ ಸುಮಾರು 12 ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಇದರಲ್ಲಿ ಅವರ ಕೆಲವು ಭಾರತೀಯ ಸಹವರ್ತಿಗಳು ಮತ್ತು ಬ್ಯಾಂಕ್ ಅಧಿಕಾರಿಗಳು ಕೂಡ ಸೇರಿದ್ದಾರೆ ಎಂದು ಸಿಬಿಡಿಟಿ ಪ್ರಕಟಣೆಯಲ್ಲಿ ತಿಳಿಸಿದೆ.
ಹಾಂಕಾಂಗ್, ಯುಎಸ್ ಡಾಲರ್ ಗಳಲ್ಲಿ ಹವಾಲ ವ್ಯವಹಾರ ನಡೆದಿದೆ. ಅಲ್ಲದೆ ಚೀನಿಯರು ಹಾಗೂ ಸ್ಥಳೀಯರು ಮನಿ ಲಾಂಡ್ರಿಂಗ್ ಮೂಲಕ ಸಂಗ್ರಹಿಸಿದ್ದ 1000 ಕೋಟಿ ರೂ ಮೌಲ್ಯದ ಆಸ್ತಿ ಈಗ ಐಟಿ ದಾಳಿಯಲ್ಲಿ ಪತ್ತೆಯಾಗಿದೆ. ಬೇನಾಮಿ ಕಂಪನಿಗಳ ಹೆಸರಿನಲ್ಲಿ ಅಕ್ರಮವಾಗಿ ನಗದು ಚಲಾವಣೆ ದಂಧೆ ನಡೆಸುತ್ತಿದ್ದರು. ಚೀನಾ ಮೂಲದ ಸಬ್ಸಿಡಿ ಕಂಪನಿ ಎಂದು ಹೇಳಿ ಸುಮಾರು 100 ಕೋಟಿ ರೂ ಶೆಲ್ ಕಂಪನಿಗಳಿಂದ ಪಡೆದಿದ್ದರು. ಭಾರತದೆಲ್ಲೆಡೆ ರಿಟೈಲ್ ಶೋರೂಮ್ ಆರಂಭಿಸುವ ಯೋಜನೆಯಿತ್ತು ಎಂದು ಸಿಬಿಡಿಟಿ ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








