ಟ್ರಂಪ್ ತಮ್ಮ ಜವಾಬ್ದಾರಿ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ..!

ವಾಷಿಂಗ್ಟನ್:

     ಡೊನಾಲ್ಡ್ ಟ್ರಂಪ್ ಅಮೆರಿಕಾದ ಸರಿಯಾದ ಅಧ್ಯಕ್ಷರಲ್ಲ ಎಂದು ಹೇಳಿರುವ ಮಿಚೆಲ್ ಒಬಾಮಾ,ಜೊ ಬೀಡನ್ ಅವರಿಗೆ ದೇಶದ ಜನತೆ ಮತ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.ಕಳೆದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿನ ಮಕ್ಕಳ ಪರಿಸ್ಥಿತಿ ಸಂಕಷ್ಟದಲ್ಲಿರುವುದಾಗಿ ಅಮೆರಿಕಾದ ಮಾಜಿ ಪ್ರಥಮ ಮಹಿಳೆ ಸಮಾವೇಶವೊಂದರಲ್ಲಿ ಹೇಳಿದರು.

     ನವೆಂಬರ್ 3 ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್  ಟ್ರಂಪ್ ವಿರುದ್ಧ 77 ವರ್ಷದ ಜೋ ಬಿಡೆನ್ ಸ್ಪರ್ಧಿಸಿದ್ದಾರೆ. ಭಾರತೀಯ ಮೂಲದ ಸೆನೆಟರ್ ಕಮಲ್ ಹ್ಯಾರಿಸ್  ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.ಡೊನಾಲ್ಡ್ ಟ್ರಂಪ್ ಅಧಿಕಾರವಧಿಯಲ್ಲಿ ತನ್ನ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. 2016ರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರಿಗೆ ಮತ ನೀಡಿದವರು ಈ ಬಾರಿ ಜೋ ಬಿಡೆನ್ ಅವರಿಗೆ ಮತ ನೀಡಬೇಕಾಗಿದೆ. ನಮ್ಮ ಜೀವನ ಅವರಂತಹವರ ಮೇಲೆ ಅವಲಂಬಿತವಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link