ತಾಲ್ಲೂಕು ಆಡಳಿತದ ಅನ್ಯಾಯದ ವಿರುದ್ದ ಧರಣಿ

ತುರುವೇಕೆರೆ:

    ಬಡರೈತರು ಜಮೀನಿನಲ್ಲಿ ನೆಟ್ಟಿದ್ದ ತೆಂಗಿನಸಸಿಗಳನ್ನು ಕಿತ್ತಿರುವ ತಾಲ್ಲೂಕು ಆಡಳಿತದ ವಿರುದ್ದ ಅನ್ಯಾಯ ಖಂಡಿಸಿ ಆಗಸ್ಟ್ 30 ಹಾಗು 31 ರಂದು ಗುಡ್ಡೇನಹಳ್ಳಿ ಗ್ರಾಮಸ್ಥರೊಟ್ಟಿಗೆ ಪಾದಯಾತ್ರೆ ಕೈಗೊಂಡು ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಲಾಗುವುದೆಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಹೆಳಿಕೆ ನೀಡಿ ಮಾತನಾಡಿದ ಅವರು ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಗುಡ್ಡೇನಹಳ್ಳಿ ಬಡ ರೈತರು ತಮ್ಮ ಜಮೀನಿನಲ್ಲಿ ನೆಟ್ಟಿದ್ದ ತೆಂಗಿನ ಸಸಿಗಳನ್ನು ಪೊಲೀಸ್ ಮತ್ತು ಕಂದಾಯಾಧಿಕಾರಿಗಳು ತೆಂಗಿನ ಸಸಿ ಕೀಳಿಸಿರುವ ಹಿಂದೆ ಶಾಸಕ ಮಸಾಲಜಯರಾಂ ಕಿಮ್ಮತ್ತಿದ್ದು ಬಡ ರೈತರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಮುಂದಾಗಿದ್ದಾರೆಂದು ರೈತರ ಭೂ ದಾಖಲೆಗಳನ್ನು ಪದರ್ಶಿಸಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನೇರ ಆರೋಪ ಮಾಡಿದರು.

    ಮಾಯಸಂದ್ರದ ಗುಡ್ಡೇನಹಳ್ಳಿ ಗ್ರಾಮದ ಸರ್ವೇ ನಂಬರ್ 4, 5, 6, 7, 8, 9, 15, 16, 27 ಮತ್ತು 28ರಲ್ಲಿ ಸುಮಾರು 18 ಎಕರೆ ಜಮೀನನ್ನು ಗ್ರಾಮದ 60 ಕೂಲಿಕಾರ ಕುಟುಂಬಗಳು ಹಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ ಮತ್ತು ಬಗರ್ ಹುಕುಂ ಕಮಿಟಿಯ ಮುಂದೆ ರೈತರು ಅರ್ಜಿಯನ್ನು ಕೂಡ ಸಲ್ಲಿಸಿದ್ದರು.

    ಇದರಲ್ಲಿ ಇಬ್ಬರಿಗೆ ನನ್ನ ಅವಧಿಯಲ್ಲೇ ತಲಾ 3 ಎಕರೆ ಜಮೀನನ್ನು ಮಂಜೂರು ಮಾಡಿಕೊಟ್ಟಿದ್ದೆ. ಉಳಿದವರು ಇಲ್ಲಿ ತಲಾ 20 ಗುಂಟೆಗಳನ್ನು ಉಳುಮೆ ಮಾಡುತ್ತಿದ್ದರು. ಕೆಲ ರೈತರು ಇತ್ತೀಚೆಗೆ ಸುಮಾರು 700ರಿಂದ 800 ತೆಂಗಿನ ಸಸಿಗಳನ್ನು ನೆಟ್ಟಿದ್ದರು.
ಗೋಮಾಳಗಳನ್ನು ಉಳುಮೆ ಮಾಡಿಕೊಳ್ಳಲು ಸರ್ಕಾರದ ಅನುಮತಿ ಇದೆ ಹಾಗು ಬಿ. ಫಾರೆಸ್ಟ್ ಇದ್ದು ಅಲ್ಲಿ ಸಾಗುವಳಿ ಮಾಡುತ್ತಾ ಬಗರ್‍ಹುಕುಂಗೆ ಅರ್ಜಿ ಸಲ್ಲಿಸಿದ್ದರೆ ಅದನ್ನು ಖಾಲಿ ಮಾಡಿಸಲು ಯಾರಿಗೂ ಅನುಮತಿಯಿಲ್ಲ. ಈ ಬಗ್ಗೆ ಕಾಗೋಡು ಹೋರಾಟದಲ್ಲಿ ಪ್ರಸ್ತಾಪಿಸಲಾಗಿದೆ.

   ಹೀಗಿದ್ದರೂ ಶಾಸಕರು ಗ್ರೇಟ್2 ತಹಶೀಲ್ದಾರ್ ಸಿದ್ದಗಂಗಯ್ಯ, ಕಂದಾಯಾಧಿಕಾರಿ ಪುಟ್ಟಣ್ಣಶೆಟ್ಟಿ ಹಾಗು ಪೊಲೀಸ್ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಗುಡ್ಡೇನಹಳ್ಳಿ ಬಗರ್ ಹುಕುಂ ಜಮೀನನಲ್ಲಿ ನೆಟ್ಟಿರುವ ಸಾವಿರಾರು ರೂಪಾಯಿಗಳ ಮೌಲ್ಯದ ತೆಂಗಿನ ಸಸಿಗಳನ್ನು ಕೀಳಿಸಿ ಆ ಮೂಲಕ ಬಡ, ಕೂಲಿಕಾರ ರೈತರ ಭೂಮಿಯನ್ನು ತಮ್ಮ ಹಿಂಬಾಲಕರಿಗೆ ನೀಡಿ ಆನಂತರ ತಮ್ಮ ಹೆಸರಿಗೆ ಮಂಜೂರು ಮಾಡಿಸಿಕೊಳ್ಳುವ ಹುನ್ನಾರ ನಡೆಸಿದ್ದಾರೆಂದು ದೂರಿದರು.

    ತಾಲ್ಲೂಕು ಆಡಳಿತದ ಈ ಕ್ರಮ ಖಂಡಿಸಿ ಆಗಸ್ಟ್ 30 ಹಾಗು 31 ರಂದು ಜೆಡಿಎಸ್ ಕಾರ್ಯಕರ್ತರು ಹಾಗೂ ಗುಡ್ಡೇನಹಳ್ಳಿ ಗ್ರಾಮಸ್ಥರೊಟ್ಟಿಗೆ ಪಾದಯಾತ್ರೆ ಕೈಗೊಂಡು ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಲಾಗುವುದೆಂದು ಎಚ್ಚರಿಸಿದರು.
ಈ ವೇಳೆ ಮುಖಂಡ ಕೊಳಾಲ ಗಂಗಾಧರ್ ಗ್ರಾಮಸ್ಥರುಗಳಾದ ವಿಎಸ್‍ಎಸ್‍ಎನ್ ಅಧ್ಯಕ್ಷ ಬಸವರಾಜು, ಮಾಜಿ ಛೇರ್ಮನ್ ಕೆಂಚಯ್ಯ, ಎನ್.ಮುಕುಂದ, ಅರುಣ್‍ಕುಮಾರ್ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link