ಬೆಂಗಳೂರು :
ಮನೆ ಬಳಿ ಬಂದು ಗಲೀಜು ಮಾಡುತ್ತಿದ್ದ ಪಕ್ಕದ ಮನೆ ಬೆಕ್ಕಿಗೆ ವ್ಯಕ್ತಿಯೊಬ್ಬ ಗುಂಡಿಟ್ಟು ಕೊಂದ ಘಟನೆ ಸರ್ಜಾಪುರದ ಸ್ಕೈ ಲೈಟ್ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
ಅಪಾರ್ಟ್ ಮೆಂಟ್ ನಿವಾಸಿ ಶೀಲಾ ಎಂಬುವರಿಗೆ ಸೇರಿದ ಬೆಕ್ಕನ್ನು ಪಕ್ಕದ ಮನೆಯ ವ್ಯಕ್ತಿ ಶೂಟ್ ಮಾಡಿ ಕೊಂದು ಹಾಕಿದ್ದಾನೆ ಎನ್ನಲಾಗಿದೆ. ಪಕ್ಕದ ಮನೆ ಬೆಕ್ಕು ಬಂದು ಗಲೀಜು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಡಬ್ಬಲ್ ಬ್ಯಾರಲ್ ಗನ್‌ನಿಂದ ಶೂಟ್ ಮಾಡಿ ಬೆಕ್ಕು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಅದೇ ಅಪಾರ್ಟ್ಮೆಂಟ್ ನಿವಾಸಿ ಶೀಲ ಅನ್ನೋರಿಗೆ ಸೇರಿದ್ದ ಬೆಕ್ಕು ಇದಾಗಿದೆ. ಬೆಳಗಿನ ಜಾವ ಈ ಘಟನೆ ನಡೆದಿದ್ದು, ಘಟನೆಯಿಂದ ಅಪಾರ್ಟ್ಮೆಂಟ್ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ