ಬಣ್ಣದ ಲೋಕಕ್ಕೆ ಕಾಲಿಟ್ಟು 64 ವಸಂತ ಪೂರೈಸಿದ ಕಮಲ್‌ ಹಾಸನ್

ಚೆನ್ನೈ:

    ಚಿತ್ರರಂಗದಲ್ಲಿ 10 ವರ್ಷ ಕಳೆಯಬೇಕು ಎಂದಾಗ ಸಾಕಷ್ಟು ಚಾಲೆಂಜ್​ಗಳು ಎದುರಾಗುತ್ತವೆ. ಇದಕ್ಕೆ ಸಾಕಷ್ಟು ಶ್ರಮ ಹಾಕಬೇಕಾಗುತ್ತದೆ. ಕಮಲ್ ಹಾಸನ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು ಬರೋಬ್ಬರಿ 64 ವರ್ಷಗಳು ಕಳೆದಿವೆ. ಅವರ ಫ್ಯಾನ್ಸ್ ಇದನ್ನು ಸೆಲೆಬ್ರೇಟ್ ಮಾಡುತ್ತಿದ್ದಾರೆ. ಅಪರೂಪದ ಸಾಧನೆ ಮಾಡಿದ ಅವರನ್ನು ಎಲ್ಲರೂ ಮೆಚ್ಚುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ ನಟನೆಯ ‘ಥಗ್ ಲೈಫ್​’ ಸಿನಿಮಾ ಸೆಟ್​ಗೆ ಬಂದಾಗ ತಂಡದವರು ಇದನ್ನು ನೆನಪಿಸಿಕೊಂಡು ಮೆಚ್ಚುಗೆ ಸೂಚಿಸಿದರು.

    ಕಮಲ್ ಹಾಸನ್ ಅವರು ಬಾಲ ಕಲಾವಿದನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಅವರು ನಟಿಸಿದ ಮೊದಲ ಸಿನಿಮಾ ‘ಕಲಾಥುರ್ ಕಣ್ಣಮ್ಮ’. ಇದು ತಮಿಳು ಸಿನಿಮಾ. ಈ ಸಿನಿಮಾ ರಿಲೀಸ್ ಆಗಿದ್ದು 1960ರ ಆಗಸ್ಟ್ 12ರಂದು. ಜೆಮಿನಿ ಗಣೇಶನ್, ಸಾವಿತ್ರಿ ಗಣೇಶ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಬಾಲ ಕಲಾವಿದನ ಪಾತ್ರ ಮಾಡಿದ್ದರು ಕಮಲ್ ಹಾಸನ್. ಅಲ್ಲಿಂದ ಅವರ ಚಿತ್ರರಂಗದ ಜರ್ನಿ ಆರಂಭ ಆಯಿತು. ಈಗ ಅವರು ಚಿತ್ರರಂಗದಲ್ಲಿ 65ನೇ ವರ್ಷದ ಜರ್ನಿ ಆರಂಭಿಸಿದ್ದಾರೆ. ಈ ಸಾಧನೆ ಮಾಡಿದ ಕೆಲವೇ ಕೆಲವು ಹಿರೋಗಳಲ್ಲಿ ಕಮಲ್ ಹಾಸನ್ ಕೂಡ ಒಬ್ಬರು.

   ಕಮಲ್ ಹಾಸನ್ ಅವರು ‘ಥಗ್ ಲೈಫ್’ ಸಿನಿಮಾ ಶೂಟ್​ನಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರವನ್ನು ಮಣಿರತ್ನಂ ಅವರು ನಿರ್ದೇಶನ ಮಾಡುತ್ತಿದ್ದಾರೆ. ‘ನಾಯಕನ್’ (1987) ಬಳಿಕ ಮಣಿರತ್ನಂ ಹಾಗೂ ಕಮಲ್ ಹಾಸನ್ ಮತ್ತೆ ತೆರೆಮೇಲೆ ಒಂದಾಗಿದ್ದಾರೆ. ಈ ಚಿತ್ರದ ಸೆಟ್​ನಲ್ಲಿ ಕಮಲ್ ಹಾಸನ್​ ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ.

   ಕಮಲ್ ಹಾಸನ್ ಕೈಯಲ್ಲಿ ಹಲವು ಸಿನಿಮಾಗಳು ಇವೆ. ಅವರು ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಬೇಕಿದೆ. ಇಷ್ಟು ವರ್ಷ ಅವರು ಬಿಗ್ ಬಾಸ್ ನಡೆಸಿಕೊಡುತ್ತಿದ್ದರು. ಈಗ ಅದಕ್ಕೆ ಅವರು ಬ್ರೇಕ್ ಕೊಟ್ಟಿದ್ದಾರೆ.

Recent Articles

spot_img

Related Stories

Share via
Copy link
Powered by Social Snap