ಯಳನಾಡು : ಹುಂಡಿ ಹಣ ಎಣಿಕೆ ಕಾರ್ಯಕ್ಕೆ ಚಾಲನೆ

ಹುಳಿಯಾರು:

    ಹುಳಿಯಾರು ಹೋಬಳಿ ಯಳನಾಡು ಗ್ರಾಮದ ಮುಜುರಾಯಿ ದೇವಸ್ಥಾನವಾದ ಶ್ರೀ ಸಿದ್ಧರಾಮೇಶ್ವರ ಸ್ವಾಮಿ ದೇವಸ್ಥಾನದ ಹುಂಡಿ ಹಣ ಎಣಿಕೆ ಕಾರ್ಯ ನಡೆಯಿತು.ಉಪತಹಸೀಲ್ದಾರ್ ಬಿ.ಸಿ.ಸುಮತಿ ಅವರ ಸಮ್ಮುಖದಲ್ಲಿ ದೇವಸ್ಥಾನದ ಎರಡು ಹುಂಡಿಗಳನ್ನು ಹೊಡೆದು ದೇವಸ್ಥಾನದ ಆವರಣದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ದೇವಸ್ಥಾನದ ಕಮಿಟಿಯವರು ಹುಂಡಿಹಣದ ಎಣೆಕೆ ಮಾಡಿದರು.
ಎರಡೂ ಹುಂಡಿಗಳಿಂದ 6.10 ಲಕ್ಷ ರೂ. ಹಣ ಸಂಗ್ರಹವಾಗಿದ್ದು ಈ ಹಣವನ್ನು ಕೆಜಿಬಿ ಬ್ಯಾಂಕಿನಲ್ಲಿರುವ ದೇವಸ್ಥಾನದ ಖಾತೆಗೆ ಜಮೆ ಮಾಡಲಾಯಿತು.

    ಕಂದಾಯ ತನಿಖಾಧಿಕಾರಿ ಮಂಜುನಾಥ್, ಗ್ರಾಮ ಲೆಕ್ಕಿಗ ಶ್ರೀನಿವಾಸ್, ದೇವಸ್ಥಾನ ಅರ್ಚಕ ತಮ್ಮಣ್ಣ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link