ಪ್ರತಿನಿತ್ಯ ಉತ್ತಮ ಅಲೋಚನೆ ಮಾಡಿದರೆ ಅದು ಸಂಸ್ಕಾರ

0
19

ತುಮಕೂರು:

       ತುಮಕೂರು ಜಿಲ್ಲಾ ಬ್ರಾಹ್ಮಣ ಸಭಾ ವತಿಯಿಂದ ಇತ್ತೀಚೆಗೆ ಶೃಂಗೇರಿ ಶಂಕರ ಮಠದಲ್ಲಿ ಸಂಘಟನೆ ಸ್ವಾವಲಂಬನೆ ಸಂಸ್ಕಾರ ವಿಚಾರವಾಗಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಾಜಿ ವಿಧಾನಪರಿಷತ್ ಸದಸ್ಯರಾದ ಮತ್ತೂರು ಎಂ.ಬಿ.ಭಾನುಪ್ರಕಾಶ್‍ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಸಂಘಟನೆ ಇದ್ದರೆ ಬ್ರಾಹ್ಮಣರು, ಬ್ರಾಹ್ಮಣರಿದ್ದರೆ ಸಂಘಟನೆ, ಪರಸ್ಪರ ಅವಲಂಬನೆ ಇರಬೇಕು. ಪ್ರತಿನಿತ್ಯ ಉತ್ತಮ ಅಲೋಚನೆ ಮಾಡಿದರೆ ಅದು ಸಂಸ್ಕಾರವಾಗುತ್ತದೆ. ಯಾವಾಗಲು ಸಾತ್ವಿಕ ಚಿಂತನೆ ಮಾಡಬೇಕು ಇದರಿಂದ ಸದಾ ಕಾಲ ಪ್ರತಿ ಕ್ಷಣ ಅನಂದವನ್ನು ಅನುಭವಿಸಬಹುದು ನಮ್ಮ ಸಂಘಟನೆಯಿಂದ ನಾವು ಯೋಗ್ಯ ಸಂಸ್ಕಾರವಂತರಾಗಬೇಕು.

        ಆತ್ಮ ಉದ್ದಾರವಾಗಬೇಕು ಅವಕಾಶವಂಚಿತರನ್ನು ಸಮಾಜದಲ್ಲಿ ಮುಂದೆ ತರುವ ಕೆಲಸ ಸಂಘಟನೆಗಳಿಂದಾಗಬೇಕು, ಕೇವಲ ಸಂಖ್ಯೆಗಳು ಸಂಘಟನೆಯಲ್ಲಿ ಒಟ್ಟಿಗೆ ಬಂದರೆ ಅದು ಸಂಘಟನೆ, ಸಂಘಟನೆಗಳಿಗೆ ತಾತ್ಕಾಲಿಕ ಉದ್ದೇಶಗಳಿರಬಾರದು ಉದಾತ್ತ ಚಿಂತನೆಗಳಿಂದ ನಿಶ್ಚಿತ ಉದ್ದೇಶಗಳು ಕಚೇರಿದರೆ ಆಗ ಅದು ಸಂಘಟನೆ, ಯಾವುದೇ ನೇತೃತ್ವ ವಹಿಸಬೇಕಾದರೆ ಸಂಘಟನೆ ಅಗತ್ಯ. ಸಮಾಜದಲ್ಲಿ ನೇಕಾರರನ್ನು ಬೆಳೆಸಬೇಕು ಕೇವಲ ರಾಜಕೀಯವೇ ಆಗಬಾರದು. ನಾವು ಯಾರೊಂದಿಗೂ ಪ್ರತಿಸ್ಪರ್ಧಿಗಳಲ್ಲ ರಾಜಕೀಯ ಹೊರತುಪಡಿಸಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರ್ವೇ ಜನಾಃ ಸುಖಿನೋಭವಂತು ಇದನ್ನು ಸದಾ ಜಪಿಸಬೇಕು. ಇಂತಹ ಕಾರ್ಯಕ್ರಮಗಳನ್ನು ತುಮಕೂರು ಜಿಲ್ಲಾ ಬ್ರಾಹ್ಮಣ ಸಭಾ ವತಿಯಿಂದ ಹಮ್ಮಿಕೊಳ್ಳುತ್ತಾ ಬಂದಿರುವುದು ಶ್ಲಾಘನೀಯವಾದದ್ದು ಎಂದು ನುಡಿದರು.

        ಇದೇ ಸಂದರ್ಭದಲ್ಲಿ ವೇದಿಕೆಯಿಂದ ನೂತನವಾಗಿ ಆಯ್ಕೆಯಾದ ತುಮಕೂರು ಮಹಾನಗರ ಪಾಲಿಕೆ ಸದಸ್ಯರಾದ ಸಿ.ಎನ್. ರಮೇಶ್, ಮಧುಗಿರಿ ಪುರಸಭಾ ಸದಸ್ಯ ಕೆ.ನಾರಾಯಣ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಂ.ಬಿ.ಭಾನುಪ್ರಕಾಶ್ ರವರನ್ನು ಬ್ರಾಹ್ಮಣ ಸಭಾ ಹಾಗೂ ವಿವಿಧ ಸಂಘಟನೆಗಳಿಂದ ಅಭಿನಂದಿಸಲಾಯಿತು.

       ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷರಾದ ಎನ್. ಆರ್. ನಾಗರಾಜರಾವ್ ಮಾತನಾಡುತ್ತಾ ಸಂಘಟನೆಯಿಂದ ವಿ.ಪ್ರ. ಭಾಂದವರು ರಾಜಕೀಯವಾಗಿ ಮುಖ್ಯವಾಹಿನಿಗೆ ಬರಬೇಕೆಂದು ಕರೆ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ರಾಘವೇಂದ್ರ, ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಉಪಾಧ್ಯಕ್ಷೆ ಸಂಭಾಷಣಿರವೀಶ್ ವಂದಿಸಿದರು. ಡಾ.ಜ್ಯೋತಿ ಕಾರ್ಯಕ್ರಮವನ್ನು ನಿರೂಪಿಸಿದರು, ಕು. ಶೃತಿ ಪ್ರಾರ್ಥಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here