222 ಜನರಿಗೆ ಪಾಸಿಟಿವ್: ಆರು ಮಂದಿ ಸಾವು

ತುಮಕೂರು

    ಗುರುವಾರ ಜಿಲ್ಲೆಯಲ್ಲಿ 222 ಜನರಿಗೆ ಸೋಂಕು ತಗುಲಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 6662ಕ್ಕೆ ಏರಿಕೆಯಾಗಿದೆ. ಜೊತೆಗೆ ಸೋಂಕು ತಗುಲಿದ ಆರು ಜನ ಮೃತಪಟ್ಟಿದ್ದಾರೆ. ಇವರೊಂದಿಗೆ ಸೋಂಕಿನಿಂದ ಮೃತರಾದವರ ಸಂಖ್ಯೆ 171ಕ್ಕೆ ಏರಿಕೆಯಾಗಿದೆ.

    ತುಮಕೂರು ನಗರದ ಬಟವಾಡಿ ಬಡಾವಣೆಯ 58 ವರ್ಷದ ಗಂಡಸು, ಗೋಕುಲ ಬಡಾವಣೆಯ 69 ವರ್ಷದ ಗಂಡಸು, ಶ್ರೀರಾಮ ನಗರದ 61 ವರ್ಷದ ಗಂಡಸು, ಎಸ್.ಎಸ್.ಪುರಂನ 83 ವರ್ಷದ ಗಂಡಸು, ಲಿಂಗಾಪುರದ 58 ವರ್ಷದ ಗಂಡಸು ಹಾಗೂ ಕೆ.ಆರ್.ಬಡಾವಣೆಯ 74 ವರ್ಷದ ಗಂಡಸು ಸೋಂಕಿನಿಂದ ಮೃತಪಟ್ಟಿದ್ದಾರೆ. ಜೊತೆಗೆ, ತುಮಕೂರು ತಾಲ್ಲೂಕು ಸಿದ್ಧಾರ್ಥ ನಗರದ 72 ವರ್ಷದ ಸೊಂಕಿತ ಮಹಿಳೆ ಅನ್ಯ ಕಾರಣದಿಂದ ಅಸುನೀಗಿದ್ದಾರೆ. ಇವರು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೋವಿಡ್ ಸೋಂಕು ಇರುವುದು ಖಚಿತವಾಗಿತ್ತು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಹೇಳಿದ್ದಾರೆ.

   ಕೊರೊನಾ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ಬುಧವಾರ 189 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 4704 ಮಂದಿ ಗುಣಮುಖರಾದಂತಾಗಿದೆ. ಆದರೆ, ಜಿಲ್ಲೆಯಲ್ಲಿ 1778 ಸೋಂಕು ಸಕ್ರಿಯ ಪ್ರಕರಣಗಳಿವೆ. ಗುರುವಾರ ವರದಿಯಾದ 222 ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನ 57 ಜನರಿಗೆ ಸೋಂಕು ಖಚಿತವಾಗಿದೆ. ಪಾವಗಡ ತಾಲ್ಲೂಕಿನ 27, ತಿಪಟೂರು ತಾಲ್ಲೂಕಿನ 27, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 23, ಕುಣಿಗಲ್ ತಾಲ್ಲೂಕಿನ 21, ಮಧುಗಿರಿ ತಾಲ್ಲೂಕಿನ 20, ತುರುವೇಕೆರೆ ತಾಲ್ಲೂಕಿನಲ್ಲಿ 16, ಗುಬ್ಬಿ ತಾಲ್ಲೂಕಿನಲ್ಲಿ 13, ಕೊರಟಗೆರೆ ತಾಲ್ಲೂಕಿನ 9, ಶಿರಾ ತಾಲ್ಲೂಕಿನಲ್ಲಿ 9 ಜನರಿಗೆ ಕೊರೊನಾ ಸೋಂಕು ಖಚಿತವಾಗಿದೆ. ಇವರಲ್ಲಿ 140 ಪುರುಷರು, 82 ಮಹಿಳೆಯರು, 4 ಮಂದಿ ಮಕ್ಕಳು, 60 ವರ್ಷ ಮೇಲ್ಪಟ್ಟ 41 ಜನರಿದ್ದಾರೆ.

   ಇದೂವರೆಗೆ ಜಿಲ್ಲೆಯಲ್ಲಿ ವರದಿಯಾಗಿರುವ ಒಟ್ಟು 6662 ಸೋಂಕು ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನಲ್ಲಿ 2451, ಪಾವಗಡ ತಾ. 586, ಕುಣಿಗಲ್ ತಾ. 550, ತಿಪಟೂರು ತಾ. 543, ಶಿರಾ ತಾ. 479, ಗುಬ್ಬಿ ತಾ. 469, ಮಧುಗಿರಿ ತಾ. 450, ಚಿಕ್ಕನಾಯಕನಹಳ್ಳಿ ತಾ. 397, ತುರುವೇಕೆರೆ ತಾ. 391, ಕೊರಟಗೆರೆ ತಾ. 346 ಪ್ರಕರಣ ವರದಿಯಾಗಿವೆ.

   ಈವರೆಗೂ ಕೊರೊನಾ ಸೋಂಕು ತಗುಲಿದ 6662 ಜನರಲ್ಲಿ 171 ಜನ ಮೃತಪಟ್ಟಿದ್ದಾರೆ. ತುಮಕೂರು ತಾಲ್ಲೂಕಿನ 107, ಕುಣಿಗಲ್ ತಾಲ್ಲೂಕಿನಲ್ಲಿ 10, ಪಾವಗಡ ತಾಲ್ಲೂಕಿನ 9, ಗುಬ್ಬಿ ತಾಲ್ಲೂಕಿನಲ್ಲಿ 9, ತಿಪಟೂರು ತಾಲ್ಲೂಕಿನ 8, ಶಿರಾ ತಾಲ್ಲೂಕಿನ 7, ಕೊರಟಗೆರೆ ತಾಲ್ಲೂಕಿನಲ್ಲಿ 6, ತುರುವೇಕೆರೆ ತಾಲ್ಲೂಕು 5, ಮಧುಗಿರಿ ತಾಲ್ಲೂಕಿನಲ್ಲಿ 4, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 4 ಮಂದಿ ಕೋವಿಡ್‍ಗೆ ಬಲಿಯಾಗಿದ್ದಾರೆ.ಸೋಂಕಿತರಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಇದೂವರೆಗೆ 6662 ಮಂದಿಗೆ ಸೋಂಕು ತಗುಲಿದೆ, ಇವರಲ್ಲಿ 4704 ಮಂದಿ ಗುಣಮುಖರಾಗಿದ್ದಾರೆ..

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link