ಬೆಂಗಳೂರು :
ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ಸಂಬಂಧ ಇದೀಗ ಸಿಸಿಬಿಯಿಂದ ನಟಿ ರಾಗಿಣಿ ದ್ವಿವೇದಿ ಸೇರಿದಂತೆ 12 ಆರೋಪಿಗಳ ವಿರುದ್ಧ ಸುಮೋಟೋ ಕೇಸ್ ದಾಖಲಾಗಿದೆ.
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಶಿವಪ್ರಸಾದ್ ಎ1 ಆರೋಪಿಯಾದರೆ ನಟಿ ರಾಗಿಣಿ ಆರೋಪಿ ನಂ.2 ಆರೋಪಿಯಾಗಿದ್ದಾರೆ. ವೀರೇಶ್ ಖನ್ನಾ ಎ3, ಪ್ರಶಾಂತ್ ರಾಂಕಾ ಎ4, ವೈಭವ್ ಜೈನ್ ಎ5, ಆದಿತ್ಯಾ ಆಳ್ವ ಎ6, ಲೂಮ್ ಪೆಪ್ಪರ್ ಎ7, ಪ್ರಶಾಂತ್ ರಿಜು ಎ8, ಅಶ್ವಿನ್ ಎ9, ಅಭಿಸ್ವಾಮಿ ಎ10, ರಾಹುಲ್ ಎ11 ಮತ್ತು ವಿನಯ್ ಎ12 ಆರೋಪಿಯಾಗಿದ್ದಾರೆ.
NDPS ಕಾಯ್ದೆ(Narcotic Drugs and Psychotropic Substances Act, 1985) ಸೆಕ್ಷನ್ 21, 21c, 27b, 27A, 29 ಹಾಗೂ IPC ಸೆಕ್ಷನ್ 120B ಅಡಿ ಕೇಸ್ ದಾಖಲಾಗಿದ್ದು, 12 ಮಂದಿಯನ್ನ ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.