ಇಂಜಿನಿಯರ್‍ಗಳ ಪರಸ್ಪರ ಅಸೂಯೆಯಿಂದ ನೀರಾವರಿ ಯೋಜನೆಗಳು ಕುಂಠಿತ

ತುಮಕೂರು:

     ಜಲಸಂಪನ್ಮೂಲ ಇಲಾಖೆಯ ಉನ್ನತ ಸ್ಥಾನದಲ್ಲಿರುವ ಎಲ್ಲಾ ಬುದ್ದಿವಂತ ಎಂಜಿನಿಯರ್‍ಗಳ ಪರಸ್ಪರ ಅಸೂಯೆಯಿಂದ ನೀರಾವರಿ ಯೋಜನೆಗಳು ಕುಂಟಿತವಾಗಿವೆ. ಇದರಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿ ಹೊಳಿಗೆ ಅವರುಗಳಿಗೆ ಕೆಟ್ಟ ಹೆಸರು ಬರಲಿದೆ ಎಂದು ಸಂಸದ ಜಿ.ಎಸ್.ಬಸವರಾಜ್ ತಿಳಿಸಿದ್ದಾರೆ.

     ಬೃಹತ್ ನೀರಾವರಿ ಯೋಜನೆಗಳಿಗೆ ಹಣದ ಕೊರತೆಯಿದೆ. ಆದರೆ ಸಂಪೂರ್ಣವಾಗಿ ನೀರಿನ ಮಾಸ್ಟರ್ ಪ್ಲಾನ್ ಮಾಡಿ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ಸಾಮಾಜಿಕ ನ್ಯಾಯದಡಿಯಲ್ಲಿ ದೊರೆಯಬಹುದಾದ ನದಿ ನೀರಿನ ಹಂಚಿಕೆ ಮಾಡಲು ನಿಮಗೆಲ್ಲಾ ಏನಾಗಿದೆ ಎಂದು ಇಲಾಖೆಗೆ ಹೊಸದಾಗಿ ನೇಮಕವಾಗಿರುವ ಕಾರ್ಯದರ್ಶಿ ಅನಿಲ್‍ಕುಮಾರ್ ಅವರನ್ನು ಸಂಸದ ಜಿ.ಎಸ್.ಬಸವರಾಜ್ ಪ್ರಶ್ನಿಸಿದರು.

     ಅನಿಲ್‍ಕುಮಾರ್ ಪ್ರತಿಕ್ರಿಯೆ ನೀಡಿ ತಮ್ಮ ಕಾಳಜಿ ನನಗೆ ಗೊತ್ತಿದೆ ಸಾರ್, ಒಂದು ವರ್ಷದಲ್ಲಿ ನಾವು ರಾಜ್ಯದಲ್ಲಿ ದೊರೆಯುವ ಮತ್ತು ಕೇಂದ್ರ ಸರ್ಕಾರದ ನದಿ ಜೋಡಣೆಯಿಂದ ರಾಜ್ಯಕ್ಕೆ ದೊರೆಯುವ ನೀರಿನಿಂದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಸಾಮಾಜಿಕ ನ್ಯಾಯದಡಿ ಹಂಚಿಕೆ ಮಾಡಿ ಇದೂವರೆಗೂ ಅನ್ಯಾಯವಾಗಿರುವ ಭಾಗಕ್ಕೆ ನ್ಯಾಯ ದೊಕಿಸಿಯೇ ತೀರುತ್ತೇವೆ ಎಂದು ತಿಳಿಸಿದರು.ತಾವು ಮುಖ್ಯ ಮಂತ್ರಿಗಳಿಂದ ಆದೇಶಿರುವ ಪತ್ರಗಳು ನಮ್ಮ ಬಳಿ ಇವೆ. ಜಲಸಂಪನ್ಮೂಲ ಸಚಿವರಿಗೂ ವಿಶೇಷ ಕಾಳಜಿ ಇದೆ. ನಾವೆಲ್ಲರೂ ಸಮರೋಪಾದಿಯಲ್ಲಿ ಕಾರ್ಯೋನ್ಮುಖರಾಗುತ್ತೇವೆ ಎಂದರು.

    ನಂತರ ಮಧ್ಯೆ ಪ್ರವೇಶಿಸಿದ ಕುಂದರನಹಳ್ಳಿ ರಮೇಶ್ ರಾಜ್ಯದಲ್ಲಿ 28 ಜನ ಲೋಕಸಭಾ ಸದಸ್ಯರು ಇದ್ದಾರೆ. 12 ಜನ ರಾಜ್ಯಸಭಾ ಸದಸ್ಯರು ಇದ್ದಾರೆ. ಬಹುತೇಕ ಮಂದಿ ಬಿಜೆಪಿಯವರು ಇದ್ದಾರೆ. ಆದರೆ ಕೇಂದ್ರ ಸರ್ಕಾರದಲ್ಲಿ ನೆನೆಗುದಿಗೆ ಬಿದ್ದಿರುವ ರಾಜ್ಯದ ನೀರಾವರಿ ಯೋಜನೆಗಳಿಗೆ ಪಕ್ಷಾತೀತವಾಗಿ ಸಂಸದರು ಒಗ್ಗಟ್ಟಾಗಿ ಏಕೆ ಶ್ರಮಿಸುತ್ತಿಲ್ಲ ಎಂದು ಪ್ರಶ್ನಿಸಿದರು.

   ಭದ್ರಾ ಮೇಲ್ದಂಡೆ ಯೋಜನೆ ಮತ್ತು ಎತ್ತಿನಹೊಳೆ ಯೋಜನೆಯನ್ನು ಎನ್.ಪಿ.ಪಿ ಯೋಜನೆಯಾಗಿ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಿ ಎಷ್ಟು ವರ್ಷವಾಯಿತು? ಮೇಕೆದಾಟು ಯೋಜನೆ, ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆ, ವಿವಿಧ ನದಿ ಜೋಡಣೆಗಳಿಂದ ರಾಜ್ಯದ ಪಾಲಿನ ನೀರಿನ ಹಂಚಿಕೆ ಹೀಗೆ ಬಹುತೇಕ ಎಲ್ಲಾ ಯೋಜನೆಗಳ ಕಡತಗಳು ಧೂಳು ತಿನ್ನುತ್ತಿವೆ ಎಂದಾಗ, ಮಧ್ಯೆ ಪ್ರವೇಶಿದ ಸಂಸದರು ರಾಜ್ಯ ಜಲಸಂಪನ್ಮೂಲ ಸಚಿವರು ಮತ್ತು ಕೇಂದ್ರದ ಜಲಶಕ್ತಿ ಸಚಿವರು ಸಹ ವಿಶೇಷ ಕಾಳಜಿಯುಳ್ಳವರಾಗಿದ್ದಾರೆ. ನಾವೆಲ್ಲರೂ ಪಕ್ಷಾತೀತವಾಗಿ ಶ್ರಮಿಸಲು ಮುಂದಾಗುತ್ತೇವೆ.

   ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ ನೇತೃತ್ವದಲ್ಲಿ ಕಾಂಗ್ರೆಸ್‍ನ ಮಲ್ಲಿಕಾರ್ಜುನ ಖರ್ಗೆ ಅವರು ಮತ್ತು ಅವರ ಪಕ್ಷದವರು ಮತ್ತು ಜನತಾದಳದ ಹೆಚ್.ಡಿ.ದೇವೆಗೌಡರವರು ಮತ್ತು ಅವರ ಪಕ್ಷದವರು ಸೇರಿ ಒಟ್ಟಿಗೆ ಕುಳಿತು ಮುಖ್ಯ ಮಂತ್ರಿ ಬಿ.ಎಸ್. ಯಡಿಯೂಪ್ಪ, ಸಚಿವ ರಮೇಶ್ ಜಾರಕಿಹೊಳೆ ಅವರೊಂದಿಗೆ ಸಮಾಲೋಚನೆ ನಡೆಸಿ ರಾಜ್ಯದ ಜನತೆ ಒಪ್ಪುವ ಕೆಲಸ ಮಾಡುತ್ತೇವೆ ಎಂದ ಅವರು, ಮೋದಿಜಿಯವರು ಒಪ್ಪುವಂತ ಅತ್ಯುತ್ತಮವಾದ ಯೋಜನೆಯನ್ನು ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್‍ರವರು ಮತ್ತು ತಾವುಗಳೆಲ್ಲರೂ ಕುಳಿತು ರೂಪಿಸಿ ಎಂದು ಸಲಹೆ ನೀಡಿದರು.

     ಒಟ್ಟಿನಲ್ಲಿ ನೀರಾವರಿ ಬಗ್ಗೆ ಬಿಸಿ, ಬಿಸಿ ಚರ್ಚೆ ನಡೆಯಿತು. ಫÀಲಿತಾಂಶ ಕಾದು ನೋಡಬೇಕಿದೆ. ಮುಂಗುಸಿ- ಹಾವಿನಂತೆ ದ್ವೇಷ ಸಾಧಿಸುವ ರೀತಿ ಯಾರಿಗೂ ಒಳ್ಳೆಯದಲ್ಲ. ಇರುವ ಬುದ್ದಿವಂತರೆಲ್ಲಾ ಸಮಾನ ಮನಸ್ಕರಾದರೆ ಮಾತ್ರ ಉತ್ತಮ ಯೋಜನೆ ನೀಡಲು ಸಾಧ್ಯ. ಇದೇ ರೀತಿ ಮುಂದುವರೆದರೆ ತಂದೆ ತಾಯಿ ಜಗಳದಲ್ಲಿ ಮಕ್ಕಳು ಬಡವಾದಂತೆ ಆಗುವುದು ಬೇಡ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link