ಮಂಡ್ಯ :
ಟಿಪ್ಪರ್ ಲಾರಿಯೊಂದು ಹರಿದು ಗಂಡನ ಕಣ್ಣೆದುರಲ್ಲೇ ಪತ್ನಿ-ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯ ತಾಲ್ಲೂಕಿನ ಹೊಳಲು ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಹಾಡ್ಯ ಗ್ರಾಮದ ದೇವರಾಜು ಅವರ ಪತ್ನಿ ಶಶಿಕಲಾ(35) ಮತ್ತು ಅವರ ಮಗಳು ಲಾವಣ್ಯ(4) ಮೃತರು.
ಹಾಡ್ಯ ಗ್ರಾಮದ ದೇವರಾಜು ಸೋಮವಾರ ಬೆಳಗ್ಗೆ ಅನಾರೋಗ್ಯದ ನಿಮಿತ್ತ ಮಗಳು ಲಾವಣ್ಯಳಿಗೆ ಚಿಕಿತ್ಸೆ ಕೊಡಿಸಲು ಟಿವಿಎಸ್ ಸ್ಕೂಟರ್‌ನಲ್ಲಿ ಪತ್ನಿ ಜತೆಗೆ ಮಂಡ್ಯಕ್ಕೆ ಆಗಮಿಸಿದ್ದರು. ಚಿಕಿತ್ಸೆ ಪಡೆದು ಸ್ವಗ್ರಾಮಕ್ಕೆ ವಾಪಸ್ ತೆರಳುವ ಮಾರ್ಗ ಮಧ್ಯೆ ಹೊಳಲು ಗ್ರಾಮದ ಸರ್ಕಲ್ನಲ್ಲಿ ಹಿಂದಿನಿಂದ ಬಂದ ಟಿಪ್ಪರ್, ಟಿವಿಎಸ್ಗೆ ಡಿಕ್ಕಿಯೊಡೆದಿದೆ. ಕೆಳಕ್ಕೆ ಬಿದ್ದ ತಾಯಿ-ಮಗು ಮೇಲೆ ಲಾರಿಯ ಚಕ್ರ ಹರಿದು ಸ್ಥಳದಲ್ಲೇ ಅವರಿಬ್ಬರೂ ಸಾವನ್ನಪ್ಪಿದ್ದಾರೆ. ಪತಿ ದೇವರಾಜು (45) ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆಂಬುಲೆನ್ಸ್ ನಲ್ಲಿ ಶವಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ