ಕಾಗಿನೆಲೆಯಲ್ಲಿ ನಿರ್ಮಾಣವಾಗಲಿದೆ 75 ಅಡಿ ಎತ್ತರದ ‘ಕನಕ ಕಾವ್ಯ ಗೋಪುರ

ಕಾಗಿನೆಲೆ

     ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಸಂತ ಕನಕದಾಸರ ಜನ್ಮಭೂಮಿ ಹಾವೇರಿ ಜಿಲ್ಲೆಯ ಬಾಡ ಗ್ರಾಮ ಹಾಗೂ ಕರ್ಮಭೂಮಿ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯನ್ನು ಅಂತರಾಷ್ಟೀಯ ಪ್ರವಾಸಿ ತಾಣಗಳಾಗಿ ಅಭಿವೃದ್ಧಿ ಪಡಿಸಿದೆ.

    ಬಾಡ ಗ್ರಾಮದಲ್ಲಿ 20 ಎಕರೆ ವಿಸ್ತೀರ್ಣದಲ್ಲಿ ಕನಕದಾಸರ ಅರಮನೆ ಹಾಗೂ ಕೋಟೆಗಳನ್ನು ನಿರ್ಮಿಸಲಾಗಿದ್ದು, ಕರ್ಮಭೂಮಿ ಕಾಗಿನೆಲೆಯಲ್ಲಿ 138 ಎಕರೆ ‘ಕನಕ ಪರಿಸರಸ್ನೇಹಿ ಉದ್ಯಾನ’ದ ಆರು ಎಕರೆ ಜಾಗದಲ್ಲಿ ₹ 7.89 ಕೋಟಿ ವೆಚ್ಚದಲ್ಲಿ ‘ಕನಕ ವಸ್ತು ಸಂಗ್ರಹಾಲಯ, ‘ಕುಶಲಕರ್ಮಿಗಳ ಗ್ರಾಮ’ ಹಾಗೂ ‘ಪಾರಂಪರಿಕ ಮನೆ’ ನಿರ್ಮಾಣ ಮಾಡಲಾಗಿದೆ ಎಂದು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟೆ ಆಕಾಶವಾಣಿಗೆ ತಿಳಿಸಿದ್ದಾರೆ.

    ಕನಕದಾಸರ ಜೀವನದ ವಿವಿಧ ಘಟ್ಟಗಳು ಮತ್ತು ಅವರ ಸಂದೇಶ, ಕೀರ್ತನೆಗಳ ಬಗ್ಗೆ ಬೆಳಕು ಚೆಲ್ಲುವ ಉದ್ದೇಶದಿಂದ 100ಕ್ಕೂ ಹೆಚ್ಚಿನ ತೈಲವರ್ಣ ಪೇಂಟಿಂಗ್, ಉಬ್ಬುಶಿಲ್ಪ, ಶಿಲ್ಪಕಲಾಕೃತಿ, ಛಾಯಾಚಿತ್ರಗಳನ್ನು ಮ್ಯೂಸಿಯಂನಲ್ಲಿ ಅಳವಡಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಜಿಲ್ಲೆಯಲ್ಲಿ ಸಿಗುವ ಶಾಸನ, ಮಾಸ್ತಿಕಲ್ಲು, ವೀರಗಲ್ಲು, ಪಾರಂಪರಿಕ ಕೃಷಿ ಉಪಕರಣಗಳನ್ನು ಕಲೆ ಹಾಕುತ್ತಿದ್ದೇವೆ. ಕನಕದಾಸರು ಬಳಸಿದ್ದ ಶಂಖು, ಬವನಾಸಿಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ’ ಎಂದು ಮಲ್ಲೇಶಪ್ಪ ಹೊರಪೇಟೆ ಮಾಹಿತಿ ನೀಡಿದ್ದಾರೆ.

   ‘ಕುಂಬಾರ, ಮೇದಾರ, ಕಮ್ಮಾರ, ಚಮ್ಮಾರ, ನೇಕಾರ ಮುಂತಾದ ಪಾರಂಪರಿಕ ಕುಲಕಸುಬುಗಳನ್ನು ಪರಿಚಯಿಸಲು ‘ಕುಶಲಕರ್ಮಿಗಳ ಗ್ರಾಮ’ ನಿರ್ಮಾಣ ಮಾಡಿದ್ದೇವೆ. ವಿಶೇಷ ತರಬೇತಿ ನೀಡಿ, ಪರಿಕರ ತಯಾರಿಸಲು, ಮಾರಾಟ ಮಾಡಲು ಸ್ಥಳೀಯರಿಗೆ ಅವಕಾಶ ಕಲ್ಪಿಸಲಾಗುತ್ತದೆ. ದೇಸಿ ಉತ್ಪನ್ನಗಳ ಮಾರಾಟಕ್ಕೆ 20 ಮಳಿಗೆಗಳನ್ನು ನಿರ್ಮಿಸಿದ್ದೇವೆ’ ಎಂದರು.ಕಲಾಕೃತಿಗಳನ್ನು ರಚಿಸಲಾಗಿದೆ. ಡಿಜಿಟಲ್ ತಂತ್ರಜ್ಞಾನದ ಮೂಲಕ ಕನಕದಾಸರ ಸಮಗ್ರ ಚಿತ್ರಣ ಕಟ್ಟಿಕೊಡುವ ಸಿದ್ಧತೆಗಳು ಪ್ರಗತಿಯಲ್ಲಿವೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link