ಕೃಷಿ ಮಸೂದೆ ಜಾರಿಗೆ ಎಂಟಿಕೆ ವಿರೋಧ…!

ತುರುವೇಕೆರೆ:

    ರೈತರ ಪಾಲಿಗೆ ಮರಣಶಾಸನವೆನಿಸಿರುವ ಕೃಷಿ ಮಸೂದೆಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ರಾಜ್ಯದಲ್ಲಿ ಜಾರಿ ಮಾಡಬಾರದು ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ  ಆಗ್ರಹಿಸಿದ್ದಾರೆ.

    ಪಟ್ಟಣದ ಎಪಿಎಂಸಿ ಆವರಣದಲ್ಲಿ ಮಂಗಳವಾರ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ಮಸೂದೆಗಳನ್ನು ಅಂಗೀಕರಿಸಲು ಉಭಯ ಸರ್ಕಾರಗಳು ರಾಷ್ಟ್ರಪತಿಯವರ ಅಂಗಳಕ್ಕೆ ತರಾತುರಿಯಲ್ಲಿ ಕಳಿಸುವ ಅಗತ್ಯವಿತ್ತೇ? 1966 ಭೂ ಸುಧಾರಣೆ ಕಾಯ್ದೆಯಲ್ಲಿ ಮಾರ್ಪಾಡು ಮಾಡುವ ಮುನ್ನ ಸಾಧಕ ಭಾದಕ ಕುರಿತಂತೆ ಕೃಷಿ ತಜ್ಞರು ಹಾಗೂ ರೈತರ ಅಭಿಪ್ರಾಯಗಳನ್ನು ಕೇಳಬಹುದಿತ್ತು. ಉಭಯ ಸರಕಾರಗಳು ಏಕಾ ಏಕಿ ಕೃಷಿ ಮಸೂದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವ ಹಿಂದಿನ ಮರ್ಮ ಏನೆಂಬುದು ರೈತಾಪಿಗಳಿಗೆ ಈಗಾಗಲೇ ಅರ್ಥವಾಗಿದೆ. ರೈತನ ಹಕ್ಕುಗಳ ರಕ್ಷಣೆ ಮಾಡುವ ಸಲುವಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮ್ಮ ಪಕ್ಷದ ವತಿಯಿಂದ ರೈತರ ಹೋರಾಟಕ್ಕೆ ಸಾಥ್ ನೀಡಿದ್ದಾರೆ ಎಂದರು.

    ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ರೈತರ ಹಿತ ಕಾಯುವುದಕ್ಕಿಂತ ಕಪ್ಪುಹಣವುಳ್ಳವರ ರಕ್ಷಣೆ ಮಾಡುವುದೇ ಮುಖ್ಯವೆನಿಸಿದೆ. ಬಂಡವಾಳಶಾಹಿಗಳು ಕೃಷಿ ಭೂಮಿಯನ್ನು ಕೊಂಡು ಕೊಂಡು ತಮ್ಮಲಿನ ಕಪ್ಪುಹಣವನ್ನು ಬಳಸಿಕೊಳ್ಳಲು ಸರಕಾರಗಳು ರೈತ ಮಸೂದೆ ನೆಪದಲ್ಲಿ ಸಹಕರಿಸುತ್ತಿವೆ, ಪರೋಕ್ಷವಾಗಿ ರೈತನ ಅನ್ನ ಬೆಳೆಯುವ ಭೂಮಿಯನ್ನು ಅವನ ಹಿಡಿತಕ್ಕೆ ಸಿಲುಕಿಸಲು ಉಭಯ ಸರಕಾರಗಳು ಬಂಡವಾಳ ಶಾಹಿಗಳ ಹಿತ ಕಾಯುವ ಮಸೂದೆ ಜಾರಿಗೆ ಆತುರ ತೋರುತ್ತಿವೆ. ಉಭಯ ಸರಕಾರಗಳು ರೈತ ವಿರೋಧಿ ಅನುಸರಿಸುವ ಮೂಲಕ ರೈತರ ಪಾಲಿಗೆ ಮರಣಶಾಸನ ಬರೆಯಲು ಮುಂದಾಗಿವೆ. ಸರಕಾರಗಳು ಕೂಡಲೇ ರೈತ ವಿರೋಧಿ ಮಸೂದೆಯನ್ನು ವಾಪಸ್ಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link