ಪವರ್ ಟಿವ್ಹಿ ವಾಹಿನಿ ಲೈವ್ ಬಂದ್ ಖಂಡಿಸಿ ಸಿಎಂಗೆ ಮನವಿ

ಹಾವೇರಿ :

    ಪವರ್ ಟಿವ್ಹಿ ವಾಹಿನಿ ಲೈವ್ ಬಂದ್ ಮಾಡಿರುವುದು ಸರಿಯಾದ ಕ್ರಮವಲ್ಲ.ಇದನ್ನು ಅವಲಂಬಿಸಿ ವೃತ್ತಿ ಮಾಡುತ್ತಿರುವ ನೂರಾರು ಪರ್ತಕರ್ತರ ಕುಟುಂಬಗಳು ಬೀದಿಗೆ ಬರುವಂತಾಗಿದೆ. ಈ ಘಟನೆಯನ್ನು ಖಂಡಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾ ಕಾರ್ಯನಿರತ ಪರ್ತಕರ್ತರ ಸಂಘದ ವತಿಯಿಂದ ಡಿಸಿ ಕಛೇರಿಯಲ್ಲಿ ಜಿಲ್ಲಾಧಿಕಾರಿಗಳಾದ ಸಂಜಯ ಶೆಟ್ಟಣ್ಣನವರ ಮೂಲಕ ಸಿಎಂ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಲಾಯಿತು.

    ಕಾನಿಪ ಸಂಘದ ರಾಜ್ಯ ಸಮಿತಿ ಸದಸ್ಯರಾದ ನಿಂಗಪ್ಪ ಚಾವಡಿ ಮಾತನಾಡಿ ಸಂವಿಧಾನದ ನಾಲ್ಕನೇ ಅಂಗವಾಗಿ ಕಾರ್ಯ ನಿರ್ವಹಿಸುತ್ತಿರುವ ಮಾಧ್ಯಮ ರಂಗ ಸಮಾಜದ ಕಣ್ಣಾಗಿ ಕೆಲಸ ಮಾಡುತ್ತದೆ.ರಾಜ್ಯದಲ್ಲಿ ಎಲ್ಲ ಸ್ಥಿತಿಗತಿಗಳನ್ನು ವಾಸ್ತವ ಅಂಶಗಳನ್ನು ಭಿತ್ತರಿಸುವ ಮೂಲಕ ಏನು ಆಗುತ್ತಿದೆ ಅದನ್ನು ಸಮಾಜದ ಜನರಿಗೆ ತಿಳಿಸುವ ಜವಾಬ್ದಾರಿ ಮಾಧ್ಯಮದಾಗಿದೆ. ಪವರ್ ಟಿವ್ಹಿಯ ಮಾಲೀಕರ ಮೇಲೆ ಆರೋಪ ಬೇರೆ ವಿಚಾರ.

    ತನಿಖೆ ನಡೆಸುವುದಕ್ಕೆ ಅಭ್ಯಂತರವಿಲ್ಲ. ಆದರೆ ಇಂದು ಟಿವ್ಹಿ ವಾಹಿನಿ ಲೈವ್ ಬಂದ್ ಮಾಡುವುದರಿಂದ ಅಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರ ಬದುಕು ಏನಾಗಬೇಕು.ಪತ್ರಕರ್ತರ ಹಿತದೃಷ್ಠಿಯಿಂದ ವಾಹಿನಿಯನ್ನು ಸ್ಥಗಿತಗೊಳಿಸದೇ ಕಾನೂನು ಅಡಿಯಲ್ಲಿ ಕ್ರಮಕೈಗೊಳ್ಳಲು ಕೊಡಲೇ ಗೃಹ ಸಚಿವರಿಗೆ ನಿರ್ದೇಶನ ನೀಡಬೇಕೆಂದು ಮನವಿ ಮೂಲಕ ಒತ್ತಾಯಿಸಲಾಗಿದೆ ಎಂದರು.

 ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಶಿವಕುಮಾರ ಹುಬ್ಬಳ್ಳಿ.ಪ್ರಭುಗೌಡ ಪಾಟೀಲ.ನಾರಾಯಣ ಹೆಗಡೆ.ಸಂಕನಗೌಡ ದೇವಿಕೊಪ್ಪ.ರಮೇಶ ಎಚ್.ವಿಜಯಕುಮಾರ ಪಾಟೀಲ.ಫಕ್ಕಿರಯ್ಯ ಗಣಾಚಾರಿ.ಮಾರುತಿ ಮರಾಠೆ.ಕುಮಾರಯ್ಯ ಚಿಕ್ಕಮಠ.ಸಿದ್ದು ಆರ್ ಜೆ ಹಳ್ಳಿ.ಸಂಜೀವ ಅರಬಾವಿ.ಪ್ರಶಾಂತ ಮರೆಣ್ಣನವರ.ರವಿ ಹೂಗಾರ.ವಿನಾಯಕ ಬಡಿಗೇರ.ಶಿವು ಅಂಬಿಗೇರ.ಮಂಜುನಾಥ ಗುಡಿಸಾಗರ.ನಿಂಗಪ್ಪ ಆರೇರ ಹಾಗೂ ಅನೇಕ ಮಾಧ್ಯಮ ಮಿತ್ರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link