ಬೆಂಗಳೂರು: KPTCL ವಿದ್ಯುತ್ ಸ್ಥಾವರದಲ್ಲಿ ಸ್ಫೋಟ, 5 ಮಂದಿಗೆ ಗಾಯ!!

ಬೆಂಗಳೂರು :

     ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ವಿದ್ಯುತ್ ಸ್ಥಾವರದಲ್ಲಿ ಇಂದು ನಸುಕಿನಲ್ಲಿ ಸ್ಫೋಟ ಸಂಭವಿಸಿದ್ದು, ಐವರು ಉದ್ಯೋಗಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ.

    ನಗರದ ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಸ್ಥಾವರ ಇದೆ. ಇಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ.

     ‘ರಾತ್ರಿ ಪಾಳಿಯಲ್ಲಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು. ನಸುಕಿನ 3.30ರ ಸುಮಾರಿಗೆ ಗ್ಯಾಸ್ ಸೋರಿಕೆಯಾಗಿ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿತ್ತು’ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ಹೇಳಿದ್ದಾರೆ.

     ‘ಸ್ಥಾವರದಲ್ಲೇ ಇದ್ದ ಸಿಬ್ಬಂದಿ, ಭಾಗಶಃ ಬೆಂಕಿ ನಂದಿಸಿದ್ದರು. ಗಾಯಾಳುಗಳನ್ನು ಅವರೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಹೆಚ್ಚುವರಿ ವಾಹನಗಳು ಸ್ಥಾವರಕ್ಕೆ ಹೋಗಿ ಪೂರ್ತಿ ಬೆಂಕಿ ಆರಿಸಲಾಗಿದೆ’ ಎಂದೂ ತಿಳಿಸಿದರು.

     ‘ಬೆಳಗ್ಗೆ 3.30ರ ಸುಮಾರಿಗೆ ದೊಡ್ಡ ಶಬ್ಧ ಕೇಳಿಸಿತ್ತು. ಮನೆಯಿಂದ ಹೊರಗೆ‌ ಬಂದು ನೋಡಿದಾಗ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಪೊಲೀಸ್ ಠಾಣೆ ಹಾಗೂ ಅಗ್ನಿಶಾಮಕ ದಳದ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದೆವು’ ಎಂದು ಯಲಹಂಕ ಉಪನಗರ ನಿವಾಸಿಯೊಬ್ಬರು ಹೇಳಿದರು.

Recent Articles

spot_img

Related Stories

Share via
Copy link