ವಾಷಿಂಗ್ಟನ್ :
ಅಮೆರಿಕದಲ್ಲಿ ಇತ್ತೀಚೆಗೆ ಕೆಲಸದ ಸ್ಥಳದಲ್ಲಿ ನಡೆದ ಅತಿ ಭೀಕರ ಗುಂಡಿನ ದಾಳಿ ಇದು . ಅಮೆರಿಕದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದೆ. ಕೋಪಗೊಂಡ ವ್ಯಕ್ತಿಯೋರ್ವ ಕಚೇರಿಯಲ್ಲೇ ಗುಂಡು ಹಾರಿಸಿದ್ದು, 11 ಸಹೋದ್ಯೋಗಿಗಳನ್ನು ಬಲಿ ತೆಗೆದುಕೊಂಡಿದ್ದಾನೆ. ಈತನನ್ನು ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ.
ವರ್ಜಿನಿಯಾ ಬೀಚ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಂಜೆ ವೇಳೆ ಮುನ್ಸಿಪಲ್ ಕಟ್ಟಡದ ಒಳಗೆ ಆಗಮಿಸಿದ ಈತ ಏಕಾಏಕಿ ಗುಂಡು ಹಾರಿಸಿದ್ದ. ಈ ವೇಳೆ ಪೊಲೀಸರು ಅಲ್ಲಿದ್ದವರ ರಕ್ಷಣೆಗೆ ಮುಂದಾಗಿದ್ದರು. ಆಗ, ಪೊಲೀಸರ ಮೇಲೂ ಶಸ್ತ್ರಾಸ್ತ್ರಧಾರಿ ಗುಂಡು ಹಾರಿಸಲು ಮುಂದಾಗಿದ್ದ. ಪೊಲೀಸರು ಪ್ರತಿ ದಾಳಿ ನಡೆಸಿ ಆತನನ್ನು ಹತ್ಯೆಗೈದಿದ್ದಾರೆ.
“ಶಸ್ತ್ರಾಸ್ತ್ರಧಾರಿ ಮುನ್ಸಿಪಲ್ ಕಚೇರಿಯಲ್ಲೇ ಕೆಲಸ ಮಾಡಿಕೊಂಡಿದ್ದ. ಮೃತಪಟ್ಟ 11 ಜನರು ಆತನ ಸಹೋದ್ಯೋಗಿಗಳು. ಈ ವ್ಯಕ್ತಿ ಅಸಮಾಧಾನಗೊಂಡಿದ್ದ. ಈ ಕಾರಣಕ್ಕೆ ಗುಂಡು ಹಾರಿಸಿದ್ದಾನೆ, ಆದರೆ, ಯಾವ ಕಾರಣಕ್ಕೆ ಆತ ಅಸಮಾಧಾನಗೊಂಡಿದ್ದ ಎಂಬುದು ಅಧಿಕಾರಿಗಳು ತಿಳಿಸಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಹಾಗೂ ಎಫ್ಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
