ಹೈದರಾಬಾದ್ : 2.5ಕೋಟಿ ಮೌಲ್ಯದ ಚಿನ್ನ ವಶ

ಹೈದರಾಬಾದ್

       ಶಂಶಾಬಾದ್ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ನಿನ್ನೆ 25 ಕೋಟಿ ಮೌಲ್ಯದ 21 ಕಿಲೋ ಅಕ್ರಮ ಚಿನ್ನಾಭರಣಗಳನ್ನ ವಶಪಡಿಸಿಕೊಂಡಿದ್ದಾರೆ. ಈ ಗೋಲ್ಡ್ ಬಿಸ್ಕತ್ ಮತ್ತು ಆಭರಣಗಳಿಗೆ ಯಾವುದೇ ದಾಖಲೆಗಳಿರಲಿಲ್ಲ. ಗಲ್ಫ್ ದೇಶಗಳಿಂದ ಬಂದಿದ್ದ ಈ ಮಾಲುಗಳನ್ನ ಮುಂಬೈಗೆ ಸಾಗಿಸಲು ಯೋಜಿಸಲಾಗಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

      ಗಲ್ಫ್ ದೇಶದಿಂದ ಕೊರಿಯರ್ ಬಂದ ಈ ಸರಕನ್ನು ಹೈದರಾಬಾದ್​ನಲ್ಲಿ ಮುಂಬೈಗೆ ಹೋಗುವ ಸ್ಥಳೀಯ ಕಾರ್ಗೋ ಫ್ಲೈಟ್​ಗೆ ಹಾಕಲಾಗಿತ್ತು. ಸುಂಕದ ಅಧಿಕಾರಿಗಳು ತಪಾಸಣೆ ಮಾಡುವ ವೇಳೆ ಈ ಸರಕು ಸಿಕ್ಕಿದೆ. ಯಾವುದಕ್ಕೂ ದಾಖಲೆಗಳಿಲ್ಲದ್ದರಿಂದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 2 ಕಿಲೋನಷ್ಟು ಚಿನ್ನದ ಬಿಸ್ಕತ್​ಗಳಿದ್ದರೆ, ಉಳಿದ 19 ಕಿಲೋ ಚಿನ್ನ ಹಾಗೂ ವಜ್ರದ ಆಭರಣಗಳಿವೆ ಎಂದು ಅಧಿಕಾರಿಗಳು ಹೇಳಿರುವುದು ತಿಳಿದುಬಂದಿದೆ. ಈ ಚಿನ್ನಗಳನ್ನ ಕೊರಿಯರ್ ಮೂಲಕ ಹೈದರಾಬಾದ್​ಗೆ ಕಳುಹಿಸಿದ ವ್ಯಕ್ತಿ ಯಾರು ಎಂಬುದು ಗೊತ್ತಾಗಿಲ್ಲ. ತನಿಖೆ ನಡೆಸಲಾಗುತ್ತಿದೆ. 

    ಹೈದರಾಬಾದ್ ಏರ್​ಪೋರ್ಟ್​ನಲ್ಲಿ ಈ ವರ್ಷ ಸಿಕ್ಕಿಬಿದ್ದ ಮೊದಲ ಪ್ರಮುಖ ಕಳ್ಳ ಮಾಲು ಇದಾಗಿದೆ. 2019ರ ಅಕ್ಟೋಬರ್ ತಿಂಗಳಲ್ಲಿ ಇಂಡಿಗೋ ವಿಮಾನದ ಗ್ರಾಹಕ ಸೇವೆ ಸಿಬ್ಬಂದಿ ಸೇರಿದಂತೆ ಮೂವರು ವ್ಯಕ್ತಿಗಳು ಹೈದರಾಬಾದ್​ಗೆ ಚಿನ್ನವನ್ನು ಸ್ಮಗ್ಲಿಂಗ್ ಮಾಡಲು ಯತ್ನಿಸಿದಾಗ ಕಸ್ಟಮ್ಸ್ ಆಫೀಸರ್ ಕೈಗೆ ಸಿಕ್ಕಿಬಿದ್ದಿದ್ದರು. ಹತ್ತಿರಹತ್ತಿರ 2 ಕೋಟಿಯಷ್ಟು ಮೌಲ್ಯದ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ದುಬೈನಿಂದ ವಿಮಾನದ ಮೂಲಕ ಬಂದಿದ್ದ ವ್ಯಕ್ತಿಯೊಬ್ಬ ಐರನ್ ಬಾಕ್ಸ್​ನ ಹೀಟಿಂಗ್ ಕಾಯಿಲ್​ಗಳ ಜಾಗದಲ್ಲಿ ಚಿನ್ನವನ್ನು ಅಡಗಿಸಿಟ್ಟು ಕಳ್ಳಸಾಗಾಣಿಕೆ ಮಾಡಲು ಯತ್ನಿಸಿದ್ದು ಪತ್ತೆಯಾಗಿತ್ತು. ಅಧಿಕಾರಿಗಳು ಸುಮಾರು 9 ಕಿಲೋನಷ್ಟು ಚಿನ್ನವನ್ನು ಸೀಜ್ ಮಾಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap