ತುಮಕೂರು: ತಾಜ್ಯ ಘಟಕವಾಗುತ್ತಿರುವ ಹೆದ್ದಾರಿಯ ಸರ್ವಿಸ್ ರಸ್ತೆ

ತುಮಕೂರು
 
    ನಗರದ ಶ್ರೀದೇವಿ ಕಾಲೇಜಿನ ಬಳಿಯಿರುವ ಮೊಳೆ ಫ್ಯಾಕ್ಟರಿಯಿಂದ ಊರುಕೆರೆವರೆಗಿನ ಹೆದ್ದಾರಿಯ ಇಕ್ಕೆಲಗಳಲ್ಲಿರುವ ಸರ್ವಿಸ್ ರಸ್ತೆಯ ಬದಿಗಳಲ್ಲಿ ಕೋಳಿ ಮಾಂಸದ ಅಂಗಡಿಯವರು, ಬಾರ್ಬರ್ ಶಾಪ್‍ನವರು ಹಾಗೂ ಬಾರ್ ಮತ್ತು ರೆಸ್ಟೋರೆಂಟ್‍ನವರು ತಮ್ಮ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಪ್ರತಿನಿತ್ಯ ಸುರಿದು ಹೋಗುತ್ತಿದ್ದು, ಇದು ಸಾಂಕ್ರಾಮಿಕ ರೋಗಗಳಿಗೆ ಎಡೆಮಾಡಿಕೊಡುತ್ತಿದೆ.
    ಕೋಳಿ ಮಾಂಸದಂಗಡಿಯವರು ಕೋಳಿಪುಕ್ಕ, ಬಳಸಲಾಗದ ಮಾಂಸದ ತುಂಡುಗಳನ್ನು ಇಲ್ಲಿ ತಂದು ಹಾಕುತ್ತಿದ್ದಾರೆ. ಹೇರ್ ಕಟಿಂಗ್ ಸಲೂನಿನವರು ರಾಶಿ ರಾಶಿ ಕೂದಲುಗಳನ್ನು ಮೂಟೆಗಳಲ್ಲಿ ತಂದು ಸರ್ವೀಸ್ ರಸ್ತೆಯ ಇಕ್ಕೆಲಗಳಲ್ಲಿ ಎಸೆದು ಹೋಗುತ್ತಿದ್ದಾರೆ. ಅಷ್ಟೇ ಅಲ್ಲದೇ ಬಾರ್‍ಗಳವರು ಮದ್ಯದ ಪೊಟ್ಟಣಗಳು, ಮದ್ಯದ ಖಾಲಿ ಬಾಟಲಿಗಳು ಹಾಗೂ ಬಾರ್‍ನಲ್ಲಿ ದಿನವೂ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಇಲ್ಲಿ ತಂದು ಎಸೆದು ಹೋಗುತ್ತಿದ್ದು, ಇದರಿಂದ ಪರಿಸರ ಮಾಲಿನ್ಯವೂ ಆಗುತ್ತಿದೆ. ಊರುಕೆರೆ ಬಾಲಾಜಿನಗರದ ಬಳಿ ಬೋವಿಪಾಳ್ಯಕ್ಕೆ ಹೋಗುವ ದಾರಿಯ ಪಕ್ಕದಲ್ಲಿ ಎಸೆಯುವ ಕೋಳಿಮಾಂಸದ ಅಂಗಡಿಯ ತ್ಯಾಜ್ಯವನ್ನು ತಿನ್ನಲೇಂದೆ ಇಲ್ಲಿ ಧಡೂತಿ ನಾಯಿಗಳ ದಂಡು ಬೀಡುಬಿಟ್ಟಿದೆ.
   
    ಸರ್ವಿಸ್ ರಸ್ತೆಯಲ್ಲಿ ಓಡಾಡುವಾಗ ಇದರ ವಾಸನೆಯಿಂದ ಜನಸಾಮಾನ್ಯರಿಗೆ ತೊಂದರೆ ಯಾಗುತ್ತಿದ್ದು ಈಗಾಗಲೇ ಕೊರೋನಾ ಎಂಬ ಮಹಾಮಾರಿಯಿಂದ ವಿಶ್ವವೆ ತಲ್ಲಣಗೊಂಡಿದ್ದು, ಈ ರೀತಿಯ ತ್ಯಾಜ್ಯ ಎಸೆಯುವುದರಿಂದ ಮನುಷ್ಯರ ಆರೋಗ್ಯದ್ದ ಮೇಲೆ ದುಷ್ಪರಿಣಾಮ ಬೀರುತ್ತದೆ ಹಾಗೂ ಇದು ಸಾಂಕ್ರಾಮಿಕ ರೋಗಗಳಿಗೆ ಎಡೆಮಾಡಿಕೊಡುತ್ತಿದೆ. ಸಂಭಂದ ಪಟ್ಟವರು ಇಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವರೆ? 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link