ರೈತರ ಆದಾಯ ಹೆಚ್ಚಿಸಲು ರೈತರ ಕ್ರಿಯಾ ಯೋಜನೆ ಸಹಕಾರಿ..

ರಟ್ಟೀಹಳ್ಳಿ

     ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2021-22 ನೇ ಸಾಲಿನ ರೈತರ ಕ್ರೀಯಾ ಯೋಜನೆ ತಯಾರಿಸಲಾಗುತ್ತಿದ್ದು ,ರೈತರು ತಮ್ಮ ವೈಯಕ್ತಿಕ ಕಾಮಗಾರಿಗಳನ್ನು ಗ್ರಾಮ ಪಂಚಾಯತಿಗೆ ಬೇಟಿ ನೀಡಿ  ಬೇಡಿಕೆ ಪೆಟ್ಟಿಗೆಯಲ್ಲಿ ತಮ್ಮ ಆಯ್ಕೆಯ ಕಾಮಗಾರಿಗಳನ್ನು ಬರೆಸಬೇಕು ಎಂದು ತಾಲ್ಲೂಕ ಪಂಚಾಯತಿ ಸಹಾಯಕ ನಿರ್ದೆಶಕರಾದ ಶಂಕರ ಕಿಚಡಿ ರೈತರಿಗೆ ಕರೆ ನೀಡಿದರು.

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ಹಾವೇರಿ, ತಾಲೂಕು ಪಂಚಾಯತ್ ರಟ್ಟಿಹಳ್ಳಿ ಇವರ ಸಹಯೋಗದಲ್ಲಿ ಬುಧವಾರ ಬೆಳಗ್ಗೆ ಹನ್ನೊಂದು ಗಂಟೆಗೆ ಮಹತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರೈತರ ಕ್ರಿಯಾ ಯೋಜನೆ ಜಾಗೃತಿ ರಥಕ್ಕೆ ಚಾಲನೆ ನೀಡಿ ಮಾತನಾಡಿದರು. ಉದ್ಯೋಗ ಖಾತ್ರಿ ಯೋಜನೆಯಡಿ ರೈತರ ಕ್ರಿಯಾ ಯೋಜನೆಯ ಮಾಸಾಚರಣೆಯಲ್ಲಿ ರೈತರು ಸಕ್ರಿಯವಾಗಿ ಭಾಗಿಯಾಗಿ, ತಮಗೆ ಅನುಕೂಲವಾಗುವ ವ್ಯಯಕ್ತಿಕ ಕಾಮಗಾರಿಗಳನ್ನು ಕ್ರಿಯಾ ಯೋಜನೆಯಲ್ಲಿ ಸೇರಿಸಿ ಅನುಷ್ಠಾನ ಮಾಡಿಕೊಂಡಾಗ ತಮ್ಮ ಆದಾಯ ಹೆಚ್ಚಾಗಲಿದೆ, ಗ್ರಾಮೀಣಾಭಿವೃದ್ಧಿ ಕನಸ್ಸು ಕಂಡಿದ್ದ ಮಹತ್ಮಾಗಾಂಧೀಜಿಯರವ ಕನಸ್ಸು ನನಸಾಗಲಿದೆ ಎಂದರು.

    ತಾಲೂಕಿನ 19 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ರೈತ ಕ್ರಿಯಾ ಯೋಜನೆ ಮಾಹಿತಿ ರಥ ಸಂಚರಿಸಲಿದೆ, ಧ್ವನಿ ವರ್ದಕದ ಮೂಲಕ ಸ್ಥಳೀಯ ಗ್ರಾಮ ಪಂಚಾಯತಿಗಳೊಂದಿಗೆ ರೈತ ಸಮುದಾಯಕ್ಕೆ ಯೋಜನೆಯ ಕುರಿತು ಜಾಗೃತಿ ಮೂಡಿಸಲಾಗುವುದು, ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ರೈತರು ನಿಮ್ಮ ಗ್ರಾಮ ಪಂಚಾಯತಿಗೆ ಬೇಟಿ ನೀಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆಯಬಹದು ಅಥವಾ ಆನ್ ಲೈನ್ ಮೂಲಕ ಬೇಡಿಕೆ ಸಲ್ಲಿಸಬಹುದಾಗಿದೆ ಎಂದು ಹೇಳಿದರು.

    ಆಸಕ್ತ ರೈತರು ಯೋಜನೆಯಡಿ ತೋಟಗಾರಿಕಾ ಬೆಳೆಗಳಾದ ಅಡಿಕೆ,ತೆಂಗು, ರೇಷ್ಮೆ, ಚಿಕ್ಕು, ಬಾಳೆ, ಮಾವು,ಗುಲಾಬಿ, ಮಲ್ಲಿಗೆ, ನುಗ್ಗೆ , ಪೇರಲ, ಸಪೋಟ,ದಾಳಿಂಬೆ,ಪಪ್ಪಾಯಿ, ಈರುಳ್ಳಿ ಗೋದಾಮು, ಮೇಕೆ ಶೇಡ್ , ಬಚ್ಚಲು ಗುಂಡಿ, ದನದಕೊಟ್ಟಿಗೆ, ಕೃಷಿ ಹೊಂಡ, ಬದುವು ನಿರ್ಮಾಣ, ಇಂಗುಗುಂಡಿ, ಅರಣೀಕರಣದ ಸಸಿಗಳು ಇತ್ಯಾದಿ ಕಾಮಗಾರಿಗಳನ್ನು ಮಾಡಿಕೊಳ್ಳಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಮನುಕುಮಾರ, ಕಾರ್ಯದರ್ಶಿ ಮಹೇಶಪ್ಪ, ಭರತ ಅಡವೇರವ, ಎಂಐಎಸ್ ಸಂಯೋಜಕರು ಸುನಿತಾ ಎಸ್, ಐಇಸಿ ಸಂಯೋಜಕರಾದ ಕುಮಾರಯ್ಯ ಚಿಕ್ಕಮಠ, ಡಿ ವಿ ಅಂಗೂರು, ಬಿಎಫ್‍ಟಿ ಮಂಜುನಾಥ ವಾಲಗದ, ಕರಬಸಪ್ಪ ಕೋಣನತೆಲೆ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link