ಶಿರಾ
ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇವಲ ನಾಮಕಾವÀಸ್ಥೆಯ ಮುಖ್ಯಮಂತ್ರಿಯಾಗಿದ್ದು, ಅವರ ಪುತ್ರ ವಿಜಯೇಂದ್ರ ಮುಖ್ಯಮಂತ್ರಿ ಎಂಬಂತೆ ಬೀಗುತ್ತಿದ್ದು, ಉಪ ಚುನಾವಣೆಯ ನಂತರ ಸಿ.ಎಂ. ಯಡಿಯೂರಪ್ಪನವರ ಕುರ್ಚಿಗೆ ಕಂಠಕ ಬರುತ್ತದೆ. ಅವರು ಪೂರ್ಣ ಅವಧಿಯ ಸಿ.ಎಂ. ಆಗುವುದಿಲ್ಲ ಎಂದು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಭವಿಷ್ಯ ನುಡಿದರು.
ನಗರದ ಕೆ.ಪಿ.ಸಿ.ಸಿ. ಮಾಧ್ಯಮ ಮತ್ತು ಸಂವಹನ ಕಚೆÉೀರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕಾನೂನು ಕಟ್ಟಳೆಗಳಿಗೆ ಗೌರವವೆ ಇಲ್ಲದಂತಾಗಿದೆ. ಮನಸೋ ಇಚ್ಛೆ ಕಾಯಿದೆ ರೂಪಿಸಿ ಕೇಂದ್ರ ಹಾಗೂ ರಾಜ್ಯ ಬಿ.ಜೆ.ಪಿ. ಸರ್ಕಾರಗಳು ಜನರಿಂದ ನಗೆ ಪಾಟಲಿಗೆ ಈಡಾಗಿವೆ ಎಂದರು.
ಶಿರಾ ಉಪ ಚುನಾವಣೆಯಲ್ಲಿನ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಗ್ರಾಮೀಣ ಹಾಗೂ ಪಟ್ಟಣದ ಜನತೆ ಕೊಂಡಾಡುತ್ತಿದ್ದಾರೆ. ಈ ಹಿಂದೆ ಮಾಡಿದ ತಪ್ಪನ್ನು ಮತ್ತೊಮ್ಮೆ ಮಾಡುವುದಿಲ್ಲ ಅನ್ನುತ್ತಿದ್ದಾರೆ. ಬಹುಮತಗಳಿಂದ ಜಯಚಂದ್ರ ಗೆಲ್ಲುವುದು ಖಚಿತ ಎಂದರು.
ಮಾಜಿ ಸಂಸದ ಮುದ್ದಹನುಮೇಗೌಡ ಮಾತನಾಡಿ ಜಯಚಂದ್ರ ಅವರು ನನಗೆ ಅತ್ಯಂತ ನಿಕಟವರ್ತಿಗಳು. ಕ್ಷೇತ್ರದ ಅಭಿವೃದ್ಧಿಗೆ ಅವರ ತುಡಿತವನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ಇಡೀ ರಾಜ್ಯದಲ್ಲಿ ಯಾರೂ ಕೂಡ ತಂದಿಲ್ಲದಂತಹ ಕೋಟ್ಯಂತರ ರೂ.ಗಳ
ಅನುದಾನವನ್ನು ತಂದು ಅಭಿವೃದ್ಧಿ ಕೈಗೊಂಡಿದ್ದು ಮತದಾರರು ಅವರ ಆಯ್ಕೆಗೆ ಸಹಕರಿಸಿ ಎಂದರು.
ಮಾಜಿ ಸಂಸದ ಧ್ರ್ರುವನಾರಾಯಣ್ ಮಾತನಾಡಿ, ಉದ್ಯೋಗ ಖಾತರಿ ಯೋಜನೆ ಎಂದರೆ ಎಲ್ಲರೂ ಹೆದರುವುದು ಸಹಜ. ಇಂತಹ ಮಹತ್ವದ ಯೋಜನೆಯಿಂದ ಅತ್ಯುತ್ತಮ ಗುಣಪಟ್ಟದ ಬ್ಯಾರೇಜ್ ಕಾಮಗಾರಿಗಳನ್ನು ಕೋಟಿ ರೂ.ಗಳ ವೆಚ್ಚದಲ್ಲಿ ಕಟ್ಟಿಸಿದ ಜಯಚಂದ್ರ ಅವರ ತಂತ್ರಗಾರಿಕೆ ನಿಜಕ್ಕೂ ಶ್ಲಾಘನಾರ್ಹ. ಅವರ ಆಯ್ಕೆ ಮಾಡುವ ಮೂಲಕ ಶಿರಾ ಜನತೆ ಮತ್ತೊಮ್ಮೆ ಅಭಿವೃದ್ಧಿಯ ಪರ್ವ ಕಾಣಬೇಕು ಎಂದರು.ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಸಚಿವ ಸಂತೋಷ್‍ಲಾಡ್, ನಿಕೇತ್‍ಗೌಡ, ಎಸ್.ಎನ್.ಕೃಷ್ಣಯ್ಯ ಸೇರಿದಂತೆ ಅನೇಕ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
