ಕಠ್ಮಂಡು :
ಜಗತ್ತಿನ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ನ ಹೊಸ ಎತ್ತರವನ್ನ ಘೋಷಣೆ ಮಾಡಲಾಗಿದೆ.
ಈಗ ಮೌಂಟ್ ಎವರೆಸ್ಟ್ ಬರೋಬ್ಬರಿ 8,848.86 ಮೀಟರ್ ಎತ್ತರವಿದೆ ಅಂತ ನೇಪಾಳ ಸರ್ಕಾರ ಘೋಷಿಸಿದೆ. ಈ ಹಿಂದೆ ಇದರ ಎತ್ತರ 8,848 ಮೀಟರ್ ಅಂತ ಬಹುತೇಕ ಎಲ್ಲಾ ದೇಶಗಳು ಒಪ್ಪಿಕೊಂಡಿದ್ದವು. ಆದರೆ 2015ರಲ್ಲಿ ನೇಪಾಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪನದ ಬಳಿಕ ಈ ಶಿಖರದ ಎತ್ತರ ಕೂಡ ಬದಲಾಗಿರಬಹುದು ಎಂಬ ಊಹಾಪೋಹ ಎದ್ದಿತ್ತು. ಹೀಗಾಗಿ 2019ರಲ್ಲಿ ನೇಪಾಳ ಮತ್ತು ಚೀನಾ ಸರ್ಕಾರ ಸೇರಿಕೊಂಡು ಮೌಂಟ್ ಎವರೆಸ್ಟ್ನ ಎತ್ತರವನ್ನ ಪುನಃ ಅಳೆಯುವ ಕೆಲಸ ಶುರು ಮಾಡಿದ್ದವು.
ಇದೀಗ ಒಂದು ವರ್ಷದ ಬಳಿಕ ಅದರ ಹೊಸ ಎತ್ತರ ಘೋಷಣೆಯಾಗಿದೆ. ಇಲ್ಲಿವರೆಗೆ 1954ರಲ್ಲಿ ಸರ್ವೆ ಆಫ್ ಇಂಡಿಯಾ ನೀಡಿದ್ದ 8,848 ಮೀಟರ್ ಅಂತಾನೇ ಎಲ್ಲರೂ ಒಪ್ಪಿಕೊಂಡಿದ್ದರು. ಇದೀಗ ಮೌಂಟ್ ಎವರೆಸ್ಟ್ ಅದಕ್ಕಿಂತ 86 ಸೆಂಟಿ ಮೀಟರ್ನಷ್ಟು ಹೆಚ್ಚು ಎತ್ತರವಿದೆ ಅಂತ ನೇಪಾಳ ಘೋಷಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
