ಚಿಕ್ಕನಾಯಕನಹಳ್ಳಿ :
ಕೆ.ಎಸ್.ಆರ್.ಟಿ.ಸಿ ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗಾಗಿ ಸರ್ಕಾರ ಮತ್ತು ನೌಕರರ ನಡುವೆ ನೆಡಯುತ್ತಿರುವ ಹೋರಾಟಕ್ಕೆ ಪಟ್ಟಣದ ಜನತೆ ಮೂರು ದಿನದಿಂದ ಸುಸ್ತಾಗಿದ್ದಾರೆ, ಬೆಂಗಳೂರಿಗೆ ಹೋಗುವ ಸಲುವಾಗಿ ನೀಡುತ್ತಿದ್ದ ಹಣಕ್ಕಿಂತ ಮೂರು ಪಟ್ಟು ಹಣ ಹೆಚ್ಚು ವೆಚ್ಚ ನೀಡಿ ಪ್ರಯಾಣಿಸಿರುವ ಘಟನೆ ನಡೆದಿದೆ.
ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬ ಸಚಿವರ ಹೇಳಿಕೆಯಿಂದ ಆಕ್ರೋಶಗೊಂಡ ನೌಕರರು ಕೆ.ಎಸ್.ಆರ್.ಟಿ.ಸಿ ಬಸ್ ಚಾಲನೆಗೆ ಇಳಿಯಲೇ ಇಲ್ಲ, ಇದರಿಂದ ರಾಜ್ಯದ ನಾಗರೀಕರ ಜೊತೆ ತಾಲ್ಲೂಕಿನ ಪ್ರಯಾಣಿಕರು ನರಳಿದರು.
ಮುಂಜಾನೆಯಿಂದಲೇ ಬೇರೆ ಊರಿಗೆ ಪ್ರಯಾಣ ಬೆಳೆಸಲು ಮುಂದಾದ ಹಲವರು ಬಸ್ ಗಳಿಲ್ಲದೆ ಪರದಾಡಿದ್ದು ಕಂಡು ಬಂದಿತು. ಹಲವರು ಬೆಂಗಳೂರು, ತುಮಕೂರು, ತಿಪಟೂರಿಗೆ ಹೆಚ್ಚಾಗಿ ಪ್ರಯಾಣಿಸಲು ಮುಂದಾಗಿದ್ದರು ಆದರೆ ಇವರಿಗೆ ಬಸ್ ಗಳಿಲ್ಲದೆ ತೀವ್ರ ತೊಂದರೆ ಅನುಭವಿಸಿದ್ದು ಕಂಡುಬಂದಿತು.
ಪಟ್ಟಣದ ನಿವಾಸಿ ಮೋಹನ್ ಎಂಬುವವರು ಬೆಂಗಳೂರಿಗೆ ಪ್ರಯಾಣಿಸಲೇ ಬೇಕಾದ ಅನಿವಾರ್ಯ ಉಂಟಾದ್ದರಿಂದ ಮೂರು ಪಟ್ಟು ಹೆಚ್ಚು ಹಣ ವೆಚ್ಚವಾಯಿತು, ಮೊದಲು 150ರೂ ಗೆ ಬೆಂಗಳೂರು ತಲುಪುತ್ತಿದ್ದೆ, ಆದರೆ ಈಗ 400ರೂ ಖರ್ಚಿಗೆ ಬೆಂಗಳೂರು ತಲುಪಿದೆ ಎಂಬ ಹೇಳಿಕೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ