ಕೊರೊನಾ ಸಮಯದಲ್ಲಿ ಸಮಯ ಸಾಧಿಸುತ್ತಿರುವ ವಂಚಕರು

ತಿಪಟೂರು

     ಕೊರೊನಾವನ್ನೇ ಬಂಡವಾಳ ಮಾಡಿಕೊಂಡಿರುವ ಚಾಲಾಕಿ ಸೈಬರ್ ಕಳ್ಳರು ತಮ್ಮ ದಾಳವನ್ನು ಉರುಳಿಸುತ್ತಿದ್ದು ಅಮಾಯಕ ಜನರು ಎಚ್ಚೆತ್ತುಕೊಳ್ಳದೇ ಇದ್ದರೆ ತಮ್ಮ ಹಣವನ್ನು ಕಳೆದು ಕೊಳ್ಳುವುದು ನಿಶ್ಚಿತವಾಗಿದೆ.

     ಕೋವಿಡ್-19 ರಿಂದ ಅನೇಕ ಜನರು ಸಂಕಷ್ಟಕ್ಕೆ ಈಡಾಗಿದ್ದು, ಈ ಸಮಯದಲ್ಲಿ ಸರ್ಕಾರಿ ಅಧಿಕಾರಿಗಳನ್ನು ಬಿಟ್ಟರೆ ಬಹುತೇಕ ಜನರು ತಮ್ಮ ದಿನನಿತ್ಯದ ಖರ್ಚಿಗೂ ಹಣವಿಲ್ಲದಂತಾಗಿದೆ. ಇಂತಹ ಸಮಯವನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು ಕೆಲವು ಆಯ್ದ ಇಲ್ಲ ಈ ಮೊದಲೇ ಹಲವಾರು ಕಂಪನಿಗಳಲ್ಲಿ ಸಾಲವನ್ನು ಹೊಂದಿವವರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದ ಜಾಹೀರಾತನ್ನು ನೀಡುತ್ತಾರೆ. ಇದನ್ನು ನಂಬುವ ಜನರು ಕಡಿಮೆ ಬಡ್ಡಿಯ ಜೊತೆಗೆ, ಯಾವುದೇ ಆಧಾರವಿಲ್ಲದೆ ಕೇವಲ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್‍ಖಾತೆಯ ಸಂಖ್ಯೆಯನ್ನು ನೀಡಿದರೆ ಸಾಕು ತಮ್ಮ ಖಾತೆಗೆ ಸಾಲದ ಮೊತ್ತ ಜಮೆಯಾಗುತ್ತದೆ ಎಂದು ತಿಳಿದು ತಮ್ಮ ವೈಯಕ್ತಿಕ ದಾಖಲೆಗಳನ್ನು ನೀಡುತ್ತಾರೆ.

     ಹೀಗೆ ಮಾಹಿತಿಯನ್ನು ನೀಡಿದ ತಕ್ಷಣ, ಅಥವಾ ಒಂದು ದಿನ ಕಳೆದ ಮೇಲೆ ಗ್ರಾಹಕರ ನಂಬರ್‍ಗೆ ವಿವಿಧ ಸಾಲ ನೀಡುವ ಕಂಪನಿಗಳ ಹೆಸರನ್ನು ಉದಾಹರಣೆಗೆ ಬಜಾಜ್ ಫಿನ್‍ಸರ್ವಿಸ್, ಬಿರ್ಲಾ ಫೈನಾನ್ಸ್ ಕಂಪೆನಿ ಯಿಂದ ಕರೆ ಮಾಡುತ್ತಿದ್ದೇವೆ ಎಂದು ಹೇಳಿ ಕರೆ ಮಾಡುವರು. ಈ ಕರೆಯಲ್ಲಿ ಮುಖ್ಯವಾಗಿ ಎಲ್ಲರೂ ಹಿಂದಿಯಲ್ಲಿ ಮಾತನಾಡುತ್ತಾರೆ. ನಮ್ಮವರು ಮೊದಲೆ ಕನ್ನಡದ ಭಾಷಾಭಿಮಾನಿಗಳು ಆದರೂ ಅಲ್ಪಸ್ವಲ್ಪ ಹಿಂದಿಯಲ್ಲಿ ಮಾತನಾಡುತ್ತಾರೆ, ಆಗ ಅವರು ನಿಮಗೆ ಸಾಲದ ಮೊತ್ತ ಏಕೆ ಬೇಕು? ನೀವು ಏನು ಮಾಡುತ್ತಿದ್ದೀರಿ ಎಂದು ಕೇಳಿ ಕೊನೆಗೆ ನಾವು ನಿಮಗೆ ಸಾಲವನ್ನು ನೀಡುತ್ತೇವೆ.

   ಆದರೆ ನೀವು ನಮಗೆ ದಾಖಲೆಗಳನ್ನು ಸಂಸ್ಕರಿಸಲು 5500 ರೂ.ಗಳನ್ನು ನಮ್ಮ ಖಾತೆಗೆ ಹಾಕಬೇಕಾಗುತ್ತದೆ ಎಂದು ಹೇಳುತ್ತಾರೆ. ಸಾಲದ ಆಸೆಯಿಂದ ಅವರು ಹೇಳಿದ ಖಾತೆಗೆ ಹಣವನ್ನು ಹಾಕಿದ ಮರುಕ್ಷಣವೆ ಅವರ ಮೊಬೈಲ್ ನಂಬರ್ ಮತ್ತು ವಾಟ್ಸ್‍ಆಪ್ ನಂಬರ್ ಬ್ಲಾಕ್ ಆಗಿರುತ್ತದೆ. ಈ ರೀತಿಯ ವಂಚನೆ ನಡೆಯುತ್ತಿದ್ದು ಸಾರ್ವಜನಿಕರು ಇವರ ಮಾತನ್ನು ನಂಬಿ ಹಣವನ್ನು ಹಾಕಿದರೆ ಕೊರೊನಾ ಸಂದಿಗ್ಧ ಸಮಯದಲ್ಲಿ ತಮ್ಮ ಹಣ ತಿರುಪತಿ ಹುಂಡಿಗೆ ಹಾಕಿದಂತಾಗುತ್ತದೆ.

ಕಂಪನಿ ಇರುವುದು ರಾಜಸ್ಥಾನದಲ್ಲಿ, ಖಾತೆ ಇರುವುದು ಪಶ್ಚಿಮ ಬಂಗಾಳದಲ್ಲಿ :

   ಇನ್ನು ಈ ರೀತಿಯಾಗಿ ಕರೆಮಾಡುವವರು ಹೆಚ್ಚಿನದಾಗಿ ಉತ್ತರ ಭಾರತದವರಾಗಿದ್ದು ಅದರಲ್ಲೂ ಬಜಾಜ್ ಫಿನ್‍ಸರ್ವ್ ಎಂದು ಹೇಳುವವರು ಕಲ್ಕತ್ತಾ ಮೂಲದಿಂದ ಕರೆಮಾಡುತ್ತಿದ್ದು ನಮ್ಮ ಕಂಪನಿಯ ಮುಖ್ಯ ಕಛೇರಿ ರಾಜಾಸ್ಥಾನದಲ್ಲಿದೆ ಎಂದು ಹೇಳುತ್ತಾರೆ ಆದರೆ ನಾವು ಹಣ ಹಾಕಲು ನೀಡುವ ಬ್ಯಾಂಕ್ ಖಾತೆ ಮಾತ್ರ ಪಶ್ಚಿಮಬಂಗಾಳದ 24ನೇ ಪರಗಣ ಜಿಲ್ಲೆಯ ಅಶಹರುನಲ್ಲಿದೆ ಎಂದು ಆನ್‍ಲೈನ್‍ಮಾಹಿತಿ ದೊರೆಯುತ್ತಿದೆ ಆದ್ದರಿಂದ ಸಾಲದ ಆಸೆಗೆ ಹೋಗಿ ಕೂಡಿಟ್ಟ ಹಣವನ್ನು ಕಳೆದುಕೊಳ್ಳುವುದು ಎಷ್ಟು ಸರಿ.
ನನಗೆ ಹಣದ ಅವಶ್ಯಕತೆ ಇದ್ದು ಯಾರು ಸಾಲವನ್ನು ಕೊಡದ ಕಾರಣ ಆನ್‍ಲೈನ್‍ನಲ್ಲಿ ಹುಡುಕಿದಾಗ ನಾವು ನಿಮಗೆ ಸಾಲವನ್ನು ನೀಡುತ್ತೇವೆ ಆದರೆ ದಾಖಲೆಗಳನ್ನು ಸಂಸ್ಕರಿಸಲು ನಮ್ಮ ಖಾತೆಗೆ ಹಣಹಾಕಿ ಎಂದಾಗ ನಾನು ಹಣ ಹಾಕಿದ ತಕ್ಷಣವೇ ಆ ವಾಟ್ಸ್‍ಆಪ್‍ನಂಬರ್ ಬ್ಲಾಕ್ ಆಗಿತ್ತು.
ಮೋಹನ್

ಮೈಕ್ರೋಪೈನಾನ್ಸ್ ನಿಂದ ಬಡ್ಡಿ ಹೆಚ್ಚಾಗುವ ಬೆದರಿಕೆ :

     ಸರ್ಕಾರದ ಆದೇಶದ ಪ್ರಕಾರ ಕೋವಿಡ್-19ರ ಲಾಕ್‍ಡೌನ್ ಸಮಯದಲ್ಲಿ ಎಲ್ಲಾ ಸಾಲದ ಕಂತನ್ನು ಮುಂದಕ್ಕೆ ಹಾಕಿ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಆದೇಶ ನೀಡಿದ್ದರು ಸಹ ಇಲ್ಲಿನ ಬಹಳಷ್ಟು ಮೈಕ್ರೊ ಪೈನಾನ್ಸ್‍ಗಳು ನೀವು ಕಂತನ್ನು ಕಟ್ಟಿದ್ದರೆ ಪರವಾಗಿಲ್ಲವೆಂದು ಮೊದಲು ಹೇಳುತ್ತಿದ್ದರು.

     ಆದರೆ 2 ತಿಂಗಳುಗಳ ನಂತರ ಹೊಸ ವರಸೆಯನ್ನು ತೆಗೆದುಕೊಂಡಿರುವ ಪೈನಾನ್ಸ್‍ನವರು ನೀವು ಹಣವನ್ನು ಕಟ್ಟುವುದೇನು ಬೇಡ ಆದರೆ ನೀವು 3 ತಿಂಗಳು ಕಟ್ಟದೇ ಹೋದರೆ ಬಡ್ಡಿ ಹೆಚ್ಚಾಗಿ 1 ಕಂತು ಹೆಚ್ಚಾಗುತ್ತದೆಂದು ಬೆದರಿಕೆ ಹಾಕುತ್ತಿದ್ದಾರೆ.
ಇದರಿಂದ ನೊಂದ ಬಡವರು ಮರ್ಯಾದೆಗೆ ಅಂಜಿ ಮತ್ತು ಇನ್ನು ಒಂದು ಕಂತು ಹೆಚ್ಚಾದರೆ ಏನು ಮಾಡುವುದೆಂದು ಸಾಲವನ್ನು ಕಟ್ಟುತ್ತಿದ್ದಾರೆ.

ಸಾಹುಕಾರರು ಸಾಲವನ್ನು ಕೊಡುತ್ತಿಲ್ಲ :

     ಸಾರ್ವಜನಿಕರ ಉಳ್ಳವರನ್ನು ಸಾಲವನ್ನು ಕೊಡತ್ತಿದ್ದರು ಆದರೆ ಯಾವಾಗ ಕೊರೊನಾ ಪ್ರಾರಂಭವಾಯಿತೋ ಆವಾಗ ಸ್ವಲ್ಪಸ್ವಲ್ಪ ಕೊಡುತ್ತಿದ್ದಾ ಸಾಹುಕಾರರುಗಳು ಈಗ ಹಣವನ್ನೇ ಬಿಚ್ಚುತ್ತಿಲ್ಲ. ಸಾರ್ವಜನಿಕರು ಹೇಳುವ ಪ್ರಕಾರ ಕೊರೊನಾ ಹೀಗೆಯೇ ಮುಂದುವರೆದರೆ ನಮ್ಮ ವ್ಯಾಪಾರಕ್ಕೆ ಹಾಕಿದ ಬಂಡವಾಳ ಬರುವುದೇ ಕಷ್ಟವಿರುವಾಗ ಇನ್ನು ಲಾಭದ ಮಾತೆಲ್ಲಿ ಎಂದು ತಿಳಿದು ದಿನನಿತ್ಯ ಹಣವನ್ನು ಸಾಲಕ್ಕೆ ಕೊಡುವವರು ಕೊಡದೇ ಇರುವಾಗ ನಾವೆಲ್ಲೆ ಹೋಗಿ ಸಾಲಮಾಡಿ ಅದನ್ನು ತೀರಿಸಿ ನಮ್ಮ ಲಾಭದಲ್ಲಿ ಸಂಸಾರವನ್ನು ಸಾಗಿಸುವುದಾದರು ಹೇಗೆಂದು ಕೆಲ ಬೀದಿಬದಿ ವ್ಯಾಪಾರಿಗಳು ತಿಳಿಸಿದ್ದಾರೆ.

     ಹೀಗೆ ಸಾಲವನ್ನು ಬೇಡಲು ಹೋಗಿ ಸಾಲವೂ ಇಲ್ಲ ಕೂಡಿಟ್ಟ ಹಣವೂ ಇಲ್ಲದೇ ಹೋಗಿ ಇಲ್ಲದ ಅಪಘಾತಗಳನ್ನು ಮೈಮೇಲೆ ಎಳೆದುಕೊಳ್ಳುವ ಬದಲು ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದ ಗಾದೆಯಂತೆ ಬದುಕಿದರೆ ಉತ್ತಮ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link