ತುಮಕೂರು :
ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ನೀಡಿರುವ (ಐಸಿಯು ಅನ್ವೀಲ್) ವಿಶೇಷ ಆ್ಯಂಬುಲೆನ್ಸ್ ಹಾಗೂ ಐಡಿಬಿಐ ಬ್ಯಾಂಕ್ ವತಿಯಿಂದ ನೀಡಿರುವ ಸಾಮಾನ್ಯ ಆ್ಯಂಬುಲೆನ್ಸ್ ಅನ್ನು ಕಾನೂನು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ ಮಾಧುಸ್ವಾಮಿ ಅವರು ಇಂದು ಸಂಜೆ ಜಿಲ್ಲಾಸ್ಪತ್ರೆಗೆ ಹಸ್ತಾಂತರಿಸಿದರು.
ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸ್ಮಾರ್ಟ್ ಸಿಟಿ ಮಿಷನ್ ಅನುದಾನದಲ್ಲಿ ಒದಗಿಸಿರುವ ಅತ್ಯಾಧುನಿಕ ಸೌಲಭ್ಯವುಳ್ಳ 1 ಆ್ಯಂಬುಲೆನ್ಸ್ ಹಾಗೂ ಸಾಮಾನ್ಯ ಆ್ಯಂಬುಲೆನ್ಸ್ 1 ಹಾಗೂ ಹತ್ತು ಇಸಿಜಿ ಯಂತ್ರಗಳು ವೋಜಿ ಕಂಪನಿ ವತಿಯಿಂದ ನೀಡಿರುವ 5 ಹೋಮ್ ಮಾನಿಟರಿಂಗ್ ಯಂತ್ರ(ಹೋಮ್ ಐಸೋಲೇಶನ್ನಲ್ಲಿರುವವರಿಗೆ)ಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಸ್ಪತ್ರಗೆ ಹಸ್ತಾಂತರ ಮಾಡಿದರು.
ಹಸ್ತಾಂತರ ಮಾಡಿ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಗೆ ರೋಗಿಗಳ ಅನುಕೂಲಕ್ಕಾಗಿ ಒಂದು ವಿಶೇಷ ಆ್ಯಂಬುಲೆನ್ಸ್ ಹಾಗೂ 1 ಸಾಮಾನ್ಯ ಆ್ಯಂಬುಲೆನ್ಸ್ ಒದಗಿಸಲಾಗಿದೆ ಅಲ್ಲದೇ 10 ಇಸಿಜಿ ಯಂತ್ರಗಳು ಹಾಗೂ 5 ಹೋಮ್ ಮಾನಿಟರಿಂಗ್ ಯಂತ್ರಗಳನ್ನು ಇಂದು ಜಿಲ್ಲಾಸ್ಪತ್ರೆಗೆ ಹಸ್ತಾಂತರಿಸಲಾಗಿದೆ.
ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಬಿ ಜ್ಯೋತಿಗಣೇಶ್, ಮಹಾಪೌರರಾದ ಫರೀದಾಬೇಗಂ, ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಜಿಲ್ಲಾಧಿಕಾರಿ ಡಾ. ರಾಕೇಶ್ಕುಮಾರ್, ಡಿಹೆಚ್ ಡಾ|| ನಾಗೇಂದ್ರಪ್ಪ, ಜಿಲ್ಲಾ ಸರ್ಜನ್ ಡಾ|| ವೀರಭದ್ರಯ್ಯ, ಸ್ಮಾರ್ಟ್ಸಿಟಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ.ರಂಗಸ್ವಾಮಿ, ಐಡಿಬಿಐ ಶಾಖಾ ವ್ಯವಸ್ಥಾಪಕ ಮನೀಶ್ ಡೂಡಕಿ ಸೇರಿದಂತೆ ವೈದ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
