ಖುಷಿ ಖುಷಿಯಾಗಿ ನ್ಯೂಜಿಲೆಂಡ್‌ ಪೌರತ್ವ ಸ್ವೀಕರಿಸಿದ ಯುವಕ

ನವದೆಹಲಿ:

     ಬದುಕು ಕಟ್ಟಿಕೊಳ್ಳುವ ಸಲುವಾಗಿ ಮನೆ ಬಿಟ್ಟು ಬೇರೆ ಊರುಗಳಿಗೆ, ತಾಯ್ನಾಡು  ಬಿಟ್ಟು ಬೇರೆ ದೇಶಕ್ಕೆ ಹೋದವರು, ಹೋಗುವವರು ಹಲವರಿದ್ದಾರೆ. ಹೀಗೆ ಮನೆ ಬಿಟ್ಟು ಎಲ್ಲೋ ದೂರದೂರಿಗೆ ಹೋಗುವಾಗ ನನ್ನವರು, ನನ್ನ ಊರನ್ನು ಬಿಟ್ಟು ಹೋಗ್ಬೇಕಲ್ವೇ ಎಂದು ಹಲವರು ದುಃಖ ಪಡ್ತಾರೆ. ಅಂತದ್ರಲ್ಲಿ ಇಲ್ಲೊಬ್ಬ ವ್ಯಕ್ತಿ ನ್ಯೂಜಿಲೆಂಡ್‌  ಪೌರತ್ವ  ಸಿಕ್ಕ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ದಾನೆ. ವೇದಿಕೆಯ ಮೇಲೆ ಭಾರತದ  ಜೆರ್ಸಿ ಬಿಚ್ಚಿ ಬಹಳ ಸಂತೋಷದಿಂದ ಭಾರತೀಯ ಪೌರತ್ವ ತೊರೆದು ನ್ಯೂಜಿಲೆಂಡ್‌ ಪೌರತ್ವ ಸ್ವೀಕರಿಸಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದ್ದು, ಕೆಲವರು ಈತನ ಈ ನಿಲುವನ್ನು ಶ್ಲಾಘಿಸಿದರೆ, ಇನ್ನೂ ಕೆಲವರು ಈತನದ್ದು ಇದು ತಪ್ಪು ನಿರ್ಧಾರ ಎಂದು ಕಿಡಿ ಕಾರಿದ್ದಾರೆ.

ವ್ಯಕ್ತಿಯೊಬ್ಬ ಭಾರತದ ಜೆರ್ಸಿ ಬಿಚ್ಚಿ ಸಂತೋಷದಲ್ಲಿ ಕುಣಿದಾಡಿ, ಭಾರತೀಯ ಪೌರತ್ವ ತೊರೆದು ನ್ಯೂಜಿಲೆಂಡ್‌ ಪೌರತ್ವವನ್ನು ಸ್ವೀಕರಿಸಿದ್ದಾನೆ. ಆ ವ್ಯಕ್ತಿ ಬಹಳ ಹೆಮ್ಮೆಯಿಂದ, ಸಂತೋಷದಿಂದ ಡ್ಯಾನ್ಸ್‌ ಮಾಡುತ್ತಾ ನ್ಯೂಜಿಲೆಂಡ್‌ ಪೌರತ್ವವನ್ನು ಸ್ವೀಕರಿಸಿದ್ದು, ಈ ವಿಡಿಯೋ ಇದೀಗ ಸಖತ್ ವೈರಲ್‌ ಆಗುತ್ತಿದೆ.