ಮಧುಗಿರಿ :
ಗ್ರಾಮಕ್ಕೆ ಅಗತ್ಯ ಮೂಲಭೂತ ಸೌಕರ್ಯವನ್ನು ಕಲ್ಪಿಸಿ ಪ್ರಾಮಾಣಿಕವಾಗಿ ಜನಪರ ಸೇವೆಯನ್ನು ಮಾಡುವುದಾಗಿ ಅಭ್ಯರ್ಥಿಗಳಾದ ಪದ್ಮಾವತಿ ಕೃಷ್ಣಮೂರ್ತಿ, ಹಾಗೂ ಶಾಂತಮ್ಮ ಕಾಕಪ್ಪ ತಿಳಿಸಿದರು.
2ನೇ ಹಂತದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸಿದ್ದಾಪುರ ಗ್ರಾ.ಪಂ.ನ ಮತಕ್ಷೇತ್ರ -2ಕ್ಕೆ ನಡೆಯುವ ಚುನಾವಣೆಗೆ ಪೂರ್ವ ತಯಾರಿಗಾಗಿ ಮತಬೇಟೆಗೆ ಇಳಿದಿದ್ದ ಇಬ್ಬರೂ ಅಭ್ಯರ್ಥಿಗಳು ತಮ್ಮ ಗ್ರಾಮಕ್ಕೆ ತಾವು ಮಾಡಬಯಸಿರುವ ಸೇವೆಯನ್ನು ಜನತೆ ಮುಂದಿಟ್ಟು ಕೊಂಡು ಮತಯಾಚನೆ ನಡೆಸಿದರು.
ನಾವು ಯಾವುದೇ ಹಣ ಆಮಿಷಗಳನ್ನು ಮತದಾರರಿಗೆ ನೀಡಿಲ್ಲ ಗ್ರಾಮಗಳ ಸೇವೆ ಮಾಡಲು ಬಂದಿದ್ದು ಭಾನುವಾರ ನಡೆಯಲಿರುವ ಮತದಾನದಲ್ಲಿ ಭಾಗವಹಿಸಿ ಮತ ನೀಡಿ ಆಶೀರ್ವದಿಸುವಂತೆ ಮತದಾರರಲ್ಲಿ ಮನವಿ ಮಾಡಿದರು. ಈ ವೇಳೆ ಮುಖಂಡ ಪ್ರಕಾಶ್ ಹಾಗೂ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ