ಕುಣಿಗಲ್ : ಲಂಚಕ್ಕೆ ಬೇಡಿಕೆಯಿಟ್ಟಿದ್ದ ಲೆಕ್ಕಾಧಿಕಾರಿ ಎಸಿಬಿ ಬಲೆಗೆ!!

ಕುಣಿಗಲ್  : 

      ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಇಪ್ಪಾಡಿ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಪೌತಿ ಆಧಾರದ ಮೇಲೆ ಜಂಟಿ ಖಾತೆ ಮಾಡಿಕೊಡಲು 10 ಸಾವಿರ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

      ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಇಪ್ಪಾಡಿ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಕೆ.ಬಿ.ಲೋಕೇಶ್ ಇಪ್ಪಾಡಿ ಗ್ರಾಮವಾಸಿ ಐ.ಜಿ. ಸತೀಶ್ ಎಂಬುವರು ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಪಿರಿಯಾದಿ ಸತೀಶ್ ಐ.ಜಿ. ಅವರ ತಾಯಿ ಮತ್ತು ದೊಡ್ಡಪ್ಪರವರ ಹೆಸರಿಗೆ ಇಪ್ಪಾಡಿ ಗ್ರಾಮದ ಸ.ನಂ. 69/5 ಜಮೀನಿನ ಜಂಟಿ ಪೌತಿ ಖಾತೆಯ ವರ್ಗಾವಣೆ ಮಾಡಿಕೊಡುವ ಸಲುವಾಗಿ ಗ್ರಾಮ ಲೆಕ್ಕಾಧಿಕಾರಿ ಕೆ.ಬಿ.ಲೋಕೇಶ್ ಪಿರಿಯಾದುದಾರರಿಗೆ 20 ಸಾವಿರ ಲಂಚದ ಬೇಡಿಕೆ ಇಟ್ಟು ಮುಂಗಡವಾಗಿ 10ಸಾವಿರ ಪಡೆದುಕೊಂಡಿದ್ದರು. ಜ.6ರಂದು ಉಳಿಕೆ ಹಣ ಕೊಡುವಂತೆ ಮೊಬೈಲ್‍ನಲ್ಲಿ ಮಾತನಾಡುವಾಗ ಒತ್ತಾಯಿಸಿದ್ದರು.

     ಎಸಿಬಿಯ ಡಿವೈಎಸ್‍ಪಿ ಮಲ್ಲಿಕಾರ್ಜುನ ಚುಕ್ಕಿ ಅವರ ನೇತೃತ್ವದಲ್ಲಿ ತನಿಖಾಧಿಕಾರಿಯಾದ ಪೊಲೀಸ್ ಇನ್ಸ್ ಪೆಕ್ಟರ್ ಎಸ್.ವಿಜಯಲಕ್ಷ್ಮೀ ಅವರು ಜ.7ರಂದು ಮಧ್ಯಾಹ್ನ ಕುಣಿಗಲ್ ಪಟ್ಟಣದಲ್ಲಿರುವ ಮುನಿಕಾಳಯ್ಯ ಬಿಲ್ಡಿಂಗ್‍ನ ಮೊದಲನೇ ಮಹಡಿಯ ರೂಂನಲ್ಲಿ ಪಿರಿಯಾದಿಯಿಂದ 10ಸಾವಿರ ರೂ. ಲಂಚ ಪಡೆಯುವಾಗ ದಾಳಿ ನಡೆಸಿ, ಲಂಚದ ಹಣದ ಸಮೇತ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿರುತ್ತಾರೆ.

      ಈ ದಾಳಿಯಲ್ಲಿ ಎಸಿಬಿ ಸಿಬ್ಬಂದಿಗಳಾದ ಸಿ.ಹೆಚ್.ಸಿ ಎಂ. ಚಂದ್ರಶೇಖರ್, ನರಸಿಂಹರಾಜು, ಟಿ.ಎಸ್. ಗಿರೀಶ್ ಕುಮಾರ್, ಮಹೇಶ್ ಕುಮಾರ್ ಮತ್ತು ರಮೇಶ್ ಭಾಗಿಯಾಗಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link