ಬರಗೂರು :

ಕರ್ನಾಟಕ ಮೂಲದ ಕರೇತಿಮ್ಮನಹಳ್ಳಿ ಚೌಡಪ್ಪ (32) ಎಂಬ ವ್ಯಕ್ತಿ ಆಂಧ್ರ್ರ ಪ್ರದೇಶದ ಹೇಮಾವತಿ ಗ್ರಾಮದ ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ಸಾವನ್ನಪ್ಪಿರುವ ಘಟನೆ ಸೋಮವಾರ ಬೆಳಗ್ಗೆ 10 ಗಂಟೆ ವೇಳೆ ನಡೆದಿದೆ.
ಮೃತನನ್ನು ಶಿರಾ ತಾಲ್ಲೂಕು ಹುಲಿಕುಂಟೆ ಹೋಬಳಿಯ ಕರೇತಿಮ್ಮನಹಳ್ಳಿ ಗ್ರಾಮದ ಚೌಡಪ್ಪ(32) ಎಂದು ಗುರುತಿಸಲಾಗಿದೆ. ಈತನು ಕರ್ನಾಟಕ ಗಡಿ ಭಾಗದ ಆಂಧ್ರ್ರಪ್ರದೇಶದ ಹೇಮಾವತಿ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದನು ಎನ್ನಲಾಗಿದೆ. ಹೇಮಾವತಿ ಗ್ರಾಮದ ವ್ಯಕ್ತಿಯೋರ್ವ ಕೆರೆಯ ಸಮೀಪದಿಂದ ತನ್ನ ಜಮೀನಿಗೆ ಹೋಗುವಾಗ ಕೆರೆ ದಡದಲ್ಲಿ ವ್ಯಕ್ತಿಯೋರ್ವನ ಶರ್ಟ್, ಪಂಚೆ ಇದ್ದು ಅದರಲ್ಲಿ ಆಧಾರ್ ಕಾರ್ಡ್ ಇರುವುದು ಕಂಡು ಬಂದಿದೆ. ಕೂಡಲೆ ಪೋಲೀಸರು ಹಾಗೂ ಮೃತನ ಸಂಬಂಧಪಟ್ಟವರಿಗೆ ಕರೆ ಮಾಡಿದಾಗ ಕರೇತಿಮ್ಮನಹಳ್ಳಿಯ ವ್ಯಕ್ತ್ತಿಯೆಂದು ತಿಳಿದು ಬಂದಿದೆ.
ಕೆರೆಯಲ್ಲಿ ಗುಂಡಿ, ಗುದ್ದರಗಳು ಹೆಚ್ಚಿದ್ದು, ಅದರ ಕೆಸರಿನಲ್ಲಿ ಸಿಲುಕಿ ನೀರಿನಿಂದ ಮೇಲೇಳಲು ಸಾಧ್ಯವಾಗದೆ ಆಕಸ್ಮಿಕವಾಗಿ ಮೃತಪಟ್ಟಿದ್ದಾನೆ. ಈತ ಟ್ರ್ಯಾಕ್ಟರ್ ಡ್ರೈವರ್ ಕೆಲಸ ನಿರ್ವಹಿಸುತ್ತಿದ್ದನು. ಈತ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದು, ಈತನಿಗೆ ಒಂದೂವರೆ ವರ್ಷದ ಹಾಗೂ 5 ತಿಂಗಳ ಇಬ್ಬರು ಹೆಣ್ಣು ಮಕ್ಕಳಿವೆ ಎನ್ನಲಾಗಿದೆ.
ಆಂಧ್ರ್ರಪ್ರದೇಶದ ಅಮರಾಪುರ ಸಬ್ ಇನ್‍ಸ್ಪೆಕ್ಟರ್ ಚಂದ್ರ ಆಂಜನೇಯಲು ಹಾಗೂ ಎಎಸ್‍ಐ ವೆಂಕಟೇಶಲು ಕೆರೆ ಹತ್ತಿರ ಭೇಟಿ ನೀಡಿ ಕೇಸು ದಾಖಲಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








