ಚಿಕ್ಕನಾಯಕನಹಳ್ಳಿ :

ಪಟ್ಟಣಕ್ಕೆ ಯು.ಜಿ.ಡಿ. ಮಂಜೂರಾಗಿ ಒಂದು ವರ್ಷವಾಯಿತು, ಈ ಸಂಬಂಧ 68 ಲಕ್ಷ ಬಿಡುಗಡೆಯಾಗಿದೆ ಆದರೆ ತ್ಯಾಜ್ಯ ಶೇಖರಣಾ ಘಟಕ ಪರಿಪೂರ್ಣ ಆಗಿಲ್ಲ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ವಿಷಾದ ವ್ಯಕ್ತ ಪಡಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಪುರಸಭಾ ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿದರು.
ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ(ಯು.ಜಿ.ಡಿ) ಹಣ ಬಿಡುಗಡೆ ಮಾಡಿದರು. ತ್ವರಿತಗತಿಯಲ್ಲಿ ಕಾಮಗಾರಿ ನಡೆಯುತ್ತಿಲ್ಲ, ಪ್ರಥಮಿಕ ಹಂತದ ತ್ಯಾಜ ಘಟಕವೇ ಪೂರ್ಣಗೊಂಡಿಲ್ಲ, ಪೈಪ್‍ಲೈನ್ ಆಗದೆ ರಸ್ತೆ ಕಾಮಗಾರಿ ಆರಂಭಿಸುವಂತಿಲ್ಲ ಎಂದರು.
ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬೇಕಾದ ಸೌಲಭ್ಯಗಳು ಇದ್ದರೂ ಸಾರ್ವಜನಿಕರಿಗೆ ಅದರ ಉಪಯೋಗವಾಗುತ್ತಿಲ್ಲ, ಸಾರ್ವಜನಿಕ ಆಸ್ಪತ್ರೆಯಲ್ಲಿ ಎಲ್ಲಾ ಉಪಕರಣಗಳಿದ್ದರೂ ರೋಗಿಗಳು ಬೇರೆ ತಾಲ್ಲೂಕಿಗೆ ಹೋಗುತ್ತಿದ್ದಾರೆ, ಇದಕ್ಕೆ ಕಾರಣವೇನು, ಇಲ್ಲಿ ಚಿಕಿತ್ಸೆ ದೊರೆಯುವುದಿಲ್ಲವೇ ಎಂದು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಯಲ್ಲಿ ಎಲ್ಲಾ ಅನುಕೂಲಗಳಿವೆ ಆದರೂ ವ್ಯವಸ್ಥೆ ಬಗ್ಗೆ ಸಾರ್ವಜನಿಕರು ದೂರುತ್ತಾರೆ ಎಂದು ಬೇಸರಿಸಿದರು.
ಆಸ್ಪತ್ರೆಗೆ ರೋಗಿಗಳು ಎಮೆರ್ಜೆನ್ಸಿ ಎಂದು ಬಂದರೆ ವೈದ್ಯರು ಮೊಬೈಲ್ ಹಿಡಿದುಕೊಂಡು ಬೇರೆಡೆಗೆ ಹೋಗುತ್ತಾರೆ. ಇಂತಹ ವ್ಯವಸ್ಥೆಯನ್ನು ವೈದ್ಯರು ಬದಲಿಸಿಕೊಳ್ಳಬೇಕು, ರೋಗಿಗಳಿಗೆ ಆಸ್ಪತ್ರೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುವಂತೆ ಸೇವೆ ನೀಡಿ ಎಂದು ವೈದ್ಯರಿಗೆ ಸೂಚಿಸಿದರು.
ಶಿಶು ಪ್ರಮಾಣ ಹೆಚ್ಚುತ್ತಿದೆ ಈ ಬಗ್ಗೆ ಆರೋಗ್ಯ ಇಲಾಖೆ ಗಮನಿಸುತ್ತಿಲ್ಲ, ನಾನು ಶಾಸಕನಾಗಿದ್ದ ಸಮಯದಲ್ಲಿ 3ಮಂದಿ ವೈದ್ಯರಿದ್ದರು ಈಗ 11ಮಂದಿ ವೈದ್ಯರಿದ್ದರೂ ರೋಗಿಗಳಿಗೆ ಸರಿಯಾದ ನಿರ್ವಹಣೆಯಾಗುತ್ತಿಲ್ಲ, ಆಸ್ಪತ್ರೆಯಲ್ಲಿ ಔಷಧಿ ಕೊರತೆ ಇಲ್ಲ, ಎಕ್ಸ್ ರೇ, ಡಯಾಲಿಸಿಸ್, ವೆಂಟಿಲೇಟರ್ ಸೌಲಭ್ಯಗಳಿಗೆ ಆದರೂ ರೋಗಿಗಳು ಇಲ್ಲಿನ ಆಸ್ಪತ್ರೆ ಬಿಟ್ಟು ಬೇರೆಡೆ ಹೋಗುವುದು ಏತಕ್ಕೆ, ಖಾಸಗಿ ಆಸ್ಪತ್ರೆಗೆ ವೈದ್ಯರು ರೆಫರ್ ಮಾಡುತ್ತಾರೆ ಎಂದು ಸಚಿವರು ವೈದ್ಯರನ್ನು ಪ್ರಶ್ನಿಸಿದರು.
ಸಣ್ಣ ನೀರಾವರಿ ಇಲಾಖೆಯಲ್ಲಿ 250 ಕೋಟಿ ಹಣ ಏತ ನೀರಾವರಿ ಯೋಜನೆಗಾಗಿ ಹಣವನ್ನು ಟೆಂಡರ್ ಕಳುಹಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು. ಎತ್ತಿನಹೊಳೆ ಯೋಜನೆಯಲ್ಲಿ ಒಂಬತ್ತು ಹಳ್ಳಿಗಳ ಸರ್ವೆ ಮುಗಿದಿದೆ ಎಂದರು.
ಸಭೆಯಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಅಥಿಕ್ ಪಾಷ, ತಾ.ಪಂ. ಅಧ್ಯಕ್ಷೆ ಜಯಮ್ಮ, ಜಿ.ಪಂ.ಸದಸ್ಯ ರಾಮಚಂದ್ರಯ್ಯ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








