ಮಧುಗಿರಿ :

ತಾಲ್ಲೂಕಿನ ಮಿಡಿಗೇಶಿ ಹೋಬಳಿಗೆ ಸೇರಿದ ಕ್ಯಾತಗೊಂಡನಹಳ್ಳಿ ಗ್ರಾಮದ ಕೂಲಿ ಕಾರ್ಮಿಕ ತಿಮ್ಮರಾಜು(40) ಮರ ಕಟಾವು ಮಾಡುತ್ತಿದ್ದಾಗ ಕೊಂಬೆಗಳು ಬಿದ್ದು ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಗ್ರಾಮದ ಶಿಕ್ಷಕ ಜಗದೀಶ್ ಎನ್ನುವವರ ಮನೆಯ ಮುಂದಿನ ಕಂಕೇಸರಿ ಮರವನ್ನು ಜ.13 ರಂದು ಮದ್ಯಾಹ್ನ 3-00 ಗಂಟೆಯ ಸಮಯದಲ್ಲಿ ಕಟಾವು ಮಾಡುತ್ತಿದ್ದ ವೇಳೆ ಮರದ ರೆಂಬೆಗಳು ತಿಮ್ಮರಾಜು ಮೇಲೆ ಬಿದ್ದ ಪರಿಣಾಮ ಬಹಳ ಪೆಟ್ಟಾಗಿದ್ದು ಗಾಯಾಳುವನ್ನು 108 ಆಂಬುಲೆನ್ಸ್ ಮೂಲಕ ಮಧುಗಿರಿ ತಾಲ್ಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತೆಗ್ಸೆ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರ್ಲೂ ಚಿಕಿತ್ಸೆ ಫಲಕಾರಿಯಾಗದೆ ಜ.14 ರಂದು ರಾತ್ರಿ 9-30 ಗಂಟೆಯ ವೇಳೆಯಲ್ಲಿ ನಿಧನರಾಗಿರುತ್ತಾರೆ.
ಸದರಿ ಘಟನೆ ಬಗ್ಗೆ ಮೃತನ ಸಹೋದರಿ ಗಂಗರತ್ನಮ್ಮ ಜ.15 ರಂದು ಮಿಡಿಗೇಶಿ ಪೋಲೀಸ್ ಠಾಣೆಗೆ ದೂರನ್ನು ನೀಡಿದ್ದು ಮಿಡಿಗೇಶಿ ಪಿ.ಎಸ್.ಐ ಹನುಮಮತರಾಯಪ್ಪ ಪ್ರಕರಣ ದಾಖಲಿಸಿದ್ದು ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








