ಬೆಂಗಳೂರು:
ಕರ್ನಾಟಕ ಮಿಲ್ಕ್ ಫೆಡರೇಶನ್ (ಕೆಎಂಎಫ್) ಮದರ್ ಡೈರಿಯೊಂದಿಗೆ ಸಹಭಾಗಿತ್ವದಲ್ಲಿ ‘ನಂದಿನಿ ಆನ್ ವೀಲ್ಸ್’ ಸೇವೆಯನ್ನು ಪ್ರಾರಂಭಿಸಿದೆ.
ಎಲೆಕ್ಟ್ರಾನಿಕ್ ವಸ್ತುಗಳಿಂದ ಹಿಡಿದು ದಿನ ನಿತ್ಯದ ಪದಾರ್ಥಗಳವರೆಗೆ ಮನೆ ಬಾಗಿಲಿಗೇ ತಲುಪಿಸುವ ಸೇವೆಗಳ ಕೊರತೆ ಇಲ್ಲ. ಈಗ ಕೆಎಂಎಫ್ ಸಹ ಇಂಥಹದ್ದೇ ಸೇವೆಯನ್ನು ಪ್ರಾರಂಭಿಸಲು ಸಜ್ಜುಗೊಂಡಿದೆ. ಇದರಿಂದಾಗಿ ಜನತೆ ಮಿಲ್ಕ್ ಬೂತ್ ಗೆ ಹೋಗುವುದು ತಪ್ಪಲಿದೆ.
ಬೆಂಗಳೂರಿನಲ್ಲಿ, ವಿಶೇಷವಾಗಿ ಹೊಸ ಪ್ರದೇಶಗಳಲ್ಲಿ ಹೆಚ್ಚಿನ ಹಾಲು ಪಾರ್ಲರ್‌ಗಳು ಇಲ್ಲದಿರುವುದರಿಂದ ‘ನಂದಿನಿ ಆನ್ ವೀಲ್ಸ್’ ಅನ್ನು ಪರಿಚಯಿಸಲಾಗುತ್ತಿದೆ. ಪ್ರಾಯೋಗಿಕವಾಗಿ ಈ ಯೋಜನೆಯನ್ನು ಯಲಹಂಕ ಝೋನ್ ನಲ್ಲಿ ಜ.18 ರಿಂದ ಜಾರಿಗೆ ಬಂದಿದೆ. ಯಲಹಂಕದಲ್ಲಿನ ಸೇವೆಗಳು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಈ ರೀತಿಯ ಹೆಚ್ಚಿನ ಟ್ರಕ್ ಗಳನ್ನು ಪರಿಚಯಿಸಲು ನಿರ್ಧರಿಸಲಾಗಿದೆ ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಇಂತಹ 8 ಮಿನಿ ಟ್ರಕ್ ಗಳು ನಗರ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸುತ್ತಿವೆ. ಆದರೆ ಅವುಗಳನ್ನು ಮಂಡ್ಯ, ಬೆಂಗಳೂರು ಡೈರಿ, ಮಂಗಳೂರು ಹಾಗೂ ಇತರ ಹಾಲಿಕ ಒಕ್ಕೂಟಗಳು ಮುನ್ನಡೆಸುತ್ತಿವೆ.
ಬೆಂಗಳೂರಿನಲ್ಲಿ 122 ಹಾಲಿನ ಪಾರ್ಲರ್‌ಗಳಿದ್ದು, ಸ್ಥಳೀಯ ಉತ್ಪನ್ನಗಳೊಂದಿಗೆ ಜನರು ಉತ್ತಮವಾಗಿ ಸಂಪರ್ಕ ಹೊಂದುವಂತೆ ಹೆಚ್ಚಿನದನ್ನು ಸೇರಿಸಲು ಮತ್ತು ಮೊಬೈಲ್ ವಾಹನಗಳನ್ನು ಪರಿಚಯಿಸುವ ಯೋಜನೆ ಇದೆ.
ಕೆಎಂಎಫ್ ನ ಹಾಲಿನ ವಾಹನಗಳು ಬೆಳಿಗ್ಗೆ 9 ರಿಂದ ರಾತ್ರಿ 8 ವರೆಗೆ ಹೊತ್ತು ಆ ಭಾಗಗಳಲ್ಲಿ ಸಂಚರಿಸಲಿವೆ, ದಾಸ್ತಾನು ಖಾಲಿಯಾದರೆ ಹತ್ತಿರದ ಪಾರ್ಲರ್ ಗಳಿಂದ ತುಂಬಿಸಿಕೊಂಡು ಸಾರ್ವಜನಿಕರಿಗೆ ವಿತರಣೆ ಮಾಡಲಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ