ಬೆಂಗಳೂರು :

ಕನ್ನಡದ ಖ್ಯಾತ ಹಿನ್ನೆಲೆ ಗಾಯಕಿ ರಮಾ ಅರವಿಂದ್ ರವರು ಇಂದು ಮಧ್ಯಾನ 2.30 ಕ್ಕೆ ನಿಧರಾಗಿದ್ದಾರೆ.
ಕನ್ನಡ ಅನೇಕ ಚಿತ್ರಗಳಿಗೆ ಹಿನ್ನಲೆ ಗಾಯಕಿಯಾಗಿ ಧ್ವನಿ ನೀಡುವ ಮೂಲಕ ಹೆಸರಾಗಿದ್ದಂತಹ ಗಾಯಕಿ ರಮಾ ಅರವಿಂದ್ ಇಂದು ಅನಾರೋಗ್ಯದಿಂದ ನಿಧರಾಗಿದ್ದಾರೆ.
ಕಳೆದ ಹಲವು ದಿನಗಳಿಂದ ಅವರು ಸಕ್ಕರೆ ಕಾಯಿಲೆ ಹಾಗೂ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಇಂದು ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಕನ್ನಡದ ಖ್ಯಾತ ಹಿನ್ನಲೆಗಾಯಕಿಯೊಬ್ಬರನ್ನು ಕಳೆದುಕೊಂಡಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







