ತಿಪಟೂರು : ರಾಜಧಾನಿಗೆ ಹೊರಟಿದ್ದ ರೈತರಿಗೆ ತಡೆ

 ತಿಪಟೂರು  :

      ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಶಕ್ತಿ ತುಂಬಲು ಗಣರಾಜ್ಯೋತ್ಸವದಂದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಟ್ಯ್ರಾಕ್ಟರ್ ಪೆರೇಡ್ ನಡೆಸಲು ಹೊರಟಿದ್ದ ರೈತರನ್ನು ತಾಲ್ಲೂಕಿನ ಕಿಬ್ಬನಹಳ್ಳಿ ಕ್ರಾಸ್‍ನಲ್ಲಿ ಆರಕ್ಷಕರು ತಡೆಹಿಡಿದರು.

      ಈ ಸಂದರ್ಭದಲ್ಲಿ ಮಾತನಾಡಿದ ತಿಪಟೂರು ರೈತಸಂಘದ ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ, ದೇಶಕ್ಕೆ ಅನ್ನ ನೀಡುವ ರೈತರನ್ನು ಈ ಸರ್ಕಾರ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದು ರೈತರ ಕೆರೆಗೆ ಓಗೊಡಲು ಸಾಧ್ಯವಾಗುತ್ತಿಲ್ಲ ಮತ್ತು ರೈತರು ಏತಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದರೆಂಬುದನ್ನು ತಿಳಿಯಲು ಬರುತ್ತಿಲ್ಲ. ಆದ್ದರಿಂದ ಗಣರಾಜ್ಯೋತ್ಸವದ ದಿನ ನಾವು ರಾಜಧಾನಿಯಲ್ಲಿ ನಡೆಯುತ್ತಿರುವ ಟ್ರ್ಯಾಕ್ಟರ್ ರ್ಯಾಲಿಗೆ ಬೆಂಬಲ ಸೂಚಿಸಲು ತೆರಳುವದನ್ನು ತಡೆಯುವುದು ಕಗ್ಗೊಲೆ. ನಮಗೆ ರ್ಯಾಲಿಯಲ್ಲಿ ಭಾಗವಹಿಸಲು ಬಿಡದಿದ್ದರೆ ನಾವು ಇಲ್ಲಿಯೇ ನಮ್ಮ ಪರಿವಾರದ ಜೊತೆಗೆ ದನಕರುಗಳನ್ನು ಕರೆದುಕೊಂಡು ಬಂದು ರಸ್ತೆಯನ್ನು ತಡೆಯುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನೂರಾರು ರೈತರು ಟ್ರ್ಯಾಕ್ಟರ್‍ಗಳೊಂದಿಗೆ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link