ಗ್ರಾಮ ಪಂ ಅಧ್ಯಕ್ಷನ ಕುಮ್ಮಕ್ಕಿನಿಂದ ಆಕ್ರಮವಾಗಿ ಮರಳು ಸಾಗಾಟ

0
170

ಮಧುಗಿರಿ :

        ಸ್ಥಳೀಯ ಗ್ರಾಪಂ ಅಧ್ಯಕ್ಷನ ಕುಮ್ಮಕ್ಕಿನಿಂದ ಆತನ ಬೆಂಬಲಿತರು ಟ್ಯಾಕ್ಟರ್‍ನಲ್ಲಿ ಗ್ರಾಮದ ಕೆರೆಯಿಂದ ಆಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆಂದು ಆರೋಪಿಸಿ ಗ್ರಾಮಸ್ಥರೆ ಟ್ಯಾಕ್ಟರ್ ಹಿಡಿದು ಪೋಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ.

        ತಾಲ್ಲೂಕಿನ ಪುರವರ ಹೋಬಳಿಯ ಕೋಡಗದಾಲ ಗ್ರಾಪಂ ವ್ಯಾಪ್ತಿಯ ಕರೆಯೊಂದರಲ್ಲಿ ಆಕ್ರಮವಾಗಿ ಮರಳು ತುಂಬುತ್ತಿದ್ದರ ಹಿನ್ನೆಲೆಯಲ್ಲಿ ಗ್ರಾಮಸ್ಥರೆ ಕಂದಾಯಾಧಿಕಾರಿಗಳಿಗೆ ಮತ್ತು ಪೋಲೀಸರಿಗೆ ಮಾಹಿತಿ ನೀಡಿ ಮರಳು ತುಂಬಿದ್ದ ಟ್ಯಾಕ್ಟರ್‍ನ್ನು ತಡೆದು ಟ್ಯಾಕ್ಟರ್‍ನ್ನು ಕೋಡಿಗೇನಹಳ್ಳಿಯ ಪೋಲೀಸರ ವಶಕ್ಕೆ ನೀಡಿದ್ದಾರೆ.

         ಪುರವರ ಆರ್ ಐ ನಾರಾಯಣಪ್ಪ ಮಾತನಾಡಿ ಗ್ರಾಮಸ್ಥರ ಸಹಕಾರದಿಂದ ಆಕ್ರಮ ಮರಳು ಸಾಗಾಟ ನಿಯಂತ್ರಿಸಲಾಗುತ್ತಿದೆ ಆದರೂ ಶನಿವಾರ ಬೆಳಗಿನ ಜಾವ ಖಾಸಗಿಯವರಿಗೆ ಸೇರಿದ ಜಮೀನಿನಲ್ಲಿ ಮರಳು ಸಾಗಾಟ ಮಾಡುತ್ತಿದ್ದಾರೆಂಬ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿರುವ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಲಾಗಿದ್ದು ಗ್ರಾಮಸ್ಥರ ಜತೆ ಸೇರಿ ಬೇರೆ ಟ್ಯಾಕ್ಟರ್‍ಗಳ ಸಹಾಯದಿಂದ ರಸ್ತೆಗೆ ಆಡ್ಡಗಟ್ಟಿಸಿ ಒಂದು ಟ್ಯಾಕ್ಟರ್ ವಶಕ್ಕೆ ಪಡೆಯಲಾಗಿದೆ ಆಕ್ರಮ ಮರಳುಗಾರಿಕೆಯ ಬಗ್ಗೆ ಈಗಾಗಲೇ ಕೊಡಿಗೇನಹಳ್ಳಿಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಗ್ರಾಮಗಳಲ್ಲಿ ಮನೆಗಳ ಹಾಗೂ ಇತರೆ ಕಾಮಗಾರಿಗಳಿಗೆ ಎಂ ಸ್ಯಾಂಡ್ ಬಳಕೆ ಮಾಡಬೇಕಾಗಿದೆ ಆದರೆ ಎಂ ಸ್ಯಾಂಡ್‍ನ ಉತ್ಪಾದಕ ಘಟಕಗಳು ತಾಲ್ಲೂಕಿನಲ್ಲಿ ಇರುವುದಿಲ್ಲ ಸಮಸ್ಯೆಯ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

          ಗ್ರಾಮಸ್ಥ ವೆಂಕಟೇಶ್ ಮಾತನಾಡಿ ಗ್ರಾಪಂ ಅಧ್ಯಕ್ಷ ನರಸಿಂಹರಾಜುಗೆ ಸೇರಿದ ಟ್ಯಾಕ್ಟರ್‍ನಿಂದ ಮರಳು ಸಾಗಾಟ ಮಾಡುತ್ತಿದ್ದರು ರೈತರೆಲ್ಲಾ ಸೇರಿ ಮರಳು ತುಂಬಿದ್ದ ಟ್ಯಾಕ್ಟರ್‍ನ್ನು ತಡೆದಿದ್ದೇವೆ ನಂತರ ಪೋಲೀಸರು ಬಂದು ಟ್ಯಾಕ್ಟರ್‍ನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಇಲ್ಲಿ ಸುಮಾರು ಐದಾರು ವರ್ಷಗಳಿಂದ ಕೆರೆಯಿಂದ ಮರಳು ಸಾಗಾಟ ಮಾಡಲಾಗುತ್ತಿದೆ ಅಧಿಕಾರಿಗಳು ಎಷ್ಟೇ ಪ್ರಯತ್ನ ಪಟ್ಟರು ಮರಳು ಸಾಗಾಣಿಕೆ ನಿಂತಿಲ್ಲ ಕೆರೆಯ ಸುತ್ತಮುತ್ತಲ ಗ್ರಾಮಗಳಿಗೆ ಮರಳನ್ನು ಸಾಗಾಟ ಮಾಡುಲಾಗುತ್ತಿದೆ ಎಂದರು.

         ರೈತ ಮುಖಂಡ ಗಂಗಾಧರಪ್ಪ ಮಾತನಾಡಿ ನಮ್ಮ ಗ್ರಾಮದಲ್ಲಿ ಮರಳಿನ ಕೊರತೆ ಇದ್ದು ಸರಕಾರದಿಂದ ಜಾರಿಯಾಗಿರುವ ಮನೆಗಳ ನಿರ್ಮಾಣಕ್ಕೆ ಬಹಳ ತೊಂದರೆಯಾಗಿದೆ ಎತ್ತಿನ ಗಾಡಿಗಳಲ್ಲಿ ಮರಳು ಸಾಗಾಣಿಕೆ ಮಾಡಲು ಬಿಡುತ್ತಿಲ್ಲ ಪದೆ ಪದೇ ಗ್ರಾಪಂ ಅಧ್ಯಕ್ಷರಿಗೆ ಸೇರಿದ ಟ್ಯಾಕ್ಟರ್ ನಲ್ಲಿ ಒಂದು ವಾರದಿಂದ ಆಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆ ಹಾಲಿ ಅಧ್ಯಕ್ಷರು ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿದ್ದು ರಾಜಕೀಯ ಹಿನ್ನೆಲೆಯುಳ್ಳವರಾಗಿದ್ದು ಶಾಲೆಗೆ ಸೇರಿದ ಜಮೀನಲ್ಲಿ ತನ್ನ ಸಿಮೆಂಟ್ ಅಂಗಡಿ ತೆಗೆದು ವ್ಯಾಪಾರ ವಹಿವಾಟು ನಡೆಸುತ್ತಿದ್ದು ಇವರ ವಿರುದ್ಧ ಸಂಭಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೆಕೆಂದು ಆಗ್ರಹಿಸಿದ್ದಾರೆ .  ಸಂಜೀವರಾಯಪ್ಪ, ಶಿವರಾಮು, ಮುನಿರಾಜು, ನಾಗೇಶ್, ಶಿವಲಿಂಗಯ್ಯ, ವೆಂಕಟೇಶ್, ಚಿಕ್ಕಣ್ಣ, ಶಿವಣ್ಣ, ಶ್ರೀನಿವಾಸ್ ಕಂದಾಯಾಧಿಕಾರಿಗಳು ಹಾಗೂ ಕೋಡಿಗೇನಹಳ್ಳಿಯ ಪೋಲೀಸರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here