ಚಿಕ್ಕನಾಯಕನಹಳ್ಳಿ :
ಪಲ್ಸ್ ಪೋಲಿಯೋ ಕಾರ್ಯಕ್ರಮವು ಜನವರಿ 31ರಿಂದ ಫೆಬ್ರವರಿ 2 ರವರೆಗೂ ಗ್ರಾಮೀಣ ಪ್ರದೇಶದಲ್ಲಿ ನಡೆಯಲಿದೆ, ಪಟ್ಟಣದಲ್ಲಿ ಒಂದು ದಿನ ನಡೆಯಲಿದ್ದು ಒಟ್ಟಾರೆ ಫೆಬ್ರವರಿ 3ರವರೆಗೆ ಕಾರ್ಯಕ್ರಮ ನಡೆಯಲಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ನವೀನ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಪಲ್ಸ್ ಪೋಲಿಯೋ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆಯ ಜೊತೆ ಬೇರೆ ಇಲಾಖೆಗಳ, ಸಂಘ-ಸಂಸ್ಥೆಗಳ ಸಹಕಾರವೂ ಬೇಕಾಗುತ್ತದೆ, ಒಟ್ಟು ಜನಸಂಖ್ಯೆ 228904 ಇದ್ದು ಇದರಲ್ಲಿ 5 ವರ್ಷದ ?ಳಗಿನವರು 15126 ಇದ್ದಾರೆ, ತಾಲ್ಲೂಕಿನಾದ್ಯಂತ 89 ವ್ಯಾಕ್ಸಿನ್ ಬೂತ್ ಮಾಡಿದ್ದು ಇದರಲ್ಲಿ 96 ಪಿಕ್ಸೆಡ್ ಬೂತ್ 3 ಆನ್ ಸಿಟ್ ಬೂತ್ ಇದರಲ್ಲಿ ಎರಡು ಚಿ.ನಾ.ಹಳ್ಳಿ ಖಾಸಗಿ ಬಸ್ ಸ್ಟ್ಯಾಂಡ್, ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್, ಹುಳಿಯಾರು ಬಸ್ ಸ್ಟಾಂಡ್ ನಲ್ಲಿ ಇಡಲಾಗುವುದು.
ಪ್ರತಿ 5 ರಿಂದ 6 ಬೂತ್ ಗೆ ಒಬ್ಬರಂತೆ 19 ಜನ ಸೂಪರ್ ವೈಸರ್ ನೇಮಿಸಿದ್ದೇವೆ, ಕೋಲ್ಡ್ ಚೈನ್ ಪಾಯಿಂಟ್ಸ್ 12 ಇದ್ದು ಇದರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ತಾಲ್ಲೂಕು ಆಸ್ಪತ್ರೆಯಲ್ಲಿ ಇದೆ ಹಾಗೂ ಪಲ್ಸ್ ಪೋಲಿಯೋ ಕಾರ್ಯಕ್ರಮದ ವೇಳೆ ಜನವರಿ 29ರಿಂದಲೇ ನಿರಂತರ ವಿದ್ಯುತ್ ಬೇಕೆಂದು ಬೆಸ್ಕಾಂ ಅಧಿಕಾರಿಗೆ ತಿಳಿಸಿದರು.
ಕೋವಿಡ್-19 ಇರುವುದರಿಂದ ಮಕ್ಕಳಿಗೆ ಕೋವಿಡ್ ಲಕ್ಷಣಗಳು ಇದ್ದರೆ ಆ ಮಕ್ಕಳಿಗೆ ಕೋವಿಡ್ ಪರೀಕ್ಷೆ ಮಾಡಿಸಿ, ಗುಡ್ಡಗಾಡಿನ ಮಕ್ಕಳಿಗೆ ಪೋಲಿಯೋ ಹಾಕಿಸುವುದಕ್ಕೆ ತೊಂದರೆಯಾಗುತ್ತದೆ ಆದ ಕಾರಣ ಪಿಡಿಓ ಮೂಲಕ ವಾಹನಗಳ ವ್ಯವಸ್ಥೆ ಮಾಡಿಕೊಡಲು ತಹಶೀಲ್ದಾರ್ ಟಿಎಚ್‍ಓ ಮನವಿ ಮಾಡಿದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಸಿ.ಡಿ.ಸುರೇಶ್ ಮಾತನಾಡಿ, ಪ್ರತಿ ವರ್ಷದಂತೆ ರೋಟರಿ ಸಂಸ್ಥೆ ಪಲ್ಸ್ ಪೋಲಿಯೋಗೆ ವಿಶ್ವದಲ್ಲಿಯೇ ಕೈ ಜೋಡಿಸುತ್ತದೆ, ಈ ವರ್ಷವೂ ಸಹ ನಮ್ಮ ಸಂಸ್ಥೆಯು ಬೆಳಗ್ಗೆ ಉಪಹಾರ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಸಿಬ್ಬಂದಿಗಳಿಗೆ ಕಲ್ಪಿಸಲಾಗುವುದು ಎಂದರು.
ತಹಶೀಲ್ದಾರ್ ತೇಜಸ್ವಿನಿ ಮಾತನಾಡಿ, ಪಲ್ಸ್ ಪೋಲಿಯೋ ಲಸಿಕೆಯನ್ನು ಮೊದಲೇ ಹಾಕಬೇಕಿತ್ತು, ಕೋವಿಡ್ ವ್ಯಾಕ್ಸಿನ್ ಬಂದ ಕಾರಣ ಸ್ವಲ್ಪ ತಡವಾಗಿದೆ, ಈ ಪೋಲಿಯೋವನ್ನು ತಡೆಗಟ್ಟಲು ಎಲ್ಲಾ ಇಲಾಖೆಯ ಸಿಬ್ಬಂದಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಕಾರಣರಾಗಿದ್ದಾರೆ, ಎಲ್ಲರ ಸಹಕಾರ ಇಲ್ಲದಿದ್ದರೆ ನಾವು ಪೋಲಿಯೋ ತಡೆಗಟ್ಟಲು ಸಾಧ್ಯವಾಗುತ್ತಿರಲಿಲ್ಲ ಎಂದ ಅವರು, ನಾಯಿ ಕಚ್ಚಿದರೆ ಲಸಿಕೆ ಪಡೆಯಿರಿ ಎಂದು ತಿಳಿಸಿದರು.
ವೈದ್ಯ ವಿಜಯರಾಘವೇಂದ್ರ ಮಾತನಾಡಿ, ರೋಟರಿ ಸಂಸ್ಥೆ ಜೊತೆ ಕೈ ಜೋಡಿಸಿ ಎಲ್ಲಾ ಬೂತ್ ಗಳಿಗೂ ಭೇಟಿ ನೀಡಿ ಸಹಾಯ ಮಾಡುತ್ತೇವೆ ಎಂದರು. ಕಾರ್ಯಕ್ರಮದಲ್ಲಿ ವೈದ್ಯ ಕುಮಾರಸ್ವಾಮಿ, ಆಸ್ಪತ್ರೆಯ ರಂಗನಾಥ್, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ನ್ಯಾಷನಲ್ ರೇಬಿಸ್ ಕಂಟ್ರೋಲ್ ಪ್ರೋಗ್ರಾಂ ಯಾವುದೇ ನಾಯಿ ಕಚ್ಚಿದರೆ ಅದಕ್ಕೆ ಹಲಸಿನ ಅಂಟು, ಮಣ್ಣು, ಅನುಪಯುಕ್ತ ವಸ್ತುಗಳನ್ನು ಹಾಕದೆ ಯಾವುದೇ ಪ್ರಾಣಿ ಕಡಿದರೂ ಸಹ ಸತತ 15 ನಿಮಿಷಗಳ ಕಾಲ ನೀರಿನಲ್ಲಿ ತೊಳದು ನಂತರ ಲಸಿಕೆಗಳನ್ನು ಹಾಕಿಸಿಕೊಳ್ಳಬೇಕು.
ನವೀನ್. ವೈದ್ಯ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
