ಅಮಾನತು ಆದೇಶ ವಾಪಸ್: ಮುಖಂಡರ ಸಭೆ ಕರೆದ ದಿಲೀಪ್‍ಕುಮಾರ್

ಗುಬ್ಬಿ

      ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷೇತರ ಆಭ್ಯರ್ಥಿಯಾಗಿ ಸ್ಪರ್ಧಿಸಿದ್ದಕ್ಕೆ ಭಾರತೀಯ ಜನತಾ ಪಕ್ಷ ನನ್ನನ್ನು ಅಮಾನತು ಮಾಡಿತ್ತು. ಇಂದು ಪಕ್ಷ ಅಮಾನತು ಆದೇಶವನ್ನು ಹಿಂಪಡೆದಿದೆ. ಆದ್ದರಿಂದ ನನಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸಿದ ತಾಲ್ಲೂಕಿನ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಎಲ್ಲಾ ಸಮಾಜದ ಮುಖಂಡರ ಸಭೆ ಕರೆದು ಅವರೊಂದಿಗೆ ಚರ್ಚಿಸಿದ ನಂತರ ಮುಂದಿನ ತೀರ್ಮಾನ ಮಾಡಲಾಗುತ್ತದೆ ಎಂದು ಮುಖಂಡ ಎಸ್.ಡಿ.ದಿಲೀಪ್‍ಕುಮಾರ್ ತಿಳಿಸಿದರು.

      ಪಟ್ಟಣದ ಅವರ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಮಾ.28 ರಂದು ಪಟ್ಟಣದ ಬಾವಿಮನೆ ಕಲ್ಯಾಣ ಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ದಿಲೀಪ್‍ಕುಮಾರ್ ಅಭಿಮಾನಿ ಬಳಗ ಮತ್ತು ಕಾರ್ಯಕರ್ತರ ಸಭೆ ಕರೆಯಲಾಗಿದ್ದು ಸಭೆಗೆ ಸಿ.ಎನ್.ಹಳ್ಳಿ ಶಾಸಕರಾದ ಜೆ.ಸಿ.ಮಾಧುಸ್ವಾಮಿಯವರು ಆಗಮಿಸುತ್ತಿದ್ದು ಅವರ ಸಮ್ಮುಖದಲ್ಲಿ ಸಮಗ್ರವಾಗಿ ಚರ್ಚಿಸಿದ ನಂತರ ಮುಂದಿನ ನಡೆ ಬಗ್ಗೆ ತೀರ್ಮಾನಿಸಲಾಗುವುದು. ಈ ಸಭೆಗೆ ನಮ್ಮ ಎಲ್ಲಾ ಕಾರ್ಯಕರ್ತರು, ಎಲ್ಲಾ ಸಮಾಜದ ಮುಖಂಡರುಗಳು ಮತ್ತು ಅಭಿಮಾನಿಗಳು ಭಾಗವಹಿಸುವ ಮೂಲಕ ಸಭೆಯನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು.

        ಕಳೆದ ಎರಡು ದಿನದ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್. ಯಡಿಯೂರಪ್ಪನವರು ಅಮಾನತು ಬಗ್ಗೆ ಮಾತುಕತೆ ಮಾಡಿದ್ದು ಅಮಾನತು ಆದೇಶ ಹಿಂಪಡೆದಿದ್ದಾರೆ. ಹಾಗಾಗಿ ನಮ್ಮ ಕಾರ್ಯಕರ್ತರ ಸಭೆ ಕರೆದು ಮುಂದಿನ ತೀರ್ಮಾನ ಮಾಡಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿ.ಸಿ.ಶಿವಕುಮಾರ್, ಬಿ.ಲೋಕೇಶ್, ಮಹಾಂತೇಶ್, ಗ್ರಾಮ ಪಂಚಾಯ್ತಿ ಸದಸ್ಯ ಬಿ.ಎಸ್.ಚೇತನ್‍ಕುಮಾರ್, ಪ್ರಮೋದ್, ಮಂಜುನಾಥ್, ಲೋಕೇಶ್ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link