ಮಧುಗಿರಿ : ಕಲ್ಲಿನ ಬಸವ ಕದ್ದೊಯ್ದ ಕಳ್ಳರು..!

ದೊಡ್ಡೇರಿ : 

      ಜನಸಾಮಾನ್ಯರ ಬದುಕಲ್ಲಿ ನೆಮ್ಮದಿ ಶಾಂತಿ ನೆಲೆಸಲಿ ಎಂದು ಪೂರ್ವಜರು ಗುಡಿ ಗೋಪುರಗಳನ್ನು ನಿರ್ಮಿಸಿದರು. ಈಗಿನ ಕಾಲದಲ್ಲಿ ಅವಿವೇಕಿಗಳು, ಸೋಮಾರಿಗಳು, ದುಶ್ಚಟಗಳಿಗೆ ಮಾರುಹೋಗಿರುವ ಕಿಡಿಗೇಡಿಗಳು ಸ್ವಾರ್ಥಕ್ಕಾಗಿ ದೇವಾಲಯಗಳಲ್ಲಿ ವಿವಿಧ ರೀತಿಯ ವಿಗ್ರಹಗಳನ್ನು ಕಳ್ಳತನ ಮಾಡುತ್ತಿದ್ದಾರೆ.

     ಮಧುಗಿರಿ ತಾಲ್ಲೂಕು ದೊಡ್ಡೇರಿ ಗ್ರಾಮದಲ್ಲಿ ಚೋಳರ ಕಾಲದಲ್ಲಿ ನಿರ್ಮಿಸಿದ್ದ ಕೋಡಿ ಲಿಂಗೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಇದ್ದಂತಹ ಮೂರು ಕಲ್ಲಿನ ಬಸವ ವಿಗ್ರಹಗಳಲ್ಲಿ ಒಂದನ್ನು ಯಾರೋ ಕಿಡಿಗೇಡಿಗಳು ಫೆ.2 ರ ಮಂಗಳವಾರ ರಾತ್ರಿ ಕಳವು ಮಾಡಿರುತ್ತಾರೆ.

      ಇದೇ ರೀತಿ ಈ ಭಾಗದಲ್ಲಿ ಸರಣಿ ಕಳ್ಳತನ ನಡೆಯುತಿದ್ದರೂ, ಪೊಲೀಸರು ಕಣುಮುಚ್ಚಿ ಕುಳಿತು ಕೊಂಡಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಬಡವನಹಳಿ ಪೊಲೀಸ್ ಠಾಣೆಯ ಸರ್ಕಲ್ ಇನ್‍ಸ್ಪೆಕ್ಟರ್ ಹನುಮಂತರಾಯಪ್ಪ ಮತ್ತು ಸಬ್ ಇನ್‍ಸ್ಪೆಕ್ಟರ್ ನಾಗರಾಜು ಸ್ಥಳಕ್ಕೆ ಭೇಟಿ ನೀಡಿ ಕೇಸು ದಾಖಲಿಸಿರುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap