ಕೊಡಿಗೇನಹಳ್ಳಿ :

ನಿಮ್ಮ ಆರೋಗ್ಯ, ನಿಮ್ಮ ಕಾಳಜಿ ನಮಗೆ ಬಹಳ ಮುಖ್ಯ. ನಿಮಗಲ್ಲದಿದ್ದರೂ ನಿಮ್ಮನ್ನು ನಂಬಿರುವ ಕುಟುಂಬದವರಿಗಾದರೂ ಸಂಚಾರಿ ನಿಯಮಗಳನ್ನು ಪಾಲಿಸಿ ಎಂದು ಸಿಪಿಐ ಸರದಾರ್ ತಿಳಿಸಿದರು.
ಅವರು ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ, ಕೊಡಿಗೇನಹಳ್ಳಿ ಪೊಲೀಸ್ ಠಾಣೆ ಹಾಗೂ ಚಕ್ರಪಾಣಿ ಕಲಾ ತಂಡ ಮೈಸೂರು ವತಿಯಿಂದ 2021 ನೆ ಸಾಲಿನ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಆಟೋಚಾಲಕರನ್ನು ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿ ನಿತ್ಯ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಅಪಘಾತಗಳು ಹೆಚ್ಚಾಗುತ್ತಿವೆ. ಅದರಲ್ಲೂ ವಿದ್ಯಾರ್ಥಿಗಳು ಹೆಚ್ಚು ಅಪಘಾತದಲ್ಲಿ ಬಲಿಯಾಗುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್‍ನ್ನು ಧರಿಸಬೇಕು. ದ್ವಿಚಕ್ರವಾಹನ ಸೇರಿದಂತೆ ಯಾವುದೇ ವಾಹನವಾದರೂ ಪರವಾನಗಿ ಇಲ್ಲದೆ ವಾಹನ ಚಾಲನೆ ಕಾನೂನು ಬಾಹಿರವಾಗಿರುತ್ತದೆ. ವಾಹನಗಳಿಗೆ ವಿಮೆ ಕಡ್ಡಾಯ, ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಚಾಲನೆ ಮಾಡಲು ಬಿಡಬೇಡಿ, ಚಾಲಕರು ಕಟ್ಟುನಿಟ್ಟಾಗಿ ಸಂಚಾರಿ ನಿಯಮಗಳನ್ನು ಪಾಲಿಸಿ, ಎಚ್ಚರದಿಂದ ಚಾಲನೆ ಮಾಡಬೇಕು ಎಂದು ಅವರು ತಿಳಿಸಿದರು.
ಪಿಎಸ್‍ಐ ಫಾಲಾಕ್ಷಪ್ರಭು, ಎಎಸ್‍ಐ ಜಗದೀಶ್, ಮೆಹಬೂಬ್ ಖಾನ್, ಪೊಲೀಸ್ ಕಾನ್‍ಸ್ಟೇಬಲ್ ನಾರಾಯಣಸ್ವಾಮಿ, ವೆಂಕಟೇಶ್, ರಂಗನಾಥ್ ಮತ್ತು ಚಕ್ರಪಾಣಿ ಕಲಾತಂಡ ಮೈಸೂರು ಕಲಾ ತಂಡದವರು ಮತ್ತು ಗ್ರಾಮಸ್ಥರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








