ಪಾರ್ಟಿ ಮಾಡಿದ್ದ ಅಪಾರ್ಟ್‌ಮೆಂಟ್’ನ 36 ಜನರಿಗೆ ಕೊರೋನ ದೃಢ!!

ಬೆಂಗಳೂರು : 

      ಪಾರ್ಟಿ ಮಾಡಿದ್ದ 36 ಜನರಿಗೆ ಕರೋನ ಸೊಂಕು ಅಂಟಿಕೊಂಡಿರುವ ಘಟನೆ  ಬಿಟಿಎಂ ಲೇಔಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.

      ಕಳೆದ ಒಂದು ವಾರದ ಹಿಂದೆ ನಡೆದ ಪಾರ್ಟಿಯಲ್ಲಿ ಭಾಗವಹಿಸಿದ್ದ 36 ಮಂದಿಯಲ್ಲಿ ಕರೋನ ಸೊಂಕು ಕಾಣಿಸಿಕೊಂಡಿದೆ ಎನ್ನಲಾಗಿದೆ. ಇನ್ನೂ ಅಪಾರ್ಟ್‌ಮೆಂಟ್‌ ಜಾಗಕ್ಕೆ ಬಿಬಿಎಂಪಿ ಅಧಿಕಾರಿಗಳು ತೆರಳಿದ್ದು, ಅಪಾರ್ಟ್‌ನ ಎಲ್ಲಾ ನಿವಾಸಿಗಳನ್ನು ತಪಾಸಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

     ಇನ್ನೂ ಸೋಂಕಿತ 36 ಮಂದಿ ಕೂಡ ಸೆಲ್ಫ್‌ ಕ್ವಾರೈಂಟೈನ್‌ ಆಗಲು ಮುಂದಾಗಿದ್ದು, ಆಸ್ಪತ್ರೆಗೆ ಹೋಗುವುದಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ ಅಂತ ತಿಳಿದು ಬಂದಿದೆ.

     ಇದೇ ವೇಳೆ ಅಪಾರ್ಟ್‌ಮೆಂಟ್‌ ಒಳಗೆ ಹೋಗುವ, ಬರುವ ಎಲ್ಲರೂ ಪ್ರತಿಯೊಂದು ಮಾಹಿತಿಯನ್ನು ನೀಡಬೇಕಾಗಿದೆ. ಇನ್ನೂ ಇಂದು ಸಂಜೆ ಇನ್ನೂ ಹಲವು ಮಂದಿಯ ಕೊರೋನ ಸೊಂಕಿನ ವರದಿ ಬರಲಿದ್ದು, ಅಪಾರ್ಟ್‌ಮೆಂಟ್‌ನಲ್ಲಿ ಭಯದ ವಾತವಾರಣ ನಿರ್ಮಾಣವಾಗಿದೆ.

     ಆ ಅಪಾರ್ಟ್‌ಮೆಂಟ್‌ನಲ್ಲಿ 475 ಫ್ಲ್ಯಾಟ್‌ಗಳಿದ್ದು, 2500ಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. ಅವರೊಂದಿಗೆ ಸಂಪರ್ಕದಲ್ಲಿದ್ದವರಿಗೆ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link