ಮಧುಗಿರಿ : ದ್ವಿಚಕ್ರ ವಾಹನ ಕಳ್ಳತನ ; ಓರ್ವ ಬಂಧನ

 ಮಧುಗಿರಿ :

      ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ 9 ಲಕ್ಷ ಬೆಲೆ ಬಾಳುವ 19 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಮಧುಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.

      ತಾಲ್ಲೂಕಿನ ವಿವಿಧೆಡೆ ಇತ್ತೀಚೆಗೆ ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳು ಹೆಚ್ಚಾಗಿದ್ದು, ಸಾರ್ವಜನಿಕರಿಗೆ ಹಾಗೂ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಎಸ್.ಪಿ ಡಾ.ವಂಶಿಕೃಷ್ಣ ಹಾಗೂ ಹೆಚ್ಚುವರಿ ಎಸ್‍ಪಿ ಟಿ.ಜೆ.ಉದೇಶ್ ರವರ ಸೂಚನೆಯಂತೆ ಮಧುಗಿರಿ ಡಿ.ಎಸ್.ಪಿ ಕೆ.ಜಿ. ರಾಮಕೃಷ್ಣ ರವರ ಮಾರ್ಗದರ್ಶನದಲ್ಲಿ ಮಧುಗಿರಿ ವೃತ್ತ ನಿರೀಕ್ಷಕರಾದ ಎಂ.ಎಸ್ ಸರ್ದಾರ್ ರವರ ನೇತೃತ್ವದಲ್ಲಿ ‘ಆಪರೇಷನ್ ಟು ವ್ಹೀಲರ್’ ಎಂಬ ತಂಡ ರಚಿಸಿದ್ದರು. ತಂಡದ ಮುಖಂಡತ್ವವನ್ನು ಪಿಎಸೈ ಮಂಗಳಗೌರಮ್ಮ ವಹಿಸಿದ್ದು, ಕಳ್ಳತನ ಮಾಡುತ್ತಿದ್ದ ಆಂಧ್ರ ಪ್ರದೇಶದ ಮಡಕಶಿರಾ ತಾಲ್ಲೂಕಿನ ರೊಳ್ಳೆ ಗ್ರಾಮದ ವಾಸಿ ಹಿದಾಯತ್(44) ಬಿನ್ ಖುದ್ದೂಸ್ ಸಾಬ್‍ನನ್ನು ಬಂಧಿಸಿದ್ದಾರೆ.

      ಪ್ರಕರಣ ಭೇಧಿಸುವಲ್ಲ್ಲಿ ಎ.ಎಸ್.ಐ ಎ.ರಾಮಾಂಜಿನಪ್ಪ, ಮುಖ್ಯ ಪೇದೆಗಳಾದ ಚಂದ್ರಮೋಹನ್, ಜಗನ್ನಾಥ್, ಶಿವರಾಂ, ಪೇದೆಗಳಾದ ದಿನೇಶನಾಯ್ಕ, ಸಾದಿಕ್ ಪಾಷ ಹಾಗೂ ವಾಹನ ಚಾಲಕ ಕಲ್ಲೇಶ್ ಭಾಗವಹಿಸಿದ್ದರು. ಸದರಿ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ.ಉದೇಶ್ ಅಭಿನಂದಿಸಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link